Asianet Suvarna News Asianet Suvarna News

ಮಂಡ್ಯದಲ್ಲಿ ಡಿ 9,10ಕ್ಕೆ ರಾಜ್ಯ ಜಾನಪದ ಸಮ್ಮೇಳನ

 ಕರ್ನಾಟಕ ಜನಪದ ಪರಿಷತ್‌, ಮಂಡ್ಯ ಜಿಲ್ಲಾ ಘಟಕದಿಂದ ಡಿ.9 ಹಾಗು 10ರಂದು ‘ಅಖಿಲ ಕರ್ನಾಟಕ ಜಾನಪದ ಸಮ್ಮೇಳನ’ ಮಂಡ್ಯದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಡಾ ರಾಮೇಗೌಡ (ರಾಗೌ) ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

state janapada Conference at Mandya on Dec 910 rav
Author
First Published Dec 6, 2022, 10:00 AM IST

ಬೆಂಗಳೂರು (ಡಿ.6) : ಕರ್ನಾಟಕ ಜನಪದ ಪರಿಷತ್‌, ಮಂಡ್ಯ ಜಿಲ್ಲಾ ಘಟಕದಿಂದ ಡಿ.9 ಹಾಗು 10ರಂದು ‘ಅಖಿಲ ಕರ್ನಾಟಕ ಜಾನಪದ ಸಮ್ಮೇಳನ’ ಮಂಡ್ಯದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಡಾ ರಾಮೇಗೌಡ (ರಾಗೌ) ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಡಿ.9ರಂದು ಬೆಳಗ್ಗೆ ಭವನದ ಆವರಣದಲ್ಲಿ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ನೆರವೇರಿಸಲಿದ್ದು, ನಾಡ ಧ್ವಜಾರೋಹಣವನ್ನು ಜಿಪಂ ಸಿಇಒ ಶಾಂತಾ ಹುಲ್ಮನಿ ನೆರವೇರಿಸುವರು. ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯಿಂದ ಅಂಬೇಡ್ಕರ್‌ ಭವನ ತಲುಪಲಿದ್ದು, ಹತ್ತಾರು ಜನಪದ ಕಲಾತಂಡಗಳು ಮೆರಗು ನೀಡಲಿವೆ.

ಕೊಡಗಿನಲ್ಲಿ ಅನಾವರಣಗೊಂಡ ಹಾಡಿ ಸಂಸ್ಕೃತಿ, ಶ್ರೀಮಂತ ಜಾನಪದ ಕಲೆಗಳ ಅನಾವರಣ

ಸಮಾರಂಭವನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸುವರು. ಕರ್ನಾಟಕ ಜನಪದ ಪರಿಷತ್ತಿನ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ ಆಶಯ ನುಡಿಯಾಡುವರು. ಯುವ ಸಬಲೀಕರಣ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಳಿಗೆ ಹಾಗೂ ವಸ್ತುಪ್ರದರ್ಶನವನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ ಉದ್ಘಾಟಿಸುವರು. ಆದಿಚುಂಚನಗಿರಿಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.

ಡಿ.10ರಂದು ಬೆಳಗ್ಗೆ ಜನಪದ ತೇರುಗಳ ಸಂಚಾರಕ್ಕೆ ಆದಿಚುಂಚನಗಿರಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡುವರು. ಪ್ರಸನ್ನನಾಥ ಸ್ವಾಮೀಜಿ ಪಾಲ್ಗೊಳ್ಳುವರು. ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಜನಪದ ವಿವಿ ವಿಶ್ರಾಂತ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಸಮಾರೋಪ ಭಾಷಣ ಮಾಡುವರು. ಸಂಸದೆ ಸುಮಲತಾ ಅಂಬರೀಷ್‌ ಭಾಗವಹಿಸಿ ಸ್ಮರಣಿಕೆ ಪ್ರದಾನ ಮಾಡುವರು. ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಲಿದ್ದಾರೆ. 

ಶಾಲೆಯಲ್ಲಿ ಜಾನಪದ ಹಾಡಿಗೆ ಪುಟಾಣಿಯ ಸಖತ್ ಡಾನ್ಸ್: ವಿಡಿಯೋ ವೈರಲ್

Follow Us:
Download App:
  • android
  • ios