ಶಾಲೆಯಲ್ಲಿ ಜಾನಪದ ಹಾಡಿಗೆ ಪುಟಾಣಿಯ ಸಖತ್ ಡಾನ್ಸ್: ವಿಡಿಯೋ ವೈರಲ್

ಸಮವಸ್ತ್ರ ತೊಟ್ಟುಕೊಂಡಿರುವ ಪುಟಾಣಿ ಬಾಲಕಿಯೊಬ್ಬಳು ರಾಜಸ್ಥಾನಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

little girl dance folksong video goes viral in social Media akb

ಸಮವಸ್ತ್ರ ತೊಟ್ಟುಕೊಂಡಿರುವ ಪುಟಾಣಿ ಬಾಲಕಿಯೊಬ್ಬಳು ರಾಜಸ್ಥಾನಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಕಿ ಸಖತ್ ಆಗಿ ಹೆಜ್ಜೆ ಹಾಕಿದ್ದಾಳೆ. ರಾಜಸ್ತಾನಿ ಹಾಡು 'ಮೆರಾ ಬಲ್ಮಾ ಬಡಾ ಸಯನ' ಎಂಬ ಹಾಡಿಗೆ ಬಾಲಕಿ ಬಿಂದಾಸ್ ಆಗಿ ಯಾವ ನರ್ತಕರಿಗೂ ಕಡಿಮೆ ಇಲ್ಲದಂತೆ ನರ್ತಿಸಿದ್ದಾಳೆ. 

ಗುಲ್ಜರ್ ಸಹಾಬ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ದೊಡ್ಡದಾದ ಶಾಲಾ ಮೈದಾನದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಸ್ಟೇಜ್ ಕೆಳಭಾಗದಲ್ಲಿ ನೂರಾರು ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುತ್ತಿದ್ದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದು, ಬಾಲಕಿಯ ಡಾನ್ಸ್‌ಗೆ ಅನೇಕರು ಫಿದಾ ಆಗಿದ್ದಾರೆ. ತುಂಬಾ ಚೆನ್ನಾಗಿ ಬಾಲಕಿ ನರ್ತಿಸುತ್ತಿದ್ದಾಳೆ. ತುಂಬಾ ಸುಂದರವಾಗಿದೆ. ತುಂಬಾ ಮುದ್ದಾಗಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಪುಟ್ಟ ಮಗುವಿನ ಡಾನ್ಸ್ ಬಹಳ ಚೆನ್ನಾಗಿದೆ. ಆಕೆಗೆ ಪ್ರೋತ್ಸಾಹವೂ ಚೆನ್ನಾಗಿದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ನಿನ್ನೆಯಷ್ಟೇ ವೃದ್ಧರೊಬ್ಬರು ತಮ್ಮ ಪತ್ನಿ ಮುಂದೆ ನರ್ತಿಸುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ವೃದ್ಧರೊಬ್ಬರು  ಪೂಜಾ ಹೆಗ್ಡೆ ಹಾಗೂ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾದ ಅರೇಬಿಕ್ ಕುಟ್ಟು ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುವ ಮೂಲಕ ಎಲ್ಲರಿಗೂ ಒಳ್ಳೆ ಮನೋರಂಜನೆ ನೀಡಿದ್ದರು. ದಳಪತಿ ವಿಜಯ್ (thalapathy Vijay) ಹಾಗೂ ಪೂಜಾ ಹೆಗ್ಡೆ (Puja Hegde) ಅಭಿನಯದ ತಮಿಳು ಸಿನಿಮಾ(Tamil Film) ಬೀಸ್ಟ್‌ ನ ಖ್ಯಾತ ಹಾಡು Halamithi Habibo... Halamithi Habibo.. ಹಾಡನ್ನು ಯಾರು ಕೇಳಿಲ್ಲ. ಹೇಳಿ ಈ ಹಾಡಿಗೆ ಹೆಜ್ಜೆ ಹಾಕದ ಜನರೇ ಇಲ್ಲ. ಹಾಗೆಯೇ ಈ ವೃದ್ಧರಿಗೂ ಹಾಡನ್ನು ಕೇಳಿ ಕುಣಿಯುವ ಆಸೆ ಆಗಿದ್ದು, ಪ್ರೀತಿಯ ಪತ್ನಿ ಮುಂದೆ ತಮ್ಮ ಡಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ವೃದ್ಧ ದಂಪತಿಯ ಪುತ್ರಿಯೇ ದೃಶ್ಯವನ್ನು ಸೆರೆ ಹಿಡಿದಿದ್ದಾಳೆ. ಇಳಿ ವಯಸ್ಸಿನಲ್ಲಿ ಅಪ್ಪನ ಹುರುಪು ಕಂಡು ಮಗಳು ಕೂಡ ನಗುತ್ತಲೇ ವಿಡಿಯೋ ಮಾಡುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ ಈ ವಿಡಿಯೋ ನಿನ್ನೆ ಸಾಕಷ್ಟು ವೈರಲ್ ಆಗಿತ್ತು.

ಜೊತೆಯಾಗಿ ಹಿತವಾಗಿ... ವೃದ್ಧ ದಂಪತಿ ಜೊತೆ ಸಾಗುವ ವಿಡಿಯೋ ವೈರಲ್

ಇದಕ್ಕೂ ಮೊದಲು ವಯಸ್ಸಾದ ಮಹಿಳೆಯೊಬ್ಬರು ಮದುವೆ ಸಮಾರಂಭವೊಂದರಲ್ಲಿ ಪಂಜಾಬಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕುತ್ತಿರುವ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಈ ಸಮಾರಂಭದಲ್ಲಿ ಮಹಿಳೆ ಯುವ ತರುಣರು ನಾಚಿಸುವಂತೆ ಪಂಜಾಬಿ ಹಾಡು ಡೋಲಿಡಾಗೆ ಡಾನ್ಸ್ ಮಾಡಿದ್ದರು. ಕೆಂಪು ಬಣ್ಣದ ಸೀರೆಯುಟ್ಟ ಅವರ ಸಖತ್ ಸ್ಟೆಪ್‌ಗೆ ಯುವಕರು ಸುತ್ತಲಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. 

ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ : ವಿಸಿಲ್ ಹೊಡೆದು ಹುರಿದುಂಬಿಸಿದ ತರುಣರು

Latest Videos
Follow Us:
Download App:
  • android
  • ios