Asianet Suvarna News Asianet Suvarna News

ಗೊಬ್ಬರ ದರ ನಿಗದಿಪಡಿಸಿದ ಕರ್ನಾಟಕ ಸರಕಾರ

* ಮೇ 20ರಿಂದಲೇ ನಿಗದಿತ ದರ ಜಾರಿ
* ಸೂಚಿತ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಿ
* ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರಿಂದ ಆದೇಶ
 

State Government Fixed Price Fertilizer in Karnataka grg
Author
Bengaluru, First Published May 23, 2021, 9:16 AM IST

ಕೊಪ್ಪಳ(ಮೇ.23): ಕೊನೆಗೂ ರಾಜ್ಯ ಸರ್ಕಾರ ರಸಗೊಬ್ಬರ ದರವನ್ನು ಅಧಿಕೃತವಾಗಿ ಪ್ರಕಟ ಮಾಡಿದೆ. ಏರಿಕೆಯಾಗಿದ್ದಕ್ಕೆ ಬ್ರೇಕ್‌ ಹಾಕಿ, ಕೇಂದ್ರ ಸರ್ಕಾರ ನೀಡಿದ ಸಬ್ಸಿಡಿ ಆಧಾರದಲ್ಲಿ ದರ ನಿಗದಿ ಮಾಡಿ, ಪ್ರಕಟ ಮಾಡಿದೆ. ಇದರಿಂದ ದರ ಏರಿಕೆಯ ಬಿಸಿಯಿಂದ ರೈತರು ಪಾರಾಗಿದ್ದಾರೆ.

ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ನೂತನ ದರವನ್ನು ಪ್ರಕಟ ಮಾಡಿದ್ದಾರೆ. ಅಧಿಕೃತವಾಗಿಯೇ ತಮ್ಮ ಪೇಸ್‌ಬುಕ್‌ ಖಾತೆ ಮತ್ತು ಟ್ವೀಟರ್‌ನಲ್ಲಿ ಹಂಚಿಕೆಕೊಂಡಿರುವ ಅವರು ರೈತರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ವಿವಿಧ ಕಂಪನಿಗಳ ರಸಗೊಬ್ಬರ ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಸಹಾಯಧನವನ್ನು ಆಧರಿಸಿ ಪ್ರಕಟಿಸಿದ್ದಾರೆ. ದರ ಹೆಚ್ಚಳ ಮಾಡಿದರೆ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಹಳೆ ದರವೇ ನಿಗದಿ:

ರಸಗೊಬ್ಬರ ದರ ಶೇಕಡಾ ಅರ್ಧದಷ್ಟುಏರಿಕೆಯಾಗಿತ್ತು. ಇದರಿಂದ ಕೃಷಿ ಸಮುದಾಯ ತತ್ತರಿಸಿ ಹೋಗಿತ್ತು. ಕೋವಿಡ್‌ ಹೊಡೆತದಿಂದ ದರ ಕುಸಿತದಿಂದ ಪೆಟ್ಟು ಅನುಭವಿಸುತ್ತಿದ್ದ ಸಮುದಾಯಕ್ಕೆ ರಸಗೊಬ್ಬರ ದರ ಏರಿಕೆ ಬರಸಿಡಿಲು ಬಡಿದಂತೆ ಆಗಿತ್ತು. ಆದರೆ, ಈಗ ಸಹಾಯಧನದ ಮರು ಹೊಂದಾಣಿಕೆ ಮಾಡಿ, ಏರಿಕೆಯಾದ ಅಷ್ಟೂಹೊರೆಯನ್ನು ಕೇಂದ್ರ ಸರ್ಕಾರವೇ ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ. ಹೀಗಾಗಿ, ಈ ಮೊದಲೇ ಇದ್ದ ದರದಲ್ಲಿಯೇ ರಸಗೊಬ್ಬರ ದರ ನಿಗದಿ ಮಾಡಲಾಗಿದೆ.

ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ; ರೈತರ ರಸಗೊಬ್ಬರ ಸಬ್ಸಿಡಿಯಲ್ಲಿ ಗಣನೀಯ ಏರಿಕೆ!

ಈ ಕುರಿತು ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟ ಮಾಡುವ ಮೂಲಕ ರೈತರಲ್ಲಿನ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಮಾರುಕಟ್ಟೆಯಲ್ಲಿ ಮೇ 20ರಿಂದಲೇ ನಿಗದಿಯಾದ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕು ಎಂದು ತಾಕೀತು ಮಾಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ದರದ ರಸಗೊಬ್ಬರ ಇದ್ದರೂ ಅದನ್ನು ನಿಗದಿ ಮಾಡಿದ ದರಕ್ಕಿಂತ ಅಧಿಕ ಹಣಕ್ಕೆ ಮಾರಾಟ ಮಾಡುವಂತೆಯೇ ಇಲ್ಲ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

20.5.2021 ರಿಂದ ನಿಗದಿಯಾದ ದರ

ಡಿಎಪಿ 1 8-46-0 .1200
ಎನ್‌ಪಿಕೆ 10.26.26 .1375
ಎನ್‌ಪಿಕೆ 12.32.16 .1310
ಎನ್‌ಪಿಕೆ 19.19.19 .1575
ಎನ್‌ಪಿ 28.28.0 .1475
ಎನ್‌ಪಿಕೆ 14.35.14 .1365

ರೈತರು ಪರಿಷ್ಕೃತ ದರದಂತೆಯೇ ರಸಗೊಬ್ಬರ ಖರೀದಿ ಮಾಡಬೇಕು. ಮಾರಾಟಗಾರರು ಸೂಚಿತ ದರದಲ್ಲಿಯೇ ಮಾರಾಟ ಮಾಡಬೇಕು. ನಿಯಮ ಮೀರಿ ದರ ಹೆಚ್ಚಿಸಿ ಅಥವಾ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.
 

Follow Us:
Download App:
  • android
  • ios