Asianet Suvarna News Asianet Suvarna News

ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ; ರೈತರ ರಸಗೊಬ್ಬರ ಸಬ್ಸಿಡಿಯಲ್ಲಿ ಗಣನೀಯ ಏರಿಕೆ!

  • ರೈತರ ರಸಗೊಬ್ಬರ ಸಬ್ಸಿಡಿಯಲ್ಲಿ ಗಣನೀಯ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
  • ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿ ಬರೋಬ್ಬರಿ 140% ಹೆಚ್ಚಾಗಿದೆ
  • ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ
Government takes historic pro-farmer decision of hiking fertilizer subsidy ckm
Author
Bengaluru, First Published May 19, 2021, 8:30 PM IST

ನವದೆಹಲಿ(ಮೇ.19): ಕೊರೋನಾ ವೈರಸ್ ಸಂಕಷ್ಟದಲ್ಲಿ ದಿನದೂಡುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ಮುಂಗಾರು ಆಗಮಿಸುವ ಮೊದಲೇ ಕೇಂದ್ರ ಸರ್ಕಾರ ರೈತರ ರಸಗೊಬ್ಬರ ಸಬ್ಸಡಿಯನ್ನು ಗಣನೀಯವಾಗಿ ಹೆಚ್ಚಿಸಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ಸಂಕಷ್ಟದಲ್ಲಿ ರೈತರ ಕೈಹಿಡಿದ PM ಕಿಸಾನ್; 8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ!.

ರಸಗೊಬ್ಬರಗಳ ಮೇಲಿನ ಪ್ರಸ್ತುತ ದರ ಮಾಹಿತಿ ಪಡೆದುಕೊಂಡ ಮೋದಿ, ಬೆಲೆ ಏರಿಕೆಯಿಂದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಿರುವುದನ್ನು ತಪ್ಪಿಸಲು ಮೋದಿ ನೇರವಾಗಿ ಸಬ್ಸಡಿ ದರ ಹೆಚ್ಚಿಸುವ ಐತಿಹಾಸಿಕ ನಿರ್ಧಾರ ಮಾಡಿದ್ದಾರೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಬೆಲೆಗಳು ಏರುತ್ತಿರುವುದರಿಂದ ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿದೆ.  ಆದರೆ  ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾದರೂ,  ರೈತರು ಹಳೆಯ ದರದಲ್ಲಿ ರಸಗೊಬ್ಬರಗಳನ್ನು ಪಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದು ಮೋದಿ ಹೇಳಿದರು.

Government takes historic pro-farmer decision of hiking fertilizer subsidy ckm

ಸಭೆ  ಬಳಿಕ ರೈತರ ಪರ ಐತಿಹಾಸಿಕ ನಿರ್ಧಾರವನ್ನು ಮೋದಿ ಪ್ರಕಟಿಸಿದ್ದಾರೆ. ಡಿಎಪಿ ಗೊಬ್ಬರದ ಸಬ್ಸಿಡಿಯನ್ನು ಶೇಕಡಾ 140ಕ್ಕೆ ಏರಿಕೆ ಮಾಡಲಾಗಿದೆ.  ಬೆಲೆ ಏರಿಕೆಯಾದರೂ ಈ ಹಿಂದೆ ರೈತರು 1,200 ರೂಪಾಯಿಯಲ್ಲಿ ಖರೀದಿಸುತ್ತದ್ದಂತೆ, ಈಗಲೂ ರಸಗೊಬ್ಬರ ಖರೀದಿ ಮಾಡಲು ಅವಕಾಶ ಮಾಡಲಾಗಿದೆ. 

ರೈತರಿಗೆ ಗುಡ್‌ನ್ಯೂಸ್: ಅನ್ನದಾತರಿಗೆ ಬೆನ್ನೆಲುಬಾಗಿ ನಿಂತ ಕೃಷಿ ಇಲಾಖೆ

ಕಳೆದ ವರ್ಷ ಡಿಎಪಿ ರಸಗೊಬ್ಬರದ ನೈಜ ಬೆಲೆ ಪ್ರತಿ ಚೀಲಕ್ಕೆ 1,700 ರೂಪಾಯಿ. ಈ ವೇಳೆ ಕೇಂದ್ರ ಸರ್ಕಾರ 500 ರೂಪಾಯಿ ಸಬ್ಸಡಿ ನೀಡಿತ್ತು. ಹೀಗಾಗಿ ರೈತರಿಗೆ 1,200 ರೂಪಾಯಿಗಳಿಂದ ಲಭ್ಯವಾಗಿತ್ತು. ಇದೀಗ ಬೆಲೆ ಏರಿಕೆಯಿಂದ ಡಿಎಪಿ ರಸಗೊಬ್ಬರ ಬೆಲೆ ಪ್ರತಿ ಚೀಲಕ್ಕೆ 1,900 ರೂಪಾಯಿ ಆಗಿದೆ. ಆದರೆ ಈಗಲೂ 1,200 ರೂಪಾಯಲ್ಲಿ ಲಭ್ಯವಾಗಲಿದೆ. ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ.

ಡಿಎಪಿಯಲ್ಲಿ ರಸಗೊಬ್ಬರದಲ್ಲಿ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು 60% ರಿಂದ 70% ಕ್ಕೆ ಏರಿದೆ. ಆದ್ದರಿಂದ ಡಿಎಪಿ ಚೀಲದ ನಿಜವಾದ ಬೆಲೆ ಈಗ 2400 ರೂ., ಇದನ್ನು ರಸಗೊಬ್ಬರ ಕಂಪೆನಿಗಳು 500 ರೂ.ಗಳ ಸಬ್ಸಿಡಿಯನ್ನು ಪರಿಗಣಿಸಿ 1900 ರೂ.ಗೆ ಮಾರಾಟ ಮಾಡಬಹುದು. ಇಂದಿನ ನಿರ್ಧಾರದೊಂದಿಗೆ, ರೈತರು 1200 ರೂ.ಗೆ ಡಿಎಪಿ ಚೀಲವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.

Government takes historic pro-farmer decision of hiking fertilizer subsidy ckm

ಬೆಲೆ ಏರಿಕೆಯಾದರೂ ರೈತರು ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಮುಂಗಾರು ಆಗಮಿಸುತ್ತಿದ್ದಂತೆ ರೈತರು ಮತ್ತಷ್ಟು ಆತಂಕ, ಭೀತಿ ಎದುರಿಸಬೇಕಿಲ್ಲ. ರೈತರ ಬೆಲೆ ಏರಿಕೆ ಬಿಸಿ ರೈತರಿಗೆ ತಟ್ಟಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.  ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಪ್ರತಿ ವರ್ಷ ಸುಮಾರು 80,000 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಇದೀಗ ಬೆಲೆ ಹೆಚ್ಚಳದಿಂದ ಹೆಚ್ಚುವರಿ 14,775 ಕೋಟಿ ರೂಪಾಯಿ ತೆಗೆದಿಟ್ಟಿದೆ.

ಅಕ್ಷಯ ತೃತೀಯ ದಿನ ರೈತರ ಖಾತೆಗೆ ನೇರವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ವರ್ಗಾಯಿಸಲಾಗಿತ್ತು. 20,667 ಕೋಟಿ ರೂಪಾಯಿ ರೈತರಿಗೆ ನೀಡಿದ ಕೇಂದ್ರ ಸರ್ಕಾರ, ಇದೀಗ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. 

Follow Us:
Download App:
  • android
  • ios