2023-24ನೇ ಸಾಲಿನ ರಾಜ್ಯ ಸರ್ಕಾರದ ಬಜೆ​ಟ್‌ನ್ನು ಶುಕ್ರ​ವಾರ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಮಂಡಿ​ಸಿ​ದ್ದು, ಗದಗ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತ ಯೋಜನೆ ಘೋಷಿಸದಿದ್ದರೂ ಕುಂಟುತ್ತ ಸಾಗಿದ್ದ ಹಳೆಯ ಯೋಜನೆಗಳಿಗೆ ಬಲ ತುಂಬಿದ್ದಾರೆ.

ಗದಗ (ಫೆ.18) : 2023-24ನೇ ಸಾಲಿನ ರಾಜ್ಯ ಸರ್ಕಾರದ ಬಜೆ​ಟ್‌ನ್ನು ಶುಕ್ರ​ವಾರ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಮಂಡಿ​ಸಿ​ದ್ದು, ಗದಗ ಜಿಲ್ಲೆಗೆ ಯಾವುದೇ ಹೇಳಿಕೊಳ್ಳುವಂತ ಯೋಜನೆ ಘೋಷಿಸದಿದ್ದರೂ ಕುಂಟುತ್ತ ಸಾಗಿದ್ದ ಹಳೆಯ ಯೋಜನೆಗಳಿಗೆ ಬಲ ತುಂಬಿದ್ದಾರೆ.

ಗದಗ(Gadag) ಸೇರಿದಂತೆ ಉತ್ತರ ಕರ್ನಾಟಕ(North Karnataka) ಭಾಗದ 4 ಜಿಲ್ಲೆ 11 ತಾಲೂಕುಗಳಿಗೆ ಅನುಕೂಲವಾಗುವ ಮಹದಾಯಿ ಯೋಜನೆ(Mahadayi project)ಗೆ .1000 ಕೋಟಿ ಮೀಸಲಿಟ್ಟಿರುವುದು ಮಹದಾಯಿ ಹೋರಾಟಗಾರರು ಮತ್ತು ಮಲಪ್ರಭಾ ಅಚ್ಚುಕಟ್ಟು ರೈತರಲ್ಲಿ ಹರ್ಷ ತಂದಿದೆ. ಪಿಎಂ ಅಭಿಂ ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸುವ ಸಲುವಾಗಿ ಗದಗ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ… ಕೇರ್‌ ಬ್ಲಾಕ್‌ ಸ್ಥಾಪನೆಗೆ ಹಾಗೂ ಶಿರಹಟ್ಟಿಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆ ಏರಿಸುವ ಘೋಷನೆ ಮಾಡಿದ್ದಾರೆ.

ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್‌: ಸಿದ್ದರಾಮಯ್ಯ

ರೈಲು ಯೋಜನೆಗೆ ವೇಗ:

ಗದ​ಗ-ವಾಡಿ ರೈಲ್ವೆ ಮಾರ್ಗಕ್ಕೆ .200 ಕೋಟಿ ಹಾಗೂ ಗದ​ಗ-ಹೋಟಗಿ ಡಬ್ಲಿಂಗ್‌ ಕಾಮ​ಗಾ​ರಿಗೆ ಬಜೆ​ಟ್‌​ನಲ್ಲಿ .170 ಕೋಟಿ ಮೀಸ​ಲಿ​ಟ್ಟಿ​ದೆ.​ ಇನ್ನು​ಳಿ​ದಂತೆ ಸಾಮಾ​ನ್ಯ​ವಾಗಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ​ಗಳ ನಿರ್ಮಾ​ಣ, ಅತಿ ಹೆಚ್ಚು ದಾಖ​ಲಾತಿ ಹೊಂದಿ​ರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿ​ಟೆಕ್ನಿಕ್‌ಗಳಿಗೆ ವೃದ್ಧಿ ಯೋಜನೆ ಅಡಿ .2 ಕೋಟಿ ವೆಚ್ಚ​ದಲ್ಲಿ ಅಗತ್ಯ ಸೌಲ​ಭ್ಯ​ಗ​ಳನ್ನು ಒದ​ಗಿಸಿ ಉನ್ನತ ಶಿಕ್ಷಣ ಸಂಸ್ಥೆ​ಗ​ಳ​ನ್ನಾಗಿಸುವ ಗುರಿ ಹೊಂದಿದ್ದಾರೆ.

ಕೈಗಾರಿಕೆ ಬರಲಿಲ್ಲ:

ಪ್ರಸಕ್ತ ಬಜೆ​ಟ್‌​ನಲ್ಲಿ ಗದಗ ಜಿಲ್ಲೆಯಲ್ಲಿ ಬೃಹತ್‌ ಕೈಗಾ​ರಿಕೆ ಸ್ಥಾಪನೆ ಮಾಡಲು ಹಲವು ಕಂಪ​ನಿ​ಗಳು ಮುಂದು ಬಂದಿದ್ದು, ಅದ​ಕ್ಕಾಗಿ ಬಜೆ​ಟ್‌​ನಲ್ಲಿ ಪೂರಕ ಅಂಶ​ಗಳು ಘೋಷ​ಣೆ​ಯಾ​ಗ​ಬ​ಹುದು ಎಂಬ ನಿರೀ​ಕ್ಷೆ​ಯನ್ನು ಜಿಲ್ಲೆಯ ಜನತೆ ಹೊಂದಿ​ದ್ದರು. ಪುಣೆ-ಬೆಂಗ​ಳೂರು ಎಕ್ಸ್‌​ಪ್ರೆಸ್‌ ಹೈವೇಗೆ ಕೇಂದ್ರ ಸರ್ಕಾರ ಡಿಪಿ​ಆರ್‌ ಸಿದ್ಧತೆ ಮಾಡಿ​ದೆ. ಈ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಹಿನ್ನೆ​ಲೆ​ಯಲ್ಲಿ ಇದಕ್ಕೆ ವಿಶೇಷ ಭೂ ಸ್ವಾಧೀನ​ಕ್ಕಾ​ಗಿ ಅನು​ದಾ​ನ ಬಿಡುಗಡೆಯಾಗಬೇಕಿತ್ತು. ಅದು ಆಗಿಲ್ಲ.

ರಾಜ್ಯ​ದ​ಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆ​ಯುವ ಜಿಲ್ಲೆ​ಯಾ​ಗಿ​ರುವ ಗದ​ಗ​ನಲ್ಲಿ ಈರುಳ್ಳಿ ಸಂಸ್ಕ​ರಣಾ ಘಟಕ ಮತ್ತು ಸಂಗ್ರ​ಹಕ್ಕೆ ಶೈತ್ಯಾ​ಗಾ​ರ​ಗಳು, ಅಕ್ಕ​ಪಕ್ಕ ರಾಜ್ಯ​ಗ​ಳಲ್ಲಿ ಅತ್ಯಂತ ಬೇಡಿಕೆ ಇರುವ ಮೆಣ​ಸಿ​ನ​ಕಾಯಿ ಬೆಳೆ​ಯುವ ಹಿನ್ನೆ​ಲೆ​ಯಲ್ಲಿ ಜಿಲ್ಲೆಯಲ್ಲಿ ಮೆಣ​ಸಿ​ನ​ಕಾಯಿ ಸಂಗ್ರ​ಹ​ಗಾ​ರ​ಗಳು, ಅದ​ಕ್ಕಾಗಿ ಬ್ಯಾಡಗಿ ಮಾರು​ಕ​ಟ್ಟೆ​ಯಂತೆ ವಿಶೇಷ ಅಭಿ​ವೃ​ದ್ಧಿಗೆ ಸರ್ಕಾರ ವಿಶೇಷ ಅನು​ದಾನ ನೀಡುವ ವಿಶ್ವಾಸ ಹುಸಿ​ಯಾ​ಗಿ​ದೆ.

ಕುಮಾರಸ್ವಾಮಿ ಸಿಎಂ ಆಗುವ ಆಸೆ ಈಡೇರೋದಿಲ್ಲ; ಸಚಿವ ಸಿ.ಸಿ.ಪಾಟೀಲ್

ಹನಿ ನೀರಾವರಿ...

ಗದಗ ಜಿಲ್ಲೆ​ಯಲ್ಲಿ ಇಸ್ರೇಲ್‌ ಮಾದ​ರಿ​ಯ ಹನಿ ನೀರಾ​ವರಿ(Israel model of drip irrigation) ಕೃಷಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಿಂಗ​ಟಾ​ಲೂರ ಏತ ನೀರಾ​ವರಿ ಯೋಜ​ನೆæಯನ್ನೇ ಬಳಕೆ ಮಾಡಿ​ಕೊ​ಳ್ಳುವ ಯೋಜನೆ ಅನುಷ್ಠಾನವಾಗಿದ್ದು, ಈಗ ಪ್ರಾಥ​ಮಿಕ ಹಂತ​ದಲ್ಲಿದಲ್ಲಿದೆ. ಅದು ಸಂಪೂ​ರ್ಣ​ವಾಗಿ ವಿಸ್ತಾ​ರ​ಗೊ​ಳ್ಳ​ಲು ಹೆಚ್ಚಿನ ಅನು​ದಾನ ಬೇಕಿದೆ. ಈ ಹಿಂದೆ ಇದೇ ಯೋಜನೆಯ ಅನು​ಷ್ಠಾನ ಮಾಡುವ ಸಂದ​ರ್ಭ​ದಲ್ಲಿ ಸಚಿ​ವ​ರಾ​ಗಿದ್ದ ಬೊಮ್ಮಾಯಿ ಅವರು ಈಗ ಸಿಎಂ ಆಗಿ​ದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಯ ಜನರು ಅನುದಾನ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದರು. ಅದೂ ಈ ಬಜೆಟ್‌ನಲ್ಲಿ ಸೇರ್ಪಡೆಯಾಗಿಲ್ಲ.