MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ರೋಹಿಣಿ ಸಿಂಧೂರಿ Vs ರೂಪಾ ಮೌದ್ಗಿಲ್: ಐಎಎಸ್-ಐಪಿಎಸ್ ಅಧಿಕಾರಿಗಳ ಹೈವೋಲ್ಟೇಜ್ ಸಮರದ ಅಂತಿಮ ತೀರ್ಪು ಇಂದು!

ರೋಹಿಣಿ ಸಿಂಧೂರಿ Vs ರೂಪಾ ಮೌದ್ಗಿಲ್: ಐಎಎಸ್-ಐಪಿಎಸ್ ಅಧಿಕಾರಿಗಳ ಹೈವೋಲ್ಟೇಜ್ ಸಮರದ ಅಂತಿಮ ತೀರ್ಪು ಇಂದು!

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಕಾನೂನು ಸಮರವು ಮಹತ್ವದ ಘಟ್ಟ ತಲುಪಿದೆ. ತಮ್ಮ ವಿರುದ್ಧ ರೂಪಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ಅಂತಿಮ ತೀರ್ಪನ್ನು ಹೈಕೋರ್ಟ್ ಇಂದು ಪ್ರಕಟಿಸಲಿದೆ.

1 Min read
Author : Santosh Naik
Published : Feb 21 2026, 12:16 PM IST
Share this Photo Gallery
  • FB
  • TW
  • Linkdin
  • Whatsapp
16
ರೋಹಿಣಿ ಸಿಂಧೂರಿ Vs ರೂಪಾ ಮೌದ್ಗಿಲ್
Image Credit : X

ರೋಹಿಣಿ ಸಿಂಧೂರಿ Vs ರೂಪಾ ಮೌದ್ಗಿಲ್

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ಕಾನೂನು ಸಮರದ ಮಹತ್ವದ ತೀರ್ಪು ಇಂದು ಹೈಕೋರ್ಟ್‌ ನೀಡಲಿದೆ.

26
ಹೈಕೋರ್ಟ್‌ನಿಂದ ಇಂದು ಮಹತ್ವದ ಆದೇಶ
Image Credit : X

ಹೈಕೋರ್ಟ್‌ನಿಂದ ಇಂದು ಮಹತ್ವದ ಆದೇಶ

ಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಇಂದು (ಫೆಬ್ರವರಿ 21) ಮಧ್ಯಾಹ್ನ 1.15ಕ್ಕೆ ಪ್ರಕಟಿಸಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಆದೇಶವನ್ನು ನೀಡಲಿದೆ.

Related Articles

Related image1
ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್‌ ಮಾಡಲು ರೂಪಾಗೆ 24 ಗಂಟೆ ಟೈಂ ನೀಡಿದ ಸುಪ್ರೀಂ
Related image2
ಐಎಎಸ್ Vs ಐಪಿಎಸ್: ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ದೂರು ದಾಖಲಿಸಿದ ಡಿ.ರೂಪಾ!
36
ವಿವಾದದ ಹಿನ್ನೆಲೆ
Image Credit : X

ವಿವಾದದ ಹಿನ್ನೆಲೆ

2023ರ ಫೆಬ್ರವರಿಯಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಖಾಸಗಿ ದೂರು (PCR) ದಾಖಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಅವರು ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂಬುದು ರೂಪಾ ಅವರ ಪ್ರಮುಖ ಆರೋಪವಾಗಿದೆ.

46
ರೋಹಿಣಿ ಸಿಂಧೂರಿ ಅವರ ಪೋಸ್ಟ್‌ನಲ್ಲಿ ಏನಿತ್ತು?
Image Credit : X

ರೋಹಿಣಿ ಸಿಂಧೂರಿ ಅವರ ಪೋಸ್ಟ್‌ನಲ್ಲಿ ಏನಿತ್ತು?

"ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ. ರೂಪಾ ಅವರು ಮಾನಸಿಕ ಸ್ವಾಸ್ಥ್ಯ ಮತ್ತು ಸ್ಥಿಮಿತತೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ಮತ್ತು ದ್ವೇಷಿಸುವವರ ವಿರುದ್ಧ ಹಗೆ ಸಾಧಿಸಲು ಆಧಾರರಹಿತ ಆರೋಪ ಮಾಡುವುದು ಅವರಿಗೆ ಅಭ್ಯಾಸವಾಗಿದೆ" ಎಂದು ರೋಹಿಣಿ ಪೋಸ್ಟ್ ಮಾಡಿದ್ದರು. ಜೊತೆಗೆ ಡಿ. ರೂಪಾಗೆ 'ಗೆಟ್ ವೆಲ್ ಸೂನ್' (Get Well Soon) ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದರು.

56
ಡಿ. ರೂಪಾ ಅವರ ವಾದವೇನು?
Image Credit : X

ಡಿ. ರೂಪಾ ಅವರ ವಾದವೇನು?

ಈ ಪೋಸ್ಟ್‌ಗಳ ಮೂಲಕ ತಮ್ಮನ್ನು 'ಮಾನಸಿಕ ಅಸ್ವಸ್ಥೆ' ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಇದರಿಂದಾಗಿ ಸರ್ಕಾರವು ತಮಗೆ ಹಲವು ತಿಂಗಳುಗಳಿಂದ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ತೀವ್ರ ಮಾನಸಿಕ ನೋವು ಉಂಟಾಗಿದೆ ಎಂದು ಡಿ. ರೂಪಾ ನ್ಯಾಯಾಲಯದ ಮೊರೆ ಹೋಗಿದ್ದರು.

66
ಕಾನೂನು ಹೋರಾಟದ ಸದ್ಯದ ಸ್ಥಿತಿ
Image Credit : X

ಕಾನೂನು ಹೋರಾಟದ ಸದ್ಯದ ಸ್ಥಿತಿ

ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ, ಈ ವಿಚಾರಣೆಯನ್ನು ರದ್ದುಗೊಳಿಸುವಂತೆ ರೋಹಿಣಿ ಸಿಂಧೂರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಮಧ್ಯಾಹ್ನ ಅಂತಿಮ ಆದೇಶ ಹೊರಬೀಳಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕರ್ನಾಟಕ ಸುದ್ದಿ
ಡಿ. ರೂಪಾ ಐಪಿಎಸ್
ಸುದ್ದಿ
ಹೈಕೋರ್ಟ್
ಕರ್ನಾಟಕ ಸರ್ಕಾರ

Latest Videos
Recommended Stories
Recommended image1
Koppal: ದರ್ಗಾಕ್ಕೆ ರಸ್ತೆ ನಿರ್ಮಿಸಲು ಕೆರೆ ಒತ್ತುವರಿ, ರಾತ್ರೋರಾತ್ರಿ ನೀರು ಹೊರಕ್ಕೆ, ಅಧಿಕಾರಿಗಳ ಮೌನಕ್ಕೆ ಬಿಜೆಪಿ ಆಕ್ರೋಶ
Recommended image2
ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ: ಮತ್ತೊಬ್ಬ ಪೇದೆಯ ಕರಾಳ ಮುಖ ಬಿಚ್ಚಿಟ್ಟ ಸಂದೇಶ
Recommended image3
ಹಣದ ಆಸೆ ಬೇಡ, ಉಗ್ರನ ಮಾಹಿತಿ ಇದ್ದಲ್ಲಿ NIAಗೆ ನೀಡಿ: ಮುಸ್ಲಿಮರಿಗೆ ಸಂದೇಶ ನೀಡಿದ ಇಮಾಮ್‌
Related Stories
Recommended image1
ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್‌ ಮಾಡಲು ರೂಪಾಗೆ 24 ಗಂಟೆ ಟೈಂ ನೀಡಿದ ಸುಪ್ರೀಂ
Recommended image2
ಐಎಎಸ್ Vs ಐಪಿಎಸ್: ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ದೂರು ದಾಖಲಿಸಿದ ಡಿ.ರೂಪಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved