- Home
- Karnataka Districts
- ಕಪ್ಪಾಗುತ್ತಿದೆ ಜಪಾವತಿ; ಸಾಯುತ್ತಿದೆ ಜಲಚರ: ಕಾಫಿ ತೋಟಗಳ ಮಾಲೀಕರ ಬೇಜವಾಬ್ದಾರಿಗೆ ಜನರ ಆಕ್ರೋಶ
ಕಪ್ಪಾಗುತ್ತಿದೆ ಜಪಾವತಿ; ಸಾಯುತ್ತಿದೆ ಜಲಚರ: ಕಾಫಿ ತೋಟಗಳ ಮಾಲೀಕರ ಬೇಜವಾಬ್ದಾರಿಗೆ ಜನರ ಆಕ್ರೋಶ
ಹೇಮಾವತಿ ಉಪನದಿಯಾದ ಜಪಾವತಿಗೆ ಕಾಫಿ ಸಂಸ್ಕರಿಸಿದ ಪಲ್ಫರ್ ನೀರು ಸೇರುತ್ತಿರುವುದರಿಂದ ನೀರು ವಿಷಯುಕ್ತವಾಗಿದೆ. ಇದರಿಂದ ಜಲಚರಗಳು ಸಾವನ್ನಪ್ಪುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

ಕಾಫಿ ಸಂಸ್ಕರಿಸಿದ ಪಲ್ಫರ್ ನೀರು
ಹೇಮಾವತಿಯ ಉಪನದಿಯಾಗಿರುವ ಜಪಾವತಿಗೆ ಕಾಫಿ ಸಂಸ್ಕರಿಸಿದ ಪಲ್ಫರ್ ನೀರು ಸೇರ್ಪಡೆಯಾಗುತ್ತಿರೋದಕ್ಕೆ ಮಲೆನಾಡಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ವ್ಯಾಪ್ತಿಯಲ್ಲಿ ಜಪಾವತಿ ನದಿ ಹರಿಯುತ್ತದೆ.
ನೀರು ವಿಷಯುಕ್ತ
ನದಿಗೆ ಕಾಫಿ ಪಲ್ಫರ್ ಸೇರ್ಪಡೆಯಾಗುತ್ತಿರುವ ಹಿನ್ನೆಲೆ ನೀರು ವಿಷಯುಕ್ತವಾಗುತ್ತಿದೆ. ಇದರಿಂದಾಗಿ ನದಿಯಲ್ಲಿನ ಜಲಚರಗಳು ಸಾವನ್ನಪ್ಪುತ್ತಿವೆ. ಮೂಡಿಗೆರೆ-ಸಕಲೇಶಪುರ ತಾಲೂಕಿನ ಗಡಿಯುದ್ದಕ್ಕೂ ಜಪಾವತಿ ನದಿ ಹರಿಯುತ್ತದೆ. ನದಿ ಇಕ್ಕೆಲಗಳ ತೋಟದಿಂದ ಜಪಾವತಿ ನದಿಗೆ ಕಾಫಿ ಪಲ್ಪರ್ ನೀರು ಸೇರ್ಪಡೆಯಾಗುತ್ತಿದೆ.
ಹೇಮಾವತಿ ನದಿ
ಕಿರುಗುಂದ, ಉದುಸೆ, ಹೊತ್ತಿಕೆರೆ, ಹೆಗ್ಗರವಳ್ಳಿ, ಚಿಕ್ಕೂಡಿಗೆ ಸೇರಿ ಹಲವು ಹಳ್ಳಿಗಳಿಗೆ ಜಪಾವತಿ ನದಿಯೇ ನೀರಿನ ಪ್ರಮುಖ ಮೂಲವಾಗಿದೆ. ಚಿಕ್ಕಮಗಳೂರು-ಹಾಸನ ಗಡಿಯಲ್ಲಿ ಹೇಮಾವತಿ ನದಿಯನ್ನು ಜಪಾವತಿ ಸೇರ್ಪಡೆಯಾಗುತ್ತದೆ.
ಇದನ್ನೂ ಓದಿ: ಹಳಿ ತಪ್ಪಿತಾ ಕರ್ನಾಟಕದ ಅಷ್ಟೂ ರೈಲ್ವೆ ಯೋಜನೆಗಳು! ಭೂಸ್ವಾಧೀನ ಮಾಡಿಕೊಳ್ಳೋದೇ ದೊಡ್ಡ ಸವಾಲು, ಇಲ್ಲಿದೆ ಲಿಸ್ಟ್
ಕುಡಿಯುವ ನೀರಿಗೆ ಸಮಸ್ಯೆ
ಪಲ್ಫರ್ ಸೇರ್ಪಡೆಯಾಗಿದ್ದರಿಂದ ನದಿ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಪಲ್ಪರ್ ನೀರು ಬಿಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮಲೆನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ಮಿಸ್ಸಿಂಗ್! ಅಧಿಕಾರಿಗಳಿಗೆ ಜ್ವರ ಬರೋದೊಂದೇ ಬಾಕಿ

