ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ ಭಕ್ತನ ಪಾಲಾಯ್ತು 2 ಲಕ್ಷ ರೂಪಾಯಿ

ಅದು ಗಡಿ ಜಿಲ್ಲೆ ಚಾಮರಾಜನಗರದ ಶ್ರೀಮಂತ ದೇವರು. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಹರಕೆ ಕಟ್ಟಿಕೊಂಡು ಹುಂಡಿಗೂ ಹಣ ಹಾಕ್ತಾರೆ. ಆದ್ರೆ ಇಲ್ಲಿನ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದ 2.19 ಲಕ್ಷ ರೂ ಹಣವಿದ್ದ ಚೀಲ ಭಕ್ತನ ಪಾಲಾಗಿದೆ.

staff gave 2 lakh rupees with laddu prasada to devotee in male mahadeshwara temple in chamarajanagar gvd

ವರದಿ: ಪುಟ್ಟರಾಜು. ಆರ್.ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜು.29): ಅದು ಗಡಿ ಜಿಲ್ಲೆ ಚಾಮರಾಜನಗರದ ಶ್ರೀಮಂತ ದೇವರು. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಹರಕೆ ಕಟ್ಟಿಕೊಂಡು ಹುಂಡಿಗೂ ಹಣ ಹಾಕ್ತಾರೆ. ಆದ್ರೆ ಇಲ್ಲಿನ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದ 2.19 ಲಕ್ಷ ರೂ ಹಣವಿದ್ದ ಚೀಲ ಭಕ್ತನ ಪಾಲಾಗಿದೆ. ಚೀಲವನ್ನು ಕೈಯಲ್ಲಿ ಹಿಡಿದು ಬರುತ್ತಿರುವ ವ್ಯಕ್ತಿ. ನಂತರ ಚೀಲವನ್ನು ನೋಡಿಕೊಂಡು ಏನೂ ಗೊತ್ತಿಲ್ಲದಂತೆ ನಡೆದಕೊಂಡು ಹೋಗುತ್ತಿರುವ ಈತ ಮಲೆಮಹದೇಶ್ವರ ಸ್ವಾಮಿಯ ಭಕ್ತ‌. 

ಹೌದು! ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನಾಲೂ ಸಾವಿರಾರು ಭಕ್ತರು ಬರುತ್ತಾರೆ. ಅದರಲ್ಲೂ ಅಮಾವಾಸ್ಯೆ ದಿನದಂದ ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಾನಕ್ಕೆ ಹರಿದು ಬರುತ್ತಾರೆ‌. ಗುರುವಾರ ಭೀಮನ ಅಮಾವಾಸ್ಯೆ ಆಗಿದ್ದರಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕೆ ಬಂದಿದ್ದರು. ಈ ವೇಳೆ ವಿಶೇಷ ದರ್ಶನ ಮುಗಿಸಿ ಸೇವಾ ಕೌಂಟರ್‌ಗೆ ಬಂದ ಭಕ್ತನಿಗೆ ಇಲ್ಲಿನ ಸಿಬ್ಬಂದಿ ಆಚಾತುರ್ಯವಾಗಿ ಲಾಡು ಪ್ರಸಾದದ ಜೊತೆ 2 ಲಕ್ಷ ಹಣವಿದ್ದ ಬ್ಯಾಗ್ ನೀಡಿದ್ದಾರೆ. 

ಶಾಲಾ ಕ್ಯಾಂಪಸ್‌ಗೆ ನುಗ್ಗಿದ ಕಾಡಾನೆ: ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು..!

ಸಿಬ್ಬಂದಿ ಕೆಲಸದ ಒತ್ತಡದಿಂದ ಲಾಡು ಪ್ರಸಾದದ ಜೊತೆಗೆ ಹಣವಿದ್ದ ಬ್ಯಾಗ್ ಅನ್ನು ನೀಡಿದ್ದಾರೆ. ಈ ಬ್ಯಾಗನ್ನು ತೆಗೆದುಕೊಂಡ ಭಕ್ತ ನಾಲ್ಕೈದು ಹೆಜ್ಜೆ ಮುಂದೆ ಹೋಗಿ ಬ್ಯಾಗ್ ಒಳಗೆ ನೋಡಿದ್ದಾನೆ. ಅದರಲ್ಲಿ ಹಣವಿರುವುದನ್ನೂ ನೋಡಿದ್ರೂ ಅದನ್ನು ವಾಪಸ್ ಕೊಡದೇ ಹಾಗೇಯೇ ಹೋಗಿದ್ದಾನೆ. ಹಣವಿದ್ದ ಬ್ಯಾಗ್‌ ಅನ್ನು ಭಕ್ತ ಗಮನಿಸಿದರೂ ಕೂಡ ಹಣ ಹಿಂದುರುಗಿಸದೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ. 

ಸಚಿವ ವಿ.ಸೋಮಣ್ಣ ಅಭಿಮಾನಿಗಳಿಂದ ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯ ಕೊಡುಗೆ

ಈ ದೃಶ್ಯಾವಳಿ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಸದ್ಯ ಭಕ್ತನ ವಿರುದ್ಧ ಮಲೆಮಹದೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ತೆಗೆದುಕೊಂಡು ಹೋದ ಭಕ್ತನ ಹುಡುಕಾಟದಲ್ಲಿ ತೊಡಗಿದ್ದಾರೆ. ಒಟ್ಟಾರೆ ಮಾದಪ್ಪನ ದರ್ಶನಕ್ಕೆ ಬಂದು ಅಚಾತುರ್ಯವಾಗಿ ಸಿಬ್ಬಂದಿ ನೀಡಿದ ಹಣದ ಬ್ಯಾಗನ್ನು ನೋಡಿಯೂ ವಾಪಸ್ ತಿರುಗಿಸದೇ ಹೋದದ್ದು ಮಾತ್ರ ಸೋಜಿಗದ ಸಂಗತಿ.

Latest Videos
Follow Us:
Download App:
  • android
  • ios