ಶಾಲಾ ಕ್ಯಾಂಪಸ್‌ಗೆ ನುಗ್ಗಿದ ಕಾಡಾನೆ: ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು..!
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ನಡೆದ ಘಟನೆ
ಯಳಂದೂರು(ಜು.28): ಕಾಡಾನೆಯೊಂದು ಶಾಲೆ ಕಾಂಪೌಂಡ್‌ನೊಳಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ನಡೆದಿದೆ. ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಆನೆಯು ಇಲ್ಲಿನ ತಂತಿಬೇಲಿಯನ್ನು ಕಿತ್ತು ಶಾಲೆಯ ಕ್ಯಾಂಪಸ್ ಒಳಗೆ ಪ್ರವೇಶಿಸಿದೆ. ಮೋಟರ್ ಸ್ವಿಚ್ ಹಾಕಲು ತೆರಳಿದ್ದ ಇಲ್ಲಿನ ಸಿಬ್ಬಂದಿ ಇದನ್ನು ನೋಡಿ ಆತಂಕಗೊಂಡಿದ್ದರು.
ತಕ್ಷಣ ಈ ಬಗ್ಗೆ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದು ಶಿಕ್ಷಕರು ಶಾಲಾ ಮಕ್ಕಳನ್ನು ಕೊಠಡಿ ಒಳಗೆ ಇರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಏರ್‌ಗನ್, ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
Chamarajanagar; ರೈತನ ಕಣ್ಣಲ್ಲಿ ನೀರು ತರಿಸ್ತಿದೆ ಸಣ್ಣೀರುಳ್ಳಿ
ಕಾಡಾನೆ ದಾಳಿ-ಫಾರೆಸ್ಟ್ ವಾಚರ್ ಸಾವು, ಮಗನಿಗೆ ಗಾಯ
ಯಳಂದೂರು: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್ ಮೃತಪಟ್ಟಿರುವ ಘಟನೆ ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಸಿಮೇಟಿ ಕ್ಯಾಂಪ್ ಬಳಿ ನಡೆದಿದೆ.
ಕಾಡಾನೆ ದಾಳಿ-ಫಾರೆಸ್ಟ್ ವಾಚರ್ ಸಾವು, ಮಗನಿಗೆ ಗಾಯ
ಅರಣ್ಯ ಇಲಾಖೆ ವಾಚರ್ ಕಿಶೋರ್ ಕುಮಾರ್(45) ಮೃತ ದುರ್ದೈವಿ. ಕಿಶೋರ್ ಕುಮಾರ್ ಅವರ ಮಗನಿಗೆ ಸೊಂಟಕ್ಕೆ ಪೆಟ್ಟಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಮೇಟಿ ಕ್ಯಾಂಪ್‌ಗೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆ ದಾಳಿ ಮಾಡಿ ಬೈಕ್ ಹಾಗೂ ಕಿಶೋರ್ ಕುಮಾರ್ ಅವರನ್ನು ತುಳಿದು ಹಾಕಿದೆ. ಅವರ ಪುತ್ರ ಮಾದೇಗೌಡನಿಗೆ ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲು ಮಾಡಲಾಗಿದೆ.
ಚಾಮರಾಜನಗರ: ಸುವರ್ಣಾವತಿ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು
ಬೈಕಿನಲ್ಲಿ ತೆರಳುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದ ತಕ್ಷಣ ಕಿಶೋರ್ ಕುಮಾರ್ ಮತ್ತು ಮಾದೇಗೌಡ ಇಬ್ಬರು ಬೈಕ್‌ನಿಂದ ಬಿದ್ದಿದ್ದು, ಕಿಶೋರ್ ಕುಮಾರ್ ಮೇಲೆ ದಾಳಿ ಮಾಡಿ, ತುಳಿದು ಹಾಕಿದ್ದು, ಮತ್ತೊಂದು ಕಡೆಯಲ್ಲಿ ಬಿದ್ದಿದ್ದ ಮಾದೇಗೌಡ ಅವರ ಕಡೆ ಆನೆ ಗಮನ ಹರಿಸದ ಪರಿಣಾಮ ಅವರು ಸಾವಿನಿಂದ ಪರಾಗಿದ್ದಾರೆ. ನಂತರ ವಿಚಾರ ತಿಳಿದ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಅರಣ್ಯ ಇಲಾಖೆ ಸಂತಾಪ:
ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆ ವಾಚರ್ ಕಿಶೋರ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಅರಣ್ಯ ಇಲಾಖೆ ಕಚೇರಿಗೆ ತಂದು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂತಾಪ ಸೂಚಿಸಿದರು. ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮೃತ ಕಿಶೋರ್‌ಕುಮಾರ್ ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥಿವ ಶರೀರವನ್ನು ಮೃತರ ಕುಟುಂಬಕ್ಕೆ ನೀಡಲಾಯಿತು. ಬಿಆರ್‌ಟಿ ಡಿಸಿಎಫ್ ಸಂತೋಷ್ ಕುಮಾರ್ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.