Asianet Suvarna News Asianet Suvarna News

PFI Ban ಸ್ವಾಗತಿಸಿದ ಮುತಾಲಿಕ್: ಮುಧೋಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಕೇಂದ್ರ ಸರ್ಕಾರ ದೇಶಾದ್ಯಂತ ಪಿಎಫ್ಐ ಬ್ಯಾನ್ ಮಾಡಿದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

Sri Ram sena leader Pramod mutalik welcomes central govt decision on PFI ban, celebration in Mudhol akb
Author
First Published Sep 28, 2022, 5:34 PM IST

ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ: ಕೇಂದ್ರ ಸರ್ಕಾರ ದೇಶಾದ್ಯಂತ ಪಿಎಫ್ಐ ಬ್ಯಾನ್ ಮಾಡಿದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಸೇರಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಅವರಿಗೆ ಸಿಹಿ ತಿನ್ನಿಸಿ ಘೋಷಣೆ ಕೂಗಿ  ಕಾರ್ಯಕರ್ತರು ಸಂಭ್ರಮಿಸಿದರು. 

ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮುತಾಲಿಕ್​

ಇನ್ನು ಮುಧೋಳದಲ್ಲಿ (Mudhola) ನಡೆದ ಸಂಭ್ರಮಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್(Pramod mutalik), ದೇಶಾದ್ಯಂತ ಇಂದು ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ್ದಕ್ಕೆ ನಾನು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ನಾಡಿನಲ್ಲಿ ಈಗ ನವರಾತ್ರಿ (Navaratri) ದಿನಗಳ ಆಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ  ಸಂತೋಷವಾಗಿದೆ. ಇದನ್ನು ಈ ಮೊದಲೇ ಸರ್ಕಾರ ಮಾಡಬೇಕಿತ್ತು. ಆದರೂ ಸಹ ಇಂದು ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರದ ಅವಶ್ಯಕತೆ ಇತ್ತು. ಕೇಂದ್ರ ಸರ್ಕಾರ (central Govt) ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದರು. 

ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ: ಮುತಾಲಿಕ್

ಈ ದೇಶದಲ್ಲಿ ಗಂಡಾಂತರ ತಡೆಯುವ ಕೆಲಸವನ್ನು ಸರ್ಕಾರ ಇಂದು ಮಾಡಿದೆ. ಇನ್ನು ಮುಸ್ಲಿಂ ಸಮಾಜ (Muslim comunity) ಇದರಿಂದ ಪಾಠ ಕಲಿಯಬೇಕಿದೆ. ಮುಸ್ಲಿಂ ಸಮುದಾಯದ ಹಿರಿಯರು ತಮ್ಮ ಯುವಕರು ಯಾವ ಹಾದಿ ತುಳಿಯುತ್ತಿದ್ದಾರೆಂದು ತಿಳಿಯಬೇಕಾದ ಅಗತ್ಯತೆ ಇದೆ. ಇವರಲ್ಲಿ ಯಾರಾದರೂ ದೇಶದ್ರೋಹ ಚಟುವಟಿಕೆಯಲ್ಲಿ ತೊಡಗುತ್ತಿದ್ದರೆ ಆ ಬಗ್ಗೆ ಪೋಲಿಸರಿಗೆ ತಿಳಿಸಬೇಕು. ಈ ದೇಶದಲ್ಲಿ ಹುಟ್ಟಿ, ಇಲ್ಲಿಯ ಅನ್ನ ತಿಂದು, ಈ ದೇಶಕ್ಕೆ ಬದ್ಧರಾಗಿರಬೇಕು. ಪಾಕಿಸ್ತಾನದಂತೆ ಮುಸ್ಲಿಂ ರಾಷ್ಟ್ರ ಮಾಡುವ ವಿಕೃತ ಮನಸ್ಸನ್ನು ಬಿಡಬೇಕು. ಇದನ್ನು ಮುಸ್ಲಿಂ ಸಮಾಜದ ಮುಖಂಡರು ಯುವಕರಿಗೆ ತಿಳಿಹೇಳುವಂತಾಗಬೇಕು. ವಿಕೃತ ಮಾನಸಿಕತೆ ತಿದ್ದುವ ಕೆಲಸ ಮದರಸಾಗಳಲ್ಲೂ  ಆಗಬೇಕು ಎಂದರು. 

ಕೇಂದ್ರ ಸರ್ಕಾರಕ್ಕೆ ಸಾವಿರ ಸಾವಿರ ಪ್ರಣಾಮ 
ಕಳೆದ ಹಲವು ದಿನಗಳಿಂದ ಪಿಎಫ್​ಐ ಸಂಘಟನೆ ನಿಷೇಧ ಮಾಡುವಂತೆ ಸಾಕಷ್ಟು ಒತ್ತಾಯ ಮಾಡಿಕೊಂಡು ಬಂದಿದ್ದ ಶ್ರೀರಾಮಸೇನೆ (Sriram sena) ಮುಖಂಡ ಪ್ರಮೋದ್ ಮುತಾಲಿಕ್​ ಅವರಿಗೆ ಇದೀಗ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನ ಬ್ಯಾನ್ ಮಾಡಿರೋದಕ್ಕೆ ಅತೀವ ಸಂತಸವಾಗಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಪಿಎಫ್ಐ ಬ್ಯಾನ್ ಮಾಡಿದ್ದಕ್ಕೆ ಸಾವಿರ ಸಾವಿರ ಸಾವಿರ ಪ್ರಣಾಮಗಳು, ಧನ್ಯವಾದಗಳು ಎಂದು ಹೇಳುವ ಮೂಲಕ ಅಭಿನಂದಿಸಿದರು.
Bagalkote: ಬಿಎಸ್‌ವೈ ಕ್ಷೇತ್ರ ಬಿಟ್ಟು ಕೊಟ್ಟು ಎಡುವುತ್ತಿದ್ದಾರೆ ಎನ್ನಿಸುತ್ತಿದೆ: ಪ್ರಮೋದ್ ಮುತಾಲಿಕ್

Follow Us:
Download App:
  • android
  • ios