Bagalkote: ಬಿಎಸ್‌ವೈ ಕ್ಷೇತ್ರ ಬಿಟ್ಟು ಕೊಟ್ಟು ಎಡುವುತ್ತಿದ್ದಾರೆ ಎನ್ನಿಸುತ್ತಿದೆ: ಪ್ರಮೋದ್ ಮುತಾಲಿಕ್
ಬಿಜೆಪಿಯನ್ನು ಸರ್ವವ್ಯಾಪಿ ಬೆಳೆಸಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಈಗ ಅವರು ತಮ್ಮ ಮಗನಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಟ್ಟು ಎಡುವುತ್ತಿದ್ದಾರೆ ಎನ್ನಿಸುತ್ತಿದೆ, ಇದನ್ನು ಬಹಳ ನೋವು ವಿಷಾದದಿಂದ ಹೇಳುತ್ತಿದ್ದೇನೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.23): ಬಿಜೆಪಿಯನ್ನು ಸರ್ವವ್ಯಾಪಿ ಬೆಳೆಸಿದ್ದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಈಗ ಅವರು ತಮ್ಮ ಮಗನಿಗೆ ತಮ್ಮ ಕ್ಷೇತ್ರ ಬಿಟ್ಟು ಕೊಟ್ಟು ಎಡುವುತ್ತಿದ್ದಾರೆ ಎನ್ನಿಸುತ್ತಿದೆ, ಇದನ್ನು ಬಹಳ ನೋವು ವಿಷಾದದಿಂದ ಹೇಳುತ್ತಿದ್ದೇನೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ನಗರದಲ್ಲಿ ಕೆರೂರ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗಾಯಾಳುಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ತನ್ನ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿ, ಮೊದಲು ಅದು ಅವರ ಪಕ್ಷಕ್ಕೆ ಬಿಟ್ಟಿದ್ದು, ನಾನೇನು ಬಿಜೆಪಿ ಅಲ್ಲ.
ಶ್ರೀರಾಮ ಸೇನೆ ಮತ್ತು ಬಿಜೆಪಿಗೆ ಏನು ಸಂಬಂಧ ಇಲ್ಲ ಅಂತ ಕಟಿಲ್ ಹೇಳಿದ್ದಾರೆ. ನಾನೂ ಕೂಡ ಹೇಳಿದ್ದೀನಿ, ನಾನೇನು ಬಿಜೆಪಿ ಮೇಂಬರ್ ಅಲ್ಲ ಅಂತ, ಸೋ ನಾನು ಯಾವ ಪಕ್ಷದ ಸಂಬಂಧನೂ ಇಲ್ಲ, ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ಹೇಳಿದ ಮುತಾಲಿಕ ಅವರು, ಯಡಿಯೂರಪ್ಪರನ್ನ ರಾಜಕೀಯವಾಗಿ ಮುಗಿಸುವ ತಂತ್ರ ನಡೆಯಿತಾ ಎಂಬ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆಸಿದ ಶ್ರೇಷ್ಠ ವ್ಯಕ್ತಿ, ಬಿಜೆಪಿ ಕೇವಲ ಬ್ರಾಹ್ಮಣರಿಗೆ ಅನ್ನೋದಿತ್ತು, ಅದನ್ನ ಸರ್ವವ್ಯಾಪಿ ಬೆಳೆಸಿದ್ದೇ ಬಿಎಸ್ ಯಡಿಯೂರಪ್ಪ, ನಾನು ದುಃಖ ಮತ್ತು ನೋವಿನಿಂದ ಹೇಳುತ್ತೇನೆ,ಬಿಎಸ್ವೈ ತಮ್ಮ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಡೋದ್ರಿಂದ ಎಲ್ಲೋ ಒಂದು ಕಡೆ ಎಡುವುತ್ತಿದ್ದಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಪಕ್ಷದ ನಿರ್ಣಯ.
ಶಿಕಾರಿಪುರದಲ್ಲಿ ರಾಜಕೀಯ ಪ್ರವೇಶಿಸಿ ರಾಜ್ಯದ ‘ಮಾಸ್ ಲೀಡರ್’ ಆದ ಬಿಎಸ್‌ವೈ..!
ಬಿಜೆಪಿಯಲ್ಲಿ ಏನೇನೋ ಬದಲಾವಣೆ ಅಂತ ನಡಿತಿದೆ. ಸಂಬಂಧಿಗಳಿಗೆ ಟಿಕೆಟ್ ಇಲ್ಲಾ ಅಂದ್ರು, ಅಂಗಡಿಯವರ ಪತ್ನಿಗೆ ಕೊಟ್ಟರು,ವಯಸ್ಸಿನ ಆಧಾರದ ಮೇಲೆ ಕೊಡೋಲ್ಲ ಅಂದ್ರು ಹೊರಟ್ಟಿಗೆ ಕೊಟ್ರು, ಬಿಜೆಪಿಯಲ್ಲಿ ಸಿದ್ದಾಂತ, ನಿಯಮ ಇಲ್ಲ, ಗೆಲ್ಲಬೇಕು ಅಷ್ಟೇ, ಗೆಲ್ಲುವಂತವನಿದ್ದರೆ 80 ವರ್ಷದ ಮುದುಕನಿಗೂ ಕೊಡ್ತಾರೆ ಎಂದು ವ್ಯಂಗ್ಯವಾಡಿದ ಮುತಾಲಿಕ, ಗೆಲ್ಲುವಂತಿದ್ದರೆ ಸೋನಿಯಾಗಾಂಧಿಗೂ ಟಿಕೆಟ್ ಕೊಡ್ತಾರೆ, ಇವತ್ತಿನ ಬಿಜೆಪಿಯಲ್ಲಿ ಶೇಕಡಾ 70ರಷ್ಟು ಕಾಂಗ್ರೆಸ್ಸ ಮತ್ತು ಜೆಡಿಎಸ್‌ನವರು ಬಂದು ಕಮಿನಿಷ್ಟರು ಸೇರಿದ್ದಾರೆ. ಇವರಿಗೆ ಅಧಿಕಾರ ಅಷ್ಟೇ ಬೇಕು, ಸಿದ್ದಾಂತ ಗಾಳಿಗೆ ಹೋಗಿದೆ, ಏನು ಉಳಿದಿಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದಿಂದ ಬಂದ ಮುಸ್ಲಿಮರ ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡುತ್ತೇವೆ: ಇದೇ ಸಮಯದಲ್ಲಿ ಮಾತನಾಡಿದ ಅವರು,ಮುಸ್ಲಿಮರು ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡುತ್ತೇವೆ.ದೇಶದೆಲ್ಲೆಡೆ ಕ್ಷೌರಿಕ ಸಮಾಜ ಇದೆ. ಅವರಿಗೆ ಕ್ಷೌರ ಬಿಟ್ರೆ ಬೇರೆ ಏನೂ ಗೊತ್ತಿಲ್ಲ.ಅವರ ಜೀವನ, ಹೆಂಡತಿ ಮಕ್ಕಳು ಅದರ ಕ್ಷೌರ ಉದ್ಯೋಗದ ಮೇಲೆ ಇದ್ದಾರೆ. ಕ್ಷೌರಕ್ಕೆ ಅಂತಲೇ ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ವ್ಯವಸ್ಥಿತ ಷಡ್ಯಂತ್ರ, ಕುತಂತ್ರ ನಡೀತಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ ಎಂದ ಮುತಾಲಿಕ್,ಆದರೆ ಯಾವುದೇ ಕ್ರಮ ಆಗಿಲ್ಲ.ಇದು ಬಹಳ ಡೇಂಜರ್ಸ್, ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ.
ಅವರಿಗೆ ಯಾರು ಹಾಕಿಕೊಡ್ತಾರೆ, ಅವರಿಗೆ ಬಂಡವಾಳ ಹೇಗೆ ಸಿಗುತ್ತಿದೆ. ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ರೆ ಉಡಾಯಿಸಿ ಬಿಸಾಕ್ತಿವಿ. ಹೀಗೆ ಆದರೆ ಕ್ಷೌರಿಕ ಸಮಾಜದವರು ಎಲ್ಲಿ ಹೋಗಬೇಕು. ಹೊಟ್ಟೆಗೆ ಏನ್ ತಿನ್ನಬೇಕು. ಇದನ್ನು ಬಿಟ್ರೆ ಬೇರೆ ಏನೂ ಉದ್ಯೋಗ ಬರೋದಿಲ್ಲ. ಎಸ್ಪಿಯವರೇ, ಡಿಸಿಯವರೇ ಇದು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮುತಾಲಿಕ್ ಎಚ್ಚರಿಕೆ ನೀಡಿ, ಬಾಂಗ್ಲಾದೇಶದಿಂದ ಇಲ್ಲಿ ಯಾಕೆ ಬಂದಿದ್ದಾರೆ ಅವರು ಇಲ್ಲೇನು ಅವರಿಗೆ ಕೆಲಸ, ನೀವು ಒದ್ದು ಹೊರಗೆ ಹಾಕ್ತಿರೋ ಅಂಗಡಿ ತೆಗೆದುಹಾಕ್ತಿರೋ., ಅಥವಾ ನಾವೇ ತೆಗೆದುಹಾಕಬೇಕೋ.
ಆಮೇಲೆ ಗೊಂದಲ ಆಯ್ತು ಗಲಭೆ ಅಂತ ಹೇಳಗಿಲ್ಲ, ನಿಮಗೆ ಬಿಟ್ಟಿದ್ದೀವಿ ಈಗ,ನೀವು ಯಾವುದೇ ಗೊಂದಲ ಗದ್ದಲ ಆಗದಿರುವ ಹಾಗೆ ಅಂಗಡಿ ಕಿತ್ತು ಬಿಸಾಕಿ, ಕೆರೂರುನಲ್ಲೂ ಒಂದು ಅಂಗಡಿ ಆಗಿದೆ. ಹೀಗೆ ಹಬ್ಬಿಸುತ್ತಾ ಹೋಗುತ್ತಾರೆ. ಆಮೇಲೆ ಕ್ಷೌರಿಕ ಸಮಾಜದವರ ಹೊಟ್ಟೆಗೆ ನೀವು ಹಾಕ್ತಿರಾ ಎಂದು ಪ್ರಶ್ನೆ ಮಾಡಿದ ಅವರು, ಮುಸ್ಲಿಂ ಸಮಾಜದವರನ್ನ ಒದ್ದು ಒಡಿಸಬೇಕು.ಹಿಂದೂ ಸಮಾಜದವರಿಗೂ ಹೇಳ್ತೀನಿ. ನಿಮಗೆ ನಾಚಿಕೆ ಮಾನ ಮರಿಯಾದೆ ಏನಾದ್ರೂ ಇದ್ರೆ, ಇವತ್ತು ಕೊಲೆಗಳು ಆಗುತ್ತದೆ. ದೇಶದ್ರೋಹಿ ಚಟುವಟಿಕೆ ನಡೆಯುತ್ತದೆ. ಗೋ ಹತ್ಯೆ ಆಗುತ್ತಿವೆ. ಮತ್ತೆ ಅವರ ಅಂಗಡಿಗೆ ಹೋಗಿ, ಸಗಣಿ ತಿಂತಿದ್ದೀರಿ ಹಿಂದೂ ಸಮಾಜದವರು ಎಂದು ಆಕ್ರೋಶ ವ್ಯಕ್ತಪಡಿಸಿ, ಯಾಕೆ ಅಲ್ಲಿ ಯಾಕೆ ಹೋಗ್ತೀರಿ ನೀವು, ನಮ್ಮ ಹಿಂದೂ ಅಂಗಡಿಗಳು ಇಲ್ಲೇನು, ಡಿಸಿ ಅವರಿಗೆ ಎಚ್ಚರಿಕೆ ಕೊಡ್ತಿದ್ದೇನೆ ಇದನ್ನ ಕೂಡಲೇ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ಕೆರೂರ ಘಟನೆ ದುರಾದೃಷ್ಟ, ಹಿಂದೂ ಸಮಾಜ ಇನ್ಮುಂದೆ ಸಹಿಸೋಲ್ಲ, ಉತ್ತರ ಕೊಡುತ್ತೆ: ಇದೇ ಸಮಯದಲ್ಲಿ,ಕೆರೂರ ಘಟನೆ ಬಗ್ಗೆ ಮಾತಾನಾಡಿ, ಈ ಘಟನೆ ದುರಾದೃಷ್ಟ ಮತ್ತು ಖಂಡನೀಯ, ಹಿಂದೂ ಹುಡುಗಿ ಚುಡಾಯಿಸಿದ್ದಕ್ಕೆ ವಿರೋಧಿಸಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಪೋಲಿಸರ ನಂತರವೂ ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ. ಇದೊಂದು ರಾಕ್ಷಸಿ ಪೃವೃತ್ತಿ. ಮುಸ್ಲಿಂ ಕಿಡಿಗೇಡಿ, ಗುಂಡಾಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಹುಷಾರಾಗಿರಿ, ಇನ್ಮುಂದೆ ಈ ರೀತಿಯ ಆಟ ನಡೆಯೋಲ್ಲ. ಗೋಪಾಲನಿಗೆ ಏಳೆಂಟು ಜನ ಕಾರಪುಡಿ ಹಾಕಿ ಹೊಡೆದಿದ್ದಾರೆ.
ಎಲ್ಲರ & ವೈದ್ಯರ ಕೃಪೆಯಿಂದ ಗೋಪಾಲ ಬದುಕಿದ್ದಾನೆ. ಆತನ ಕೊಲೆ ಮಾಡೋಕೆಂದೆ ಬಂದಿದ್ದರು, ಈ ರಾಕ್ಷಿಸಿ ಪ್ರವೃತ್ತಿ ಸರಿಯಲ್ಲ. ನಿಮಗೇನಾದ್ರೂ ತೊಂದರೆಯಾದ್ರೆ ಕಂಪ್ಲೆಂಟ್ ಕೊಡಿ. ಧರಣಿ ಮಾಡಿ. ಚಾಕು, ಚೂರಿ ತೋರಿಸೋದ್ರಿಂದ ಇದೇನು ತಾಲಿಬಾನ್, ಪಾಕಿಸ್ತಾನ ಅಲ್ಲ,ಹಿಂದೂ ಸಮಾಜ ತಾಳ್ಮೆಗೆಟ್ಟಿದೆ. ಇನ್ನು ಮುಂದೆ ಹಿಂದೂ ಸಮಾಜ ಸಹಿಸೋದಿಲ್ಲ. ಉತ್ತರ ಕೊಡುತ್ತೆ. ಸಂವಿಧಾನದ ಅಡಿಯಲ್ಲಿ ಬಾಯಿ ಮುಚ್ಚಿಕೊಂಡು ಬದುಕು ಮಾಡಬೇಕು. ಭಟ್ಕಳದಿಂದ ಬಂದ ನಿರ್ಲಜ್ಜ ಹೆಣ್ಣು ಮಗಳು, ಬುರ್ಖಾ ತೊಟ್ಟು ಆಯುಧ ತಂದು ಹುಡುಗರಿಗೆ ಕೊಟ್ಟು ಹೊಡೆಸ್ತಾಳೆ. ಕೆರೂರ ಏನು ಭಟ್ಕಳ ಅಂತ ತಿಳಿದಿದ್ದಾರಾ ಇವರು, ಪರಾರಿಯಾಗಿರುವರನ್ನು, ಪಿಎಫ್‌ಐ ಅಧ್ಯಕ್ಷ ಒದ್ದು ಒಳಗಡೆ ಹಾಕಬೇಕು.
ನಿಮ್ಮಪ್ಪನಾಣೆಗೂ ನೀವಿಬ್ಬರೂ ಸಿಎಂ ಆಗಲ್ಲ: ಸಿದ್ದು, ಡಿಕೆಶಿಗೆ ಬಿಎಸ್‌ವೈ ಟಾಂಗ್..!
PFI & SDPI ಬ್ಯಾನ್ ಮಾಡಿ, ಕಾಂಗ್ರೆಸ್ & ಬಿಜೆಪಿ ಎಚ್ಚೆತ್ತುಕೊಳ್ಳಲಿ ಇಲ್ಲವಾದರೆ ನಿಮ್ಮನ್ನೆ ನುಂಗುತ್ತವೆ: ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಬಗ್ಗೆ ಕಾಳಜಿ ಇದ್ದರೆ PFI & SDPI ಸಂಘಟನೆಗಳನ್ನ ಬ್ಯಾನ್ ಮಾಡಿ, ಈ ಸಂಘಟನೆಗಳು ಕೊಲೆ ಸುಲಿಗೆ ಮಾಡ್ತಿರೋದು ಕಾಣಿಸುತ್ತಿಲ್ಲವೆ ಎಂದು ಪ್ರಶ್ನೆ ಮಾಡಿ,ಬಿಜೆಪಿ ಪಕ್ಷ SDPI ಯಾಕೆ ಬ್ಯಾನ್ ಮಾಡ್ತಿಲ್ಲ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, SDPI ಇದೊಂದು ಪಕ್ಷ, ಕಾಂಗ್ರೆಸ್ ಇಂತಹ ಗೂಂಡಾ ಮತ್ತು ಭಯೋತ್ಪಾದಕರನ್ನ ಬೆಳೆಸಿದೆ. ಈಗ ಕಾಂಗ್ರೆಸ್‌ಗೆ ಇವರೇ ಮುಳ್ಳಾಗಿದ್ದಾರೆ,ಕಾಂಗ್ರೆಸ್ ವೋಟ್ ಬ್ಯಾಂಕ್ SDPI ಒಡೆಯುತ್ತಿದೆ. ಬಿಜೆಪಿಯವರಿಗೆ ಇದರ ಲಾಭವಾಗುತ್ತೇ ಅನ್ನೋದು ಭ್ರಮೆಯಲ್ಲಿ ಇದ್ದಾರೆ. ನಿಮ್ಮ ಅಧಿಕಾರಕ್ಕಾಗಿ ಈ ಸಂಘಟನೆಗಳನ್ನ ಬೆಂಬಲಿಸಬೇಡಿ. ಹಿಂದೂಗಳನ್ನ ಬೆಂಬಲಿಸಿ, ಬಿಜೆಪಿ ಗೆಲ್ಲಿಸಿ ತರುತ್ತೇವೆ, ಈ ಎಲ್ಲ ಸಂಘಟನೆಗಳು ಬಿಜೆಪಿಯವರನ್ನೇ ಸಹ ನುಂಗಿ ಹಾಕುತ್ತೇ, ಮುಂದಿನ ತಿಂಗಳು ರಾಜ್ಯಾದ್ಯಂತ ದೊಡ್ಡ ಅಭಿಯಾನ ಮಾಡುತ್ತೇವೆ ಎಂದು ಮುತಾಲಿಕ್ ತಿಳಿಸಿದರು.