Asianet Suvarna News Asianet Suvarna News

ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ: ಮುತಾಲಿಕ್

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ತಮಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಮುತಾಲಿಕ್ ಉಡುಪಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ ಎಂದಿದ್ದಾರೆ.

Sriram Sena chief Pramod Muthalik angry against Karnataka BJP government gow
Author
First Published Sep 20, 2022, 9:24 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.20): ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿ ಮನೆ ಮನೆಗೆ ಹೋಗಿ ತೆಗಿತೀನಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ತಮಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಮುತಾಲಿಕ್ ಉಡುಪಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದು ಜಿಲ್ಲಾಧಿಕಾರಿಗಳ ಆಜ್ಞೆ ಅಲ್ಲ, ಇದು ಸರ್ಕಾರದ ಆಜ್ಞೆ, ಸರಕಾರ ಅಂದ್ರೆ ಬಿಜೆಪಿ.ಪದೇ ಪದೇ ನನಗೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ.ನೀವು ತಡೆಯುತ್ತಿರುವುದು ಮುತಾಲಿಕ್ ನನ್ನು ಅಲ್ಲ ಹಿಂದುತ್ವವನ್ನು ಎಂಬುದರ ಅರಿವಿರಲಿ ಎಂದು‌ ಕೋಪ ಹೊರಹಾಕಿದ್ದಾರೆ.ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ನಾಯಕನನ್ನು ತಡೆದು ದ್ರೋಹ ಮಾಡುತ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ ಮತ್ತು ಸ್ವಾತಂತ್ರ್ಯ ಹರಣ.ಕಾಂಗ್ರೆಸ್ ಕಾಲದಲ್ಲಿ ಬ್ಯಾನ್ ಮಾಡಿದಾಗ ನೀವೇ ವಿರೋಧ ಮಾಡಿದ್ದೀರಿ ನೆನಪಿರಲಿ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ. ಅಂದು ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ ಮಾಡಿದ್ದೀರಿ,ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ಬಿಟ್ಟಿಲ್ಲ. ನಾನು ಮಾತನಾಡಿದರೆ ಗಲಭೆ ಆಗುತ್ತೆ ಅನ್ನುತ್ತಿರಿ, ಗಲಾಟೆಯಾದರೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿ. ಸಾಧ್ಯವಾದರೆ ಗಲಾಟೆ ಮಾಡುವವರನ್ನು ಹದ್ದುಬಸ್ತಿನಲ್ಲಿ ಇಡಿ.ಹಿಂದುಗಳಿಂದ ಯಾವತ್ತೂ ಗಲಭೆಯಾಗಿಲ್ಲ ತಿಳಿದಿರಲಿ. ಪದೇಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ? ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರನ್ನು, ಶತ್ರುಗಳನ್ನು ,ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ? ಹಿಂದುಗಳ ಕೊಲೆಯಾಗುವಾಗ ಸಂಘಟನೆಗಳಿಗೆ ನೀವು ಬಲ ತುಂಬಬೇಕು.ನ್ಯಾಯಾಲಯದಿಂದ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಿಸ್ತೀನಿ ಎಂದು ಎಚ್ಚರಿಸಿದ್ದಾರೆ.

ಮಲೆನಾಡು ಭಯೋತ್ಪಾದಕರ ತಾಣ- ಮುತಾಲಿಕ್ ಕಳವಳ
ಶಿವಮೊಗ್ಗ ಶಂಕಿತ ಭಯೋತ್ಪಾದಕರ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್,ಶಿವಮೊಗ್ಗ ಅಂದ್ರೆ ಹಿಂದುತ್ವದ ಭದ್ರಕೋಟೆ. ಮಲೆನಾಡಿನಲ್ಲಿ ಹಿಂದೂಗಳ ಜಾಗೃತ ಸಮಾಜವಿದೆ. ಆದರೆ ಮಲೆನಾಡು ಭಯೋತ್ಪಾದಕರ ಅಡಗು ತಾಣಗಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸರಕಾರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕುಹಿಂದೂ ಭದ್ರಕೋಟೆ ಶಿಥಿಲವಾಗುತ್ತಿದೆ, ಇದು ಅಪಾಯಕಾರಿ ಬೆಳವಣಿಗೆ.ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಯಾನಕ ಸ್ಥಿತಿ ನಿರ್ಮಾಣವಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಮಾಂಸದೂಟದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಪ್ರಮೋದ್ ಮುತಾಲಿಕ್

ಹಿಜಾಬ್ ಹೋರಾಟಗಾರ್ತಿಯರು ಇರಾನ್ ನಲ್ಲಿ ಏನಾಗ್ತಿದೆ ನೋಡಿ:
ಇರಾನ್ ಒಂದು ಇಸ್ಲಾಮಿಕ್ ರಾಷ್ಟ್ರ.ಇಸ್ಲಾಮಿಕ್ ರಾಷ್ಟ್ರದಲ್ಲೇ ಹಿಜಾಬ್ ನ್ನ ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.ಕಟ್ಟರ್ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಶಿಕ್ಷಣದಿಂದ ವಂಚಿಸಲು, ಮಹಿಳೆಯರನ್ಬು ಮನೆಯಿಂದ ಹೊರಗೆ ಬಿಡುತ್ತಿಲ್ಲ.ಅವರ ಜೊತೆ ಪ್ರಾಣಿಗಳಂತೆ ವರ್ತಿಸಲಾಗುತ್ತಿದೆ. ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಕೊಲ್ಲುವ ಮೂಲಕ ಇದು ಬಯಲಾಗಿದೆ.ಇರಾನಿನ ಮುಸ್ಲೀಂ ಮಹಿಳೆಯರು ಸಿಡಿದೆದ್ದಿದ್ದಾರೆ ಎಂದು ಹೇಳಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೋರ್ಟ್ ಬ್ರೇಕ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ

ಹಿಜಾಬ್ ನ ಪರ ನಿಂತಿರುವ ಕರ್ನಾಟಕದ ವಿದ್ಯಾರ್ಥಿನಿಯರು ಇರಾನ್ ನಿಂದ ಪಾಠ ಕಲಿಯಬೇಕು. ಕರ್ನಾಟಕದಲ್ಲಿ ನಿಮಗೆ ಹಿಜಾಬ್ ಬ್ಯಾನ್ ಮಾಡಿಲ್ಲ. ಎಲ್ಲಿ ಬೇಕಾದರೂ ಹಿಜಾಬ್ ಧರಿಸಿ ಹೋಗಬಹುದು. ಆದರೆ ಕ್ಲಾಸ್ ರೂಮ್ ಒಳಗಡೆ ಹಿಜಾಬ್ ಬೇಡ ಎಂದಷ್ಟೇ ನಿಯಮವಿದೆ. ಆದರೆ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಸಿ ಎಫ್ ಐ , ಪಿ ಎಸ್ ಐ ಬಂಬಡಿ ಬಡಿಯುತ್ತಿದೆ. ನೀವೆಲ್ಲಾ ಇರಾನ್ ನಲ್ಲಿ ಏನಾಗ್ತಿದೆ ಹೋಗಿ ನೋಡಿ.ನಮ್ಮಲ್ಲಿ ಶೋಷಣೆ ಇಲ್ಲ ಸ್ವಾತಂತ್ರ ಕೊಟ್ಟಿದ್ದೇವೆ. ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಮಾಡಿ. ನಮ್ಮಲ್ಲಿ ಶರಿಯಾ, ಕುರಾನ್ ,ಹದೀಸ್ ನಡೆಯಲ್ಲ.ನಿಮ್ಮನ್ನು ಶೋಷಣೆ ಮಾಡುತ್ತಿರುವ ಮುಸ್ಲಿಂ ಪುರುಷ ಸಮಾಜದ ಬಗ್ಗೆ ಎಚ್ಚರವಿರಲಿ ಎಂದಿದ್ದಾರೆ.

Follow Us:
Download App:
  • android
  • ios