Hubballi: ರಾಷ್ಟ್ರಭಕ್ತರ ತ್ಯಾಗ ಬಲಿದಾನ ಸ್ಮರಣೆ: ದೇಶಭಕ್ತರಿಗೆ ವಿಶೇಷ ಗೌರವ ಸಮರ್ಪಣೆ..!
* ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹುಬ್ಬಳ್ಳಿ
* ಪಂಜಿನ ಮೆರವಣಿಗೆ ಜೊತೆಗೆ ಸಾಕ್ಷ್ಯಚಿತ್ರ ಮೆರವಣಿಗೆ
* ಜನರಲ್ಲಿ ದೇಶಭಕ್ತ ತ್ಯಾಗ ಬಲಿದಾನ ಸ್ಮರಣೆ
ಗುರುರಾಜ ಹೂಗಾರ
ಹುಬ್ಬಳ್ಳಿ(ಮಾ.22): ಸಂಜೆ ಹೊತ್ತಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ(Hubballi) ಪಂಜಿನ ಬೆಳಕು. ಎಲ್ಲರ ಬಾಯಲ್ಲೂ ದೇಶ ಭಕ್ತಿಯ ಘೋಷಣೆ. ಮುಗಿಲೆತ್ತರಕ್ಕೆ ಮೊಳಗಿದ ದೇಶಭಕ್ತಿಯ ಗೀತೆಗಳು. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಭಗತಸಿಂಗ್ ರಾಜ ಗುರು ಸುಖದೇವರ ಬಲಿದಾನ ಸ್ಮರಿಸುವ ಅಪರೂಪದ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಸಾಕ್ಷಿಯಾಯಿತು.
ಹೌದು, ನಗರದಲ್ಲಿ ಭಗತಸಿಂಗ್ ಯುವಕ ಮಂಡಳಿಯ ವತಿಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದ ದೇಶಭಕ್ತರಾದ ಭಗತಸಿಂಗ್(Bhagat Singh), ರಾಜಗುರು ಸುಖದೇವ(Rajguru Sukhdev) ಅವರ ಬಲಿದಾನ ದಿನದ ಅಂಗವಾಗಿ ನಗರದಲ್ಲಿ ಪಂಜಿನ ಮೆರವಣಿಗೆ ಜೊತೆಗೆ ಸಾಕ್ಷ್ಯಚಿತ್ರ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಭಗತಸಿಂಗ್, ರಾಜಗುರು ಸುಖದೇವ ಅವರ ಹೋರಾಟದ ಚಿತ್ರಣ ಹಾಗೂ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಸಾಕ್ಷ್ಯಚಿತ್ರದ ಮೂಲಕ ಯುವಪೀಳಿಗೆಗೆ ದೇಶಭಕ್ತರ ಪರಿಚಿಸುವ ವಿನೂತನವಾಗಿ ಬಲಿದಾನ ದಿನವನ್ನು ಆಚರಣೆ ಮಾಡಲಾಯಿತು.
Karnataka Politics: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ
ಇನ್ನೂ ಹುಬ್ಬಳ್ಳಿಯ ನವನಗರದ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ದೇಶಭಕ್ತ ತ್ಯಾಗ ಬಲಿದಾನ ಸ್ಮರಿಸಲಾಯಿತು. ಮೆರವಣಿಗೆಯಲ್ಲಿ ಸುತಗಟ್ಟಿ ಶಾಲೆಯ ಮಕ್ಕಳು ಭಗತಸಿಂಗ್, ರಾಜಗುರು, ಸುಖದೇವ್ ವೇಷಭೂಷಣ ತೊಟ್ಟು ಭಾಗವಹಿಸಿದ್ದು, ವಿಶೇಷವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ(Freedom Fighters) ಗೌರವಾರ್ಥವಾಗಿ ಆಚರಿಸುವ ಬಲಿದಾನ ದಿನವನ್ನು ಅರ್ಥಪೂರ್ಣವಾಗಿ ಆಚರಸಿದ್ದು, ಮಹಿಳಾ ಮಂಡಳದ ಸದಸ್ಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿದ್ರು.
ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಲ್ಲಿ ತಪ್ಪೇನಿದೆ?: ಜೋಶಿ
ಹುಬ್ಬಳ್ಳಿ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ವಿಷಯ ಸೇರ್ಪಡೆ ಮಾಡುವುದರಲ್ಲಿ ತಪ್ಪೇನಿದೆ? ಈ ವಿಷಯದಲ್ಲಿ ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ ಹಂತದಲ್ಲೇ ಮಕ್ಕಳು(Children) ನೈತಿಕ ಶಿಕ್ಷಣ, ಧರ್ಮ, ಸಂಸ್ಕೃತಿ ಕಲಿಯಬೇಕು. ಈ ಹಿನ್ನೆಲೆಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ಶಾಲಾ ಮಕ್ಕಳಿಗೆ ಪುರಾಣೇತಿಹಾಸದಂತಹ ಸಾಕಷ್ಟು ವಿಷಯಗಳ ತಿಳಿವಳಿಕೆ ಮೂಡುತ್ತದೆ. ಹಾಗಾಗಿ ಭಗವದ್ಗೀತೆ ಸೇರ್ಪಡೆ ಅವಶ್ಯ ಎಂದು ಪ್ರತಿಪಾದಿಸಿದ್ದರು.
Karnataka Politics: ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಭ್ರಮೆ: ಸಿದ್ದು
ಭಗವದ್ಗೀತೆ ಸೇರ್ಪಡೆ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸ್ವಾಗತಿಸಿರುವುದು ಅವರ ಸದ್ಬುದ್ಧಿಯನ್ನೂ ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದರು. ಕಾಶ್ಮೀರದಲ್ಲಿ ನರಹತ್ಯೆ ಆಗಿರುವುದು ಮತ್ತು ದೇಶದ ಗೌರವಾನ್ವಿತ ನಾಗರಿಕರು ರಸ್ತೆ ಬದಿ ಬಂದು ಜೀವನ ಮಾಡಿದ್ದು, ಇತಿಹಾಸದಲ್ಲಿ ಎಂದೂ ಆಗಿಲ್ಲ. ಈ ನೈಜ ಘಟನೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ದಾಖಲಿಸಿದ್ದಾರೆ. ಇತಿಹಾಸದ ಕರಾಳತೆ ನಮಗೆ ಪಾಠವಾಗಬೇಕು. ಸಿನಿಮಾ ಚೆನ್ನಾಗಿದೆ. ಹಾಗಾಗಿ ಅದು ಪಾಪ್ಯುಲರ್ ಆಗಿದೆ ಎಂದ ಅವರು, ಕಾಶ್ಮೀರಿ ಫೈಲ್(The Kashmir Files) ಹಾಗೂ ಇತರ ನರಹತ್ಯೆ ಘಟನೆಗಳ ಹೋಲಿಕೆ ಬಗ್ಗೆ ವ್ಯಾಖ್ಯಾನಿಸುವುದಿಲ್ಲ. ಕಾಶ್ಮೀರಿ ಫೈಲ್ ಸಿನಿಮಾ ಚೆನ್ನಾಗಿದೆ ಎಂದಿದ್ದೇವೆ ಹೊರತು ಅದನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದಲ್ಲಿ ಇತರೆಡೆಗಳಲ್ಲಿಯೂ ನರಹತ್ಯೆ ಪ್ರಕರಣಗಳ ಸಿನಿಮಾಗಳು ಬರಲಿ. ಅವುಗಳನ್ನು ಬೆಂಬಲಿಸುವ ಬಗ್ಗೆ ಆಗಿನ ಸರ್ಕಾರಗಳು ಏನು ಮಾಡುತ್ತವೆಯೋ ನೋಡೋಣ ಎಂದು ತಿಳಿಸಿದ್ದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa) ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಈಗಾಗಲೇ ಮಾತನಾಡಿದ್ದಾರೆ. ಅವರು ಮಾತನಾಡಿದ ಮೇಲೆ ನಾನು ಹೇಳುವುದು ಸರಿಯಲ್ಲ. ಆದರೆ ನಮ್ಮ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಒಪ್ಪಿಗೆ ಇದೆ ಎಂದರು.