Asianet Suvarna News Asianet Suvarna News

ಜನಾರ್ದನರೆಡ್ಡಿಗೆ ಶುಭಕೋರಿ ಶ್ರೀಕನಕದುರ್ಗಮ್ಮ ದೇವಿಗೆ 101 ತೆಂಗಿನಕಾಯಿ ಸಮರ್ಪಣೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು. ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು ಕೋರಿ ರೆಡ್ಡಿ ಅಭಿಮಾನಿಗಳು ನಗರದ ಶ್ರೀಕನಕ ದುರ್ಗಮ್ಮ ದೇವಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಅರ್ಪಿಸಿದರು.

Special puja to wish Janardhana Reddy shri kanakadurgamma at ballari rav
Author
First Published Dec 23, 2022, 1:01 PM IST

ಬಳ್ಳಾರಿ (ಡಿ.23) : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು. ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು ಕೋರಿ ರೆಡ್ಡಿ ಅಭಿಮಾನಿಗಳು ನಗರದ ಶ್ರೀಕನಕ ದುರ್ಗಮ್ಮ ದೇವಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಅರ್ಪಿಸಿದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಬಳ್ಳಾರಿ ನಗರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹ ಸಾಕಷ್ಟುಶ್ರಮಿಸಿದ್ದರು. ರೆಡ್ಡಿ ಅವರ ಅಧಿಕಾರ ಅವಧಿಯಲ್ಲಾದ ರಸ್ತೆಗಳು, ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ನಗರದಲ್ಲಿ ನೋಡಬಹುದಾಗಿದೆ. ರೆಡ್ಡಿ ಬಿಜೆಪಿ ಸೇರಿಕೊಂಡು ಅಧಿಕಾರಕ್ಕೆ ಬಂದರೆ ಬಳ್ಳಾರಿ ಮತ್ತೆ ಅಭಿವೃದ್ಧಿಯಾಗಲಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಹಾಗೂ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು.

 

ಗಾಲಿ ಜನಾರ್ದನರೆಡ್ಡಿಗೆ 101 ಟಗರು ಕಾಣಿಕೆ ನೀಡುವುದಾಗಿ ಘೋಷಿಸಿದ ಅಭಿಮಾನಿ!

ಇದೇ ವೇಳೆ ಮಾತನಾಡಿದ ರೆಡ್ಡಿ ಅಭಿಮಾನಿ ಬಳಗದ ಶ್ಯಾಂಸುಂದರ್‌ ಹಾಗೂ ಶಾನವಾಸಪುರ ಬಸವರಾಜ್‌ ಪಾಟೀಲ್‌, ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದರ ಕುರಿತು ಪಕ್ಷದ ನಾಯಕರು ಇನ್ನು ತೀರ್ಮಾನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ. ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರಿಂದ ಬಿಜೆಪಿಗೆ ಆನೆ ಬಲ ಬರುತ್ತದೆ. ಇದರಿಂದ ಪಕ್ಷಕ್ಕೂ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.

ಜನಾರ್ದನ ರೆಡ್ಡಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಬಿಜೆಪಿಗೆ ಸೇರ್ಪಡೆಗೊಂಡು ಮತ್ತೆ ಬಳ್ಳಾರಿಯನ್ನು ಸಮಗ್ರ ಅಭಿವೃದ್ಧಿಗೊಳಿಸಲಿ ಎಂದು ಹಾರೈಸಿ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 101 ತೆಂಗಿನಕಾಯಿ ಸಮರ್ಪಿಸಲಾಯಿತು ಎಂದು ಹೇಳಿದರು. ರೆಡ್ಡಿ ಅಭಿಮಾನಿ ಬಳಗದ ಮಹೇಶ್‌ ಬೆಲ್ಲದ, ಸುಂಕಣ್ಣ, ಭರತ್‌, ಸುನಿಲ್‌, ರವಿಕುಮಾರ್‌ ಅಸುಂಡಿ, ಗಾದಿಲಿಂಗಪ್ಪ, ಶ್ರೀಧರ್‌, ಶಾಮಲಾ ಯಾದವ್‌, ವನಜಾಕ್ಷಿ ಇತರರಿದ್ದರು.

 

ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ ಗಾಲಿ ಜನಾರ್ದನ ರೆಡ್ಡಿ ದಿಢೀರ್ ಗದಗ ಭೇಟಿ, ಹೊಸ ಪಕ್ಷ ಕಟ್ತಾರಾ?

Follow Us:
Download App:
  • android
  • ios