Asianet Suvarna News Asianet Suvarna News

ಗಾಲಿ ಜನಾರ್ದನರೆಡ್ಡಿಗೆ 101 ಟಗರು ಕಾಣಿಕೆ ನೀಡುವುದಾಗಿ ಘೋಷಿಸಿದ ಅಭಿಮಾನಿ!

ಮಾಜಿ ಸಚಿವ ಹಾಗು ಗಣಿಧಣಿ ಗಾಲಿ ಜನಾರ್ಧನರೆಡ್ಡಿ ಅವರಿಗೆ ಅಭಿಮಾನಿಯೊಬ್ಬರು 101 ಟೆಗರುಗಳನ್ನು ಕಾಣಿಕೆ ನೀಡುವುದಾಗಿ ಘೋಷಣಿ ಮಾಡಿದ್ದಾರೆ.  ಅಭಿಮಾನಿ ಗಂಗಾವತಿ ನಗರದ ಕೆ.ಯಮನೂರಪ್ಪ ಪುಂಡಗೌಡರ್ ಅವರು, ನಾನು ಜನಾರ್ಧನ ರೆಡ್ಡಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ.

A fan who announced that he will donate 101 ram to Gali Janardhana Reddy rav
Author
First Published Dec 15, 2022, 9:06 PM IST

ಗಂಗಾವತಿ (ಡಿ.15) : ಮಾಜಿ ಸಚಿವ ಹಾಗು ಗಣಿಧಣಿ ಗಾಲಿ ಜನಾರ್ಧನರೆಡ್ಡಿ ಅವರಿಗೆ ಅಭಿಮಾನಿಯೊಬ್ಬರು 101 ಟೆಗರುಗಳನ್ನು ಕಾಣಿಕೆ ನೀಡುವುದಾಗಿ ಘೋಷಣಿ ಮಾಡಿದ್ದಾರೆ. ನಗರದ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರೆಡ್ಡಿ ಅಭಿಮಾನಿ ಗಂಗಾವತಿ ನಗರದ ಕೆ.ಯಮನೂರಪ್ಪ ಪುಂಡಗೌಡರ್ ಅವರು, ನಾನು ಜನಾರ್ಧನ ರೆಡ್ಡಿ ಅವರ ಕಟ್ಟಾ ಅಭಿಮಾನಿಯಾಗಿದ್ದು ಕಳೆದ 18 ವರ್ಷಗಳಿಂದ ಅವರ ಅಭಿಮಾನಿಯಾಗಿದ್ದೇನೆ. ಹಲವಾರು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಬಳ್ಳಾರಿ ನಗರ ಅಭಿವೃದ್ಧಿ ಮತ್ತು ಬಡವರ ಬಗ್ಗೆ ಅವರಿಗೆ ಕಾಳಜಿ ಇದೆ. ಇದೇ ಕಾರಣಕ್ಕೆ ಗಂಗಾವತಿಯಿಂದ ಸ್ಪರ್ಧಿಸುವ ಹಿನ್ನಲೆಯಲ್ಲಿ ಅವರನ್ನು ಸ್ವಾಗತಿಸಿ ಬೆಂಬಲಿಸುವದಾಗಿ ತಿಳಿಸಿದರು.

ನಾನು  2012 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದೆ.ಕೆಲವರ ಒತ್ತಡದಿಂದ ನಾಮಪತ್ರ ವಾಪಸ್ಸು ಪಡೆದಿದ್ದೆ ಎಂದು ತಿಳಿಸಿದರು. ಮುಂದುವರಿದು,  ಅಭಿವೃದ್ಧಿ ಮಾಡುವವರು ಗಂಗಾವತಿ ಕ್ಷೇತ್ರಕ್ಕೆ ಬೇಕಾಗಿದ್ದಾರೆ. ಈ ಕಾರಣಕ್ಕೆ ರೆಡ್ಡಿ ಅವರು ಸ್ಪರ್ಧಿಸಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದರು.ಅವರಿಗೆ ಬಿಜೆಪಿ ಪಕ್ಷ ಅವಕಾಶ  ನೀಡಿದರೆ ಸರಿ; ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ನಾವು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಒತ್ತಾಯಿಸಿದರು.

ಟಿಕೆಟ್‌ ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ: ಬಿಜೆಪಿಗೆ ಬಿಸಿತುಪ್ಪವಾದ ಜನಾರ್ದನ ರೆಡ್ಡಿ..!

ಡಿ.21ಕ್ಕೆ 1 ಟಗರು: ಡಿ.21 ಕ್ಕೆ 1ಟಗರು ಕಾಣಿಕೆಯಾಗಿ ನೀಡಿ ನಂತರ ಚುನಾವಣೆ ಸಂದರ್ಭದಲ್ಲಿ 100 ಟಗರು ನೀಡುವುದಾಗಿ ಘೋಷಿಸಿದರು. ಅಂದಾಜು 8 ರಿಂದ 10 ಲಕ್ಷ ರು ಮೌಲ್ಯ ಆಗುತ್ತಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಟಗರು ನೀಡುತ್ತೇನೆ. ಸ್ಪರ್ಧಿಸದಿದ್ದರೂ ಟಗರು ನೀಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ  ರೆಡ್ಡಿ ಅಭಿಮಾನಿಗಳಾದ ಶಂಭುನಾಥ ದೊಡ್ಮನಿ,ನ್ಯಾಯವಾದಿ ಎಸ್.ಮಲ್ಲೇಶಪ್ಪ,ನಾಗರಾಜ ಬಳ್ಳಾರಿ,ಹನುಮೇಶನಾಯ್ಕ ಗುಡ್ಡೇಕಲ್,ಹನುಮೇಶ ಹೊಸಳ್ಳಿ
ಉಪಸ್ಥಿತರಿದ್ದರು. 

ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌: ಬೇನಾಮಿ ಕೇಸ್‌ ರದ್ದು

Follow Us:
Download App:
  • android
  • ios