ಸೌಜನ್ಯ ಪ್ರಕರಣದ ಮರುತನಿಖೆ ಆರಂಭಗೊಂಡಿದೆ. ಈ ಕುರಿತು ವಕೀಲ ಅಮೃತೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೌಜನ್ಯ ಪೋಷಕರು ನಡೆಸಿದ ಸುದ್ದಿಗೋಷ್ಠಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಇದು ಕೋಲಾಹಲ ಎಬ್ಬಿಸಿದೆ.

ಬೆಳ್ತಗಂಡಿ (ಅ.13) ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿನ ಸೌಜನ್ಯ ಪ್ರಕರಣ 14 ವರ್ಷದ ಬಳಿಕ ಮರು ತನಿಖೆ ಆರಂಭಗೊಂಡಿದೆ. ಐಜಿಪಿ ಶಶಿಕುಮಾರ್ ಇಂದು (ಅ.13) ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸೌಜನ್ಯ ಪ್ರಕರಣ ಕುರಿತು ವಕೀಲ ಅಮೃತೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನ್ಯಾಯವಾದಿ ಅಮೃತೇಶ್ ಸುದ್ದಿಗೋಷ್ಠಿ ವೇಳೆ ಸೌಜನ್ಯ ತಾಯಿ, ತಂದೆ ಹಾಗೂ ಮಾವ ಮಾಡಿದ್ದ ಹಳೆಯ ಸುದ್ದಿಗೋಷ್ಠಿ ವಿಡಿಯೋ ಪ್ರಸಾರ ಮಾಡಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

ಸೌಜನ್ಯ ಪೋಷಕರು, ಮಾವನ ಸುದ್ದಿಗೋಷ್ಠಿಯಲ್ಲಿ ಏನಿದೆ

ಸೌಜನ್ಯ ಘಟನೆ ನಡೆದ ಬಳಿಕ 2012ರಲ್ಲಿ ಸೌಜನ್ಯ ತಾಯಿ, ತಂದೆ ಹಾಗೂ ಮಾವ ಜೊತೆ ಸೇರಿ ಸುದ್ದಿಗೋಷ್ಠಿ ಮಾಡಿದ್ದರು. ಈ ಸುದ್ದಿಗೋಷ್ಠಿ ವಿಡಿಯೋವನ್ನು ನ್ಯಾಯವಾದಿ ಅಮೃತೇಷ್ ಪ್ರಸಾರ ಮಾಡಿ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ಸೌಜನ್ಯ ಪೋಷಕರು 2012ರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದ ಪರವಾಗಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದವರು ಬೆಂಬಲ ನೀಡಿದ್ದಾರೆ. ಧರ್ಮಸ್ಥಳದವರು ಯಾವುದೇ ಭೂಮಿಯ ವಿಚಾರಕ್ಕಾಗಿ ಒತ್ತಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಬಳಿಕ ನಿಧಾನವಾಗಿ ಈ ಪ್ರಕರಣದಲ್ಲಿ ಸೌಜನ್ಯ ಪೋಷಕರು ಧರ್ಮಸ್ಥಳ ವಿರುದ್ಧ ಹೇಳಿಕೆ ಆರಂಭಿಸಿದ್ದಾರೆ ಎಂದು ನ್ಯಾಯವಾದಿ ಹೇಳಿದ್ದಾರೆ.

17/11/2012 ನಡೆದ ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳದಿಂದ ಯಾವುದೇ ಒತ್ತಡ ಇರಲಿಲ್ಲ ಎಂದಿದ್ದಾರೆ. ಪ್ರಕರಣದಲ್ಲಿ ಧರ್ಮಸ್ಥಳದವರು ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಸೌಜನ್ಯ ಪೋಷಕರ ಸುದ್ದಿಗೋಷ್ಠಿ ಬಳಿಕ 2012ರಲ್ಲಿ ನಡೆಸಿದ ಸ್ಥಳ ಮಹಜರು ವಿಡಿಯೋವನ್ನು ಪ್ರಸಾರ ಮಾಡಲಾಗಿದೆ. ಈ ಪ್ರಕರಣ ಸಂಬಂಧ ನ್ಯಾಯವಾದಿ ಅಮೃತೇಶ್ ಕೆಲ ವಿಚಾರ ಪ್ರಸ್ತಾಪಿಸಿದ್ದಾರೆ.

ದೇವಸ್ಥಾನ, ಮಠಗಳ ಟಾರ್ಗೆಟ್

ಹಲವಾರು ವರ್ಷಗಳಿಂದ ಸೌಜನ್ಯ ಹೆಸರೇಳಿದ ಕೂಡಲೇ ಕುತೂಹಲ ಶುರುವಾಗುತ್ತೆ. ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶದಲ್ಲೇ ಕುತೂಹಲ ಮೂಡಿಸಿದ ಪ್ರಕರಣ ಇದು. 14 ವರ್ಷಗಳ ನಂತರ ಧರ್ಮಸ್ಥಳ ಪೊಲೋಸರು ಮಿಸ್ಸಿಂಗ್ ಕಂಪ್ಲೈಂಟ್ ತಗೋತಾರೆ. ಸಿಐಡಿ, ಎಸ್ಐಟಿ ಹೀಗೆ ಹಂತ ಹಂತವಾಗಿ ತನಿಖಾ ಸಂಸ್ಥೆಗಳು ತನಿಖೆ ಮಾಡುತ್ತಲೇ ಇದೆ. ದೇವಸ್ಥಾನಗಳನ್ನು, ಮಠ ಮಾನ್ಯಗಳನ್ನ ಟಾರ್ಗೆಟ್ ಮಾಡುವ ಒಂದು ಗುಂಪಿದೆ. ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದವರ ಕೈವಾಡ ಅನ್ನೋ ಗುಲ್ಲೇಬ್ಬಿಸಿದ್ದರು. ಹಲವು ಆರೋಪಗಳನ್ನು ಮಾಡಿದರು. ಸಾಕ್ಷ್ಯವಿದೆ ಎಂದು ಅಲೆದಾಡಿದರು. ಆದರೆ ಕೋರ್ಟ್‌ಗಾಗಲಿ, ಪೊಲೀಸರಿಗಾಗಲಿ ಈ ಸಾಕ್ಷ್ಯ ಕೊಡಲೇ ಇಲ್ಲ. ಆದರೆ ಪ್ರಕರಣದ ಹೆಸರಿನಲ್ಲಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದು ಅಮೃತೇಶ್ ಹೇಳಿದ್ದಾರೆ.