Digital Pay Facility in BRTS: ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ನಲ್ಲಿ ಇನ್ಮುಂದೆ ಡಿಜಿಟಲ್‌ ಪೇ

*  ಹುಬ್ಬಳ್ಳಿ, ಧಾರವಾಡ ಟರ್ಮಿನಲ್‌, 33 ಜಂಕ್ಷನ್‌ಗಳಲ್ಲಿ ಹೊಸ ವ್ಯವಸ್ಥೆ ಶೀಘ್ರ
*  ಜಂಕ್ಷನ್‌ಗಳಲ್ಲಿ ವೈಫೈ ಸೌಲಭ್ಯಕ್ಕೆ ಚಿಂತನೆ
*  ವಿದ್ಯಾರ್ಥಿಗಳು, ಯುವಕರಿಂದ ವೈಫೈ ಸೌಲಭ್ಯಕ್ಕೆ ಹೆಚ್ಚಿನ ಬೇಡಿಕೆ 
 

Soon Make Digital Pay in BRTS at Hubballi Dharwad grg

ಮಯೂರ ಹೆಗಡೆ

ಹುಬ್ಬಳ್ಳಿ(ಡಿ.05):  ಬಿಆರ್‌ಟಿಎಸ್‌(BRTS) ಬಸ್‌ ನಿಲ್ದಾಣದಲ್ಲಿ ಟಿಕೆಟ್‌ಗಾಗಿ ನಗದಿನ ಜತೆಗೆ ಡಿಜಿಟಲ್‌ ಪೇ(Digital Pay) ವ್ಯವಸ್ಥೆ ಜಾರಿಗೆ ತರಲು ಸಂಸ್ಥೆ ಯೋಜಿಸಿದೆ. ಇನ್ನೊಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ. ಪ್ರಸ್ತುತ 22 ಕಿಮೀ ಬಿಆರ್‌ಟಿಎಸ್‌ ಪಥದಲ್ಲಿ 85 ಚಿಗರಿ ಬಸ್ಸುಗಳು(Chigari Bus) ಪ್ರತಿನಿತ್ಯ ಓಡಾಡುತ್ತಿವೆ. ಬಸ್‌ ಪಾಸ್‌ ಹೊಂದಿದವರು ಸೇರಿ ಸರಿಸುಮಾರು 55-60ಸಾವಿರ ಪ್ರಯಾಣಿಕರು(Passengers) ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇ ಪಾಸ್‌(E Pass), ಇ ವಾಲೆಟ್‌(E Vallet) ಸೇರಿ ಹಲವು ಸೌಲಭ್ಯವನ್ನು ಒದಗಿಸುತ್ತಿರುವ ಬಿಆರ್‌ಟಿಎಸ್‌ ಇದೀಗ ಗ್ರಾಹಕರಿಗೆ ಡಿಜಿಟಲ್‌ ಪೇ ಸೌಕರ್ಯ ನೀಡಲು ಮುಂದಾಗಿದೆ.

ಈ ಬಗ್ಗೆ ಮಾತನಾಡಿದ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ, ಹೊಸೂರು ಬಿಆರ್‌ಟಿಎಸ್‌ ಟರ್ಮಿನಲ್‌ ಹಾಗೂ ಧಾರವಾಡದ(Dharwad) ಟರ್ಮಿನಲ್‌ ಸೇರಿದಂತೆ ಎಲ್ಲ 33 ಜಂಕ್ಷನ್‌ಗಳ 66 ಕೌಂಟರ್‌ಗಳಲ್ಲಿ ನಗದಿನ ಜತೆಗೆ ಡಿಜಿಟಪ್‌ ಪೇ ವ್ಯವಸ್ಥೆ ಜಾರಿಗೆ ಮುಂದಾಗಿದ್ದೇವೆ. ಈಗಾಗಲೇ ಫೋನ್‌ ಪೇ(Phone Pay) ಹಾಗೂ ಪೇಟಿಎಂ(Paytm) ಸಂಸ್ಥೆಗಳ ಜತೆಗೆ ಚರ್ಚಿಸಿದ್ದು, ಅವರು ಒಪ್ಪಿದ್ದಾರೆ. ಇನ್ನೆರಡು ವಾರದಲ್ಲಿ ಇದನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.

ಲಾಕ್‌ಡೌನ್‌ ಎಫೆಕ್ಟ್‌: BRTS ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ..!

ಇನ್ನು, ಚಿಗರಿಯನ್ನು ಹೆಚ್ಚಾಗಿ ಯುವ ಸಮುದಾಯವೆ ಬಳಸುತ್ತಿದೆ. ನಗದು ರಹಿತ(Cashless) ವ್ಯವಹಾರವೆ ಹೆಚ್ಚಾಗಿರುವ ಕಾರಣ ಇದನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಸರ್ಕಾರಿ ಸಾಮ್ಯದ ಸಂಸ್ಥೆಗಳಿಗೆ ಪೇಟಿಎಂ, ಫೋನ್‌ ಪೇ ಕಂಪನಿಗಳು ಉಚಿತ ಸೇವೆ ಒದಗಿಸಬೇಕಾಗಿದೆ. ಹೀಗಾಗಿ ಡಿಜಿಟಲ್‌ ಪೇ ವ್ಯವಸ್ಥೆ ನಮಗೆ ಯಾವುದೆ ಶುಲ್ಕವಿಲ್ಲದೆ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಎಲ್ಲೆಡೆ ಡಿಜಿಟಲ್‌ ಪೇ ನಡೆಯುತ್ತಿದೆ. ಜಂಕ್ಷನ್‌ಗಳಲ್ಲಿ ಇದನ್ನು ಜಾರಿಗೊಳಿಸಿದರೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ. ಚಿಲ್ಲರೆ ಕುರಿತ ಕಿರಿಕಿರಿಯೂ ತಪ್ಪಲಿದೆ. ಕೆಲ ದಿನಗಳ ಕಾಲ ಪ್ರಾಯೋಗಿಕವಾಗಿ ಇದನ್ನು ನಡೆಸಿ ಬಳಿಕ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಉಚಿತ ವೈಫೈ:

ಇದಲ್ಲದೆ, ಬಿಆರ್‌ಟಿಎಸ್‌ನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಲು ಎಲ್ಲ ನಿಲ್ದಾಣದಲ್ಲಿ ವೈಫೈ(WiFi) ಸಂಪರ್ಕ ನೀಡಲು ಕೂಡ ಸಂಸ್ಥೆ ಯೋಜಿಸಿದೆ. ಇದಕ್ಕಾಗಿ ಬಿಎಸ್‌ಎನ್‌ಎಲ್‌(BSNL) ಜತೆಗೆ ಮಾತುಕತೆ ನಡೆಸಿದೆ. ಎಲ್ಲ ಜಂಕ್ಷನ್‌ಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌ ಒದಗಿಸಲು ಕೋರಲಾಗಿದೆ.

ವಿದ್ಯಾರ್ಥಿಗಳು(Students), ಯುವಕರಿಂದ ವೈಫೈ ಸೌಲಭ್ಯಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಕೋವಿಡ್‌(Covid19) ಪೂರ್ವದಲ್ಲಿಯೆ ಇದನ್ನು ಅಳವಡಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪಿಡುಗಿನ ಕಾರಣದಿಂದ ಯೋಜನೆ ಜಾರಿಯಾಗಿರಲಿಲ್ಲ. ಈಗ ಪುನಃ ವೈಫೈ ಒದಗಿಸಲು ನಿರ್ಧಾರವಾಗಿದೆ. ಆದರೆ, ಗ್ರಾಹಕರಿಗೆ ಯಾವ ರೀತಿ ವೈಫೈ ಒದಗಿಸಬೇಕು. ವೈಫೈಗೆ ಪ್ರತ್ಯೇಕ ಶುಲ್ಕ ವಿಧಿಸಬೇಕೆ?, ಉಚಿತವಾಗಿ ನೀಡಬೇಕೆ ಅಥವಾ ಉಚಿತವಾಗಿ ನೀಡುವುದಾದರೆ ಸಮಯ ಮಿತಿ ಹೇರಬೇಕು ಎಂಬುದು ಇನ್ನಷ್ಟೆ ತೀರ್ಮಾನ ಆಗಬೇಕಿದೆ.

ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್‌ನಲ್ಲಿ ಸಂಚರಿಸಿದ ಉಪರಾಷ್ಟ್ರಪತಿ!

ಹಿಂದೆ ಹಳೆ ಬಸ್‌ ನಿಲ್ದಾಣದಲ್ಲಿ ಸಚಿವ ಜೋಶಿ ಅವರು ವೈಫೈ ಸಂಪರ್ಕ ಸೇವೆ ನೀಡಿದ್ದರು. ಅದೇ ಮಾದರಿಯಲ್ಲಿ ಈಗ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಇನ್ನೊಂದು ವಾರದಲ್ಲಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳ ಜತೆ ಪುನಃ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಯುವಕರು ಹೆಚ್ಚಾಗಿ ಬಿಆರ್‌ಟಿಎಸ್‌ ಬಳಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಡಿಜಿಟಲ್‌ ಪೇ ವ್ಯವಸ್ಥೆ ಜಾರಿಗೆ ಮುಂದಾಗಿದ್ದೇವೆ. ಇನ್ನು ವೈಫೈ ವ್ಯವಸ್ಥೆ ಕಲ್ಪಿಸುವ ಕುರಿತು ಬಿಎಸ್‌ಎನ್‌ಎಲ್‌ ಜತೆಗೆ ಚರ್ಚೆ ನಡೆದಿದೆ ಅಂತ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios