ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್‌ನಲ್ಲಿ ಸಂಚರಿಸಿದ ಉಪರಾಷ್ಟ್ರಪತಿ!
ಬಿಆರ್‌ಟಿಎಸ್ ಬಸ್‌ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು| ಬಸ್‌ನಲ್ಲಿ ಸಂಚರಿಸಿದ ವೆಂಕಯ್ಯ ನಾಯ್ಡು|
ಹುಬ್ಬಳ್ಳಿ(ಫೆ.03): ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಬಿಆರ್‌ಟಿಎಸ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವನಗರದ ವರೆಗೂ ಬಸ್‌ನಲ್ಲೇ ಸಂಚರಿಸಿದ್ದು ವಿಶೇಷವಾಗಿತ್ತು.
'ಹುಬ್ಬಳ್ಳಿ- ಧಾರವಾಡ ಸುಂದರವಾಗಲು BRTS ವರದಾನ'
ಬಿಆರ್‌ಟಿಎಸ್ ಬಸ್ ಸಂಚಾರ, ನಿಲ್ದಾಣಕ್ಕೆ ಚಾಲನೆ ನೀಡಿದ ಬಳಿಕ ಬಿಆರ್‌ಟಿಎಸ್ ಬಸ್ ಹತ್ತಿದರು. ನವನಗರದ ವರೆಗೆ ತೆರಳಿ ಅಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ಬಸ್‌ನಲ್ಲಿ ಯೋಜನೆ ಕುರಿತು ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ವಿವರಿಸಿದರು. ಸಚಿವರಾದ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸೇರಿದಂತೆ ಹಲವು ಉಪರಾಷ್ಟ್ರಪತಿಗಳಿಗೆ ಸಾಥ್ ನೀಡಿದರು.