ಮೈಸೂರು ಅರಮನೆಯ ಮುಂದೆ ಬೀದಿಬದಿ ವ್ಯಾಪಾರ ಮಾಡುತ್ತಾ ಅದರ ಜೊತೆಜೊತೆಗೆ ವಿದ್ಯಾಭ್ಯಾಸ  ಎಲ್‌ಎಲ್‌ಬಿ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ

 ಮೈಸೂರು (ನ.04): ಮೈಸೂರು (Mysuru) ಅರಮನೆಯ (Palace) ಮುಂದೆ ಬೀದಿಬದಿ ವ್ಯಾಪಾರ ಮಾಡುತ್ತಾ ಅದರ ಜೊತೆ ಜೊತೆಗೆ ವಿದ್ಯಾಭ್ಯಾಸ (Study) ಮಾಡಿಕೊಂಡು ಇಂದು ಎಲ್‌ಎಲ್‌ಬಿ (LLB) ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಯುವ ವಕೀಲನಾಗಿ(Lawyer) ಹೊರಹೊಮ್ಮಿದ್ದಾರೆ.

ನಗರದ ಕ್ಯಾತಮಾರನಹಳ್ಳಿಯ ರಾಜು ಮತ್ತು ಲಕ್ಷ್ಮೀ ದಂಪತಿಯ ದ್ವಿತೀಯ ಪುತ್ರ ಆರ್‌. ಹರೀಶ್‌ (R harish) ಎಂಬವರೇ ಯುವ ವಕೀಲನಾಗಿರುವುದು.

ತಂದೆ ಗಾರೆ ಕೆಲಸ ಮತ್ತು ತಾಯಿಯು ಹೋಟೆಲ್‌ನಲ್ಲಿ (Hotel) ಕೂಲಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಈತನು ಗಾರೆ ಕೆಲಸ, ಕೂಲಿ ಕೆಲಸ, ಫ್ಲಂಬಿಂಗ್‌, ಎಲೆಕ್ಟ್ರಿಕ್‌ ಕೆಲಸಗಳನ್ನು ಮಾಡುತ್ತಾ ಮನೆಗೆ ತನ್ನ ಅಣ್ಣನ ಜೊತೆಗೆ ಬೆಂಬಲವಾಗಿ ನಿಂತಿದ್ದಾರೆ. ಕೊರೋನಾ (corona) ಕಾರಣದಿಂದಾಗಿ ಎಲ್ಲೂ ಕೆಲಸ ಸಿಗದಿದ್ದಾಗ ತನ್ನ ವಿಭಿನ್ನ ಆಲೋಚನೆಯಿಂದಾಗಿ ಇಷ್ಟು ದಿನದವರೆಗೆ ಯಾರೂ ಮಾಡದೇ ಇರುವ ವ್ಯಾಪಾರವನ್ನು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮುಂಜಾನೆ ಹೊತ್ತು ಸೇರುವ ಸಾವಿರಾರು ಪಾರಿವಾಳಗಳ ಹಿಂಡಿಗೆ ಆಹಾರ ಮಾರುವ ವ್ಯಾಪಾರವನ್ನು ಪ್ರಾರಂಭಿಸಿ ಅವನ ವಿದ್ಯಾಭ್ಯಾಸದ ಖರ್ಚನ್ನು ಇದರಿಂದ ನಿಭಾಯಿಸಿಕೊಂಡು ಮನೆಗೂ ಕೂಡಾ ಆಸರೆಯಾಗಿದ್ದಾರೆ. ಸಾವಿರಾರು ಪಕ್ಷಿಗಳಿಗೆ ಆಹಾರವನ್ನು ನೀಡುತ್ತಾ ವ್ಯಾಪಾರದ ಜೊತೆಗೆ ಅವುಗಳ ಸೇವೆಯನ್ನು ಕೂಡ ಮಾಡುತ್ತಿದ್ದಾರೆ.

ಜಾನಪದ ಕಲಾವಿದನೂ ಹೌದು--

ಹರೀಶ್‌ ಕೇವಲ ಒಬ್ಬ ವ್ಯಾಪಾರಿ ಅಥವಾ ವಿದ್ಯಾರ್ಥಿಯಲ್ಲದೆ (Student) ಒಬ್ಬ ಅತ್ಯುತ್ತಮ ಜಾನಪದ ಕಲಾವಿದನು (Folk artist) ಕೂಡ ಹೌದು. ಉತ್ತಮ ತಮಟೆ ವಾದಕ ಜಾನಪದ ಹಾಡುಗಾರ ಹಾಗೂ ಉತ್ತಮ ಹಾಸ್ಯ ಕಲಾವಿದನಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ಮನೆಯ ಅಕ್ಕಪಕ್ಕದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಬಿಡುವಿನ ವೇಳೆಯಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾನೆ. ಇಂತಹ ಸಾಧಕನ ಶ್ರಮಕ್ಕೆ ಪ್ರತಿಯೊಬ್ಬರೂ ಕೂಡ ಪ್ರಶಂಸಿಸಬೇಕು, ಬಡತನದಲ್ಲಿದ್ದುಕೊಂಡು ಉನ್ನತ ವಿದ್ಯಾಭ್ಯಾಸದಲ್ಲಿ ಇಂತಹ ಸಾಧನೆ ಮಾಡಿದಂತಹ ಈ ಛಲಗಾರನನ್ನು ನಮ್ಮ ರಾಜ್ಯ ಸರ್ಕಾರವು ಪ್ರೋತ್ಸಾಹಿಸಿದರೆ ಇನ್ನು ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ಹಲವಾರು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತರುವ ಈ ಸಂದರ್ಭದಲ್ಲಿ ಈ ಯುವಕನು ಎಲ್ಲರಿಗೂ ಮಾದರಿಯಾಗಿದ್ದಾರೆ. ಹರೀಶ್‌ ಅವರ ಮೊ.ನಂ. 8553238582 ಸಂಪರ್ಕಿಸಿ.

  • ಮೈಸೂರು ಅರಮನೆಯ ಮುಂದೆ ಬೀದಿಬದಿ ವ್ಯಾಪಾರ 
  • ಜೊತೆಜೊತೆಗೆ ವಿದ್ಯಾಭ್ಯಾಸ ಮಾಡಿಕೊಂಡು ಇಂದು ಎಲ್‌ಎಲ್‌ಬಿ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
  • ವಕೀಲನಾದ ಮೈಸೂರು ಕೂಲಿ ಕಾರ್ಮಿಕನ ಮಗ
  • ಕ್ಯಾತಮಾರನಹಳ್ಳಿಯ ರಾಜು ಮತ್ತು ಲಕ್ಷ್ಮೀ ದಂಪತಿಯ ದ್ವಿತೀಯ ಪುತ್ರ ಆರ್‌. ಹರೀಶ್‌ 
  • ತಂದೆ ಗಾರೆ ಕೆಲಸ ಮತ್ತು ತಾಯಿಯು ಹೋಟೆಲ್‌ನಲ್ಲಿ ಕೂಲಿ ಕೆಲಸ 
  • ತಂದೆ ಗಾರೆ ಕೆಲಸ ಮತ್ತು ತಾಯಿಯು ಹೋಟೆಲ್‌ನಲ್ಲಿ ಕೂಲಿ ಕೆಲಸ 
  • ಕೊರೋನಾ ಕಾರಣದಿಂದಾಗಿ ಎಲ್ಲೂ ಕೆಲಸ ಸಿಗದಿದ್ದಾಗ ತನ್ನ ವಿಭಿನ್ನ ಆಲೋಚನೆ
  •  ಮುಂಜಾನೆ ಹೊತ್ತು ಸೇರುವ ಸಾವಿರಾರು ಪಾರಿವಾಳಗಳ ಹಿಂಡಿಗೆ ಆಹಾರ ಮಾರುವ ವ್ಯಾಪಾರ

ಪುತ್ತೂರು ವಿದ್ಯಾರ್ಥಿನಿ ಸಾಧನೆ

ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾರ್ಥಿನಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಂಗ ವೈಕಲ್ಯ ಮೆಟ್ಟಿ ನಿಂತು ನೀಟ್ ಪ್ರವೇಶ‌ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸಾಧನೆ ಮಾಡಿದ್ದಾಳೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿ ನೀಟ್ ಪ್ರವೇಶ ಪರೀಕ್ಷೆಯ ಪಿಡಬ್ಲ್ಯುಡಿ(ಅಂಗವೈಕಲ್ಯವುಳ್ಳವರ) ವಿಭಾಗದಲ್ಲಿ ದೇಶಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾಳೆ.