ಚಿಕ್ಕಮಗಳೂರು: ಯೋಧನ ಸಾವು ಇಂದಿಗೂ ನಿಗೂಢ, ಪೊಲೀಸರ ಬಳಿ ಹೆತ್ತವರು ಕೇಳಿದ್ದು ಮೂರೇ ಮೂರು..!

ಮೃತ ದೀಪಕ್ ಗೆ ಸೇನೆಯ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಆದರೆ, ಸಾವು ಇಂದಿಗೂ ನಿಗೂಢವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದರು ಅನ್ನೋದು ಹೇಗೆ, ಯಾವ ವಾಹನ ಅನ್ನೋದು ಇಂದಿಗೂ ನಿಗೂಢ. ಹಾಗಾಗಿ, ಮೃತ ಪೋಷಕರ ಬಳಿ ಮೂರು ವಸ್ತುಗಳಾಗಿ ಮನವಿ ಮಾಡುತ್ತಿದ್ದಾರೆ. 

Soldier Family Resents the Police in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.28): ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ತಣಿಗೆಬೈಲು ನಿವಾಸಿ ದೀಪಕ್ ,ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ. 2018ರಲ್ಲಿ ಸೇನೆಗೆ ಸೇರಿದ ಈತ ನಾಲ್ಕೇ ವರ್ಷಕ್ಕೆ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿದ್ದ. 2020ರಲ್ಲಿ ಮದ್ವೆ ಕೂಡ ಆಗಿತ್ತು. ರಜೆ ಮೇಲೆ ಊರಿಗೆ ಬಂದಿದ್ದ ದೀಪಕ್ ಡ್ಯೂಟಿಗೆ ವಾಪಸ್ ಹೋಗುವಾಗ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. 

ಹೆತ್ತವರು ಪೊಲೀಸರ ಬಳಿ ಕೇಳಿದ್ದು ಮೂರೇ ಮೂರು

ಮೃತ ದೀಪಕ್ ಗೆ ಸೇನೆಯ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಆದರೆ, ಸಾವು ಇಂದಿಗೂ ನಿಗೂಢವಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದರು ಅನ್ನೋದು ಹೇಗೆ, ಯಾವ ವಾಹನ ಅನ್ನೋದು ಇಂದಿಗೂ ನಿಗೂಢ. ಹಾಗಾಗಿ, ಮೃತ ಪೋಷಕರ ಬಳಿ ಮೂರು ವಸ್ತುಗಳಾಗಿ ಮನವಿ ಮಾಡುತ್ತಿದ್ದಾರೆ. ಸೈನಿಕರು ದೇಶ ಕಾದ್ರೆ, ಪೊಲೀಸರು ಸಮಾಜ ಕಾಯ್ತಾರೆ. ಇಬ್ರು ಸೈನಿಕರೇ. ಆದ್ರೆ, ಎದೆ ಮಟ್ಟದ ಸೈನಿಕ ಮಗನನ್ನ ಕಳೆದುಕೊಂಡ ಆ ಹೆತ್ತವರು ಪೊಲೀಸರ ಬಳಿ ಕೇಳಿದ್ದು ಮೂರೇ ಮೂರು. ಅವನ ಕೊರಳಿದ್ದ ಸರ್, ಕೈಯಲ್ಲಿದ್ದ ಉಂಗುರ, ಜೇಬಲ್ಲಿದ್ದ ಹಣವನ್ನಲ್ಲ. ಮೊಬೈಲ್, ವಾಚ್ ಹಾಗೂ ಹೆಲ್ಮೇಟ್ ಕೊಡಿ ಅಂತ ಅಷ್ಟೆ. 22 ವರ್ಷದ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ ಮಗನನ್ನ ಕಳೆದುಕೊಂಡ ಹೆತ್ತವರು ಆ ವಸ್ತುಗಳಿಗಾಗಿ ಕಣ್ಣೀರಿಡ್ತಿದ್ದಾರೆ.   

ನೂತನ ಸಂಸತ್ ಉದ್ಘಾಟನೆಗೆ ಶೃಂಗೇರಿ ಶಾರದಾ ಪೀಠದ ಪುರೋಹಿತರು, 2020ರಲ್ಲಿ ಇವರಿಂದಲೇ ನಡೆದಿತ್ತು ಭೂಮಿ ಪೂಜೆ

ಮೃತ ದೀಪಕ್ ಪೋಷಕರು ನಮ್ಮ ಮಗನೇ ಹೋದ. ಆತನ ಮೈಮೇಲಿದ್ದ ಚಿನ್ನ-ದುಡ್ಡು ಯಾವ್ದು ಬೇಡ. ಆತನ ಮೊಬೈಲ್, ವಾಚ್, ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೊಬೈಲ್ನಲ್ಲಿ ಆರ್ಮಿಯ ಸೀಕ್ರೇಟ್ ಕೋಡ್ ಇದೆ ಎಂದು ಹೇಳುತ್ತಿದ್ದ, ಹೆಲ್ಮೇಟ್ನಲ್ಲಿ ಕ್ಯಾಮರಾ ಇದೆ. ಅವನ ಸಾವಿಗೆ ಕಾರಣವಾದ್ರು ಗೊತ್ತಾಗಬಹುದು. ದಯವಿಟ್ಟು ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. 

ಪೊಲೀಸರ ವಿರುದ್ಧ  ಯೋಧನ ಕುಟುಂಬ ಅಸಮಾಧಾನ

ಇದೇ 19ರಂದು ಊರಿಗೆ ಬಂದಿದ್ದ ದೀಪಕ್ ಡ್ಯೂಟಿಗೆ ಹೋಗೋದಕ್ಕೆ 24ನೇ ತಾರೀಖು ಬೆಂಗಳೂರಿಗೆ ಹೋಗುವಾಗ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಣಿಗಲ್ ತಾಲೂಕಿನ ಹೇಮಾವತಿ ಕ್ರಾಸ್ ಬಳಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ, ದೀಪಕ್ ಪೋಷಕರು ಹಣ-ಚಿನ್ನ ಬೇಡ. ಮೊಬೈಲ್ನಲ್ಲಿ ಸೇನೆ ಮತ್ತೆ ಇತರೆ ದಾಖಲೆಗಳಿವೆ, ಹೆಲ್ಮೇಟ್ನಲ್ಲಿ ಕ್ಯಾಮರಾ ಇದೆ ಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಬೈಕಿಗೆ ಅಪಘಾತ ಮಾಡಿದ ಲಾರಿಯವನು ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಮನೆಯವರು ಫೋನ್ ಮಾಡಿದಾಗ ಲಾರಿ ಚಾಲಕನೇ ಅಪಘಾತವಾಗಿದೆ, ಆಸ್ಪತ್ರೆಗೆ ಬನ್ನಿ ಎಂದಿದ್ದಾನೆ. ದೀಪಕ್ ಸ್ನೇಹಿತ ಫೋನ್ ಮಾಡಿದಾಗಲು ಲಾರಿ ಚಾಲಕ ಗುದ್ದಿದ್ದೇನೆ, ಗಾಬರಿ ಆಯ್ತು ಅದಕ್ಕೆ ಬಂದುಬಿಟ್ಟೆ ಆಸ್ಪತ್ರೆಗೆ ಹೋಗಿ ಎಂದಿದ್ದಾನೆ. 

ವಿಧಾನಸಭೆ ನೂತನ ಸ್ಪೀಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವನ ವಿರುದ್ಧ ಸೈಬರ್ ಕ್ರೈಂಗೆ ದೂರು

ಪೊಲೀಸರು ಫೋನ್ ಮಾಡಿದಾಗಲು ನೆಲಮಂಗಲದಲ್ಲಿ ಇದ್ದೇನೆ ಬಂದು ಫೋನ್ ತೆಗೆದುಕೊಂಡು ಹೋಗಿ ಎಂದನಂತೆ. ಪೊಲೀಸರು ಲೊಕೇಶನ್ ಆಧಾರದ ಮೇಲೆ ಅವನನ್ನ ಹಿಡಿಯಬಹುದಿತ್ತು. ಇನ್ನೂ ಹಿಡಿದಿಲ್ಲ ಎಂದು ಆರೋಪಿಸಿರೋ ಕುಟುಂಬಸ್ಥರು, ಪೊಲೀಸರು ಯೋಧರಿಗೂ ಹೀಗೆ ಮಾಡ್ತಾರಾ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಪೊಲೀಸರೋ ಇರೋದೇ ಸಮಾಜದ ಶಾಂತಿ ಕಾಪಾಡೋದ್ರ ಜೊತೆ ನೊಂದವರಿಗೆ ನ್ಯಾಯ ಕೊಡಿಸೋದಕ್ಕೆ. ಆದರೆ, ಓರ್ವ ಯೋಧನ ಸಾವಿಗೂ ಈ ರೀತಿ ಮಾತನಾಡ್ತಾರೆ ಅಂದ್ರೆ ಪೊಲೀಸರು ದೇಶದೊಳಗಿರುವ ಸೈನಿಕರು ಅನ್ನೋದು ತಪ್ಪು ಅನ್ಸತ್ತೆ.ಮಗನನ್ನ ಕೊಡೋದಕ್ಕೆ ಆಗಲ್ಲ ನಿಜ. ಆತನ ವಸ್ತುಗಳನ್ನಾದ್ರು ಅವರಿಗೆ ಹಿಂದುರುಗಿಸಿ, ಆ ಸಾವಿಗೆ ನ್ಯಾಯ ಕೊಡಿಸಬಹುದಾಗಿದೆ.

Latest Videos
Follow Us:
Download App:
  • android
  • ios