Asianet Suvarna News Asianet Suvarna News

ನೂತನ ಸಂಸತ್ ಉದ್ಘಾಟನೆಗೆ ಶೃಂಗೇರಿ ಶಾರದಾ ಪೀಠದ ಪುರೋಹಿತರು, 2020ರಲ್ಲಿ ಇವರಿಂದಲೇ ನಡೆದಿತ್ತು ಭೂಮಿ ಪೂಜೆ

ದೇಶದ ನೂತನ ಸಂಸತ್ ಭವನ ನಾಳೆ ಲೋಕಾರ್ಪಣೆಗೊಳ್ಳುತ್ತಿದ್ದು ಇದಕ್ಕೂ  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೂ ಅವಿನಾಭವ ಸಂಬಂಧವಿದೆ.

Sringeri priests to perform puja during new Parliament  inauguration gow
Author
First Published May 27, 2023, 9:58 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.27): ದೇಶದ ನೂತನ ಸಂಸತ್ ಭವನ ನಾಳೆ ಲೋಕಾರ್ಪಣೆಗೊಳ್ಳುತ್ತಿದ್ದು ಇದಕ್ಕೂ  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೂ ಅವಿನಾಭವ ಸಂಬಧವಿದೆ. ಈ ಉದ್ಘಾಟನೆಯ ಪೂಜಾ ಕಾರ್ಯ ಕ್ರಮಗಳಿಗೆ ಶೃಂಗೇರಿ ಪೀಠದಿಂದ ಪುರೋಹಿತರು ತೆರಳಿದ್ದಾರೆ. 2020ರಲ್ಲಿ ಶ್ರೀ ಮಠದಿಂದ ಪುರೋಹಿತರು ತೆರಳಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಭವನದ ಭೂಮಿಪೂಜೆಯನ್ನು ನೆರವೇರಿಸಿದ್ದರು.

New Parliament Building: ಜಗತ್ತಿನ ಬೃಹತ್‌ ಪ್ರಜಾಪ್ರಭುತ್ವ ದೇಗುಲದ ಒಳನೋಟ!

ಲೋಕಾರ್ಪಣೆಗೂ ಶ್ರೀ ಮಠದ ಪುರೋಹಿತರು:
ಲೋಕಾರ್ಪಣೆಗೆ ಕೂಡ ಶೃಂಗೇರಿ ಮಠದಿಂದ ಸೀತಾರಾಮ ಶರ್ಮ, ಶ್ರೀ ರಾಮ ಶರ್ಮ ಮತ್ತು ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುಲಿದೆ. ಉದ್ಘಾ ಟನೆಯ ಮುನ್ನ ದಿನವಾದ ಇಂದು 6 ಜನ ಪುರೋಹಿತರಿಂದ ವಾಸ್ತು ಹೋಮ ಪೂಜೆ ನಡೆಯಿತು.ನಾಳೆ ಮಹಾಗಣಪತಿ ಹೋಮ ನಡೆಯಲಿದೆ ಎಂದು ಶ್ರೀ ಮಠದ  ಮೂಲಗಳಿಂದ ತಿಳಿದು ಬಂದಿದೆ. 2020 ರಲ್ಲಿ ಸಂಸತ್ ಭವನದ ಭೂಮಿಪೂಜೆ ಶಿವಕುಮಾರ ಶರ್ಮಾ ನೇತೃತ್ವದಲ್ಲಿ ನಡೆದಿತ್ತು.

ಮೋದಿ ನೂತನ ಸಂಸತ್ ಉದ್ಘಾಟನೆ ಮಾಡಬಾರದಂತೆ: ಕೆಂಡ ಕಾರುತ್ತಿರುವುದೇಕೆ 19 ವಿಪಕ್ಷಗಳು..?

ಪ್ರಧಾನಿ ಮೋದಿ ಅವರ ಆಪೇಕ್ಷೆಯಂತೆ ಭಾರತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶೃಂಗೇರಿ ಮಠದಿಂದ ಡಾ.ಶಿವಕುಮಾರ ಶರ್ಮ, ಲಕ್ಷ್ಮೀನಾರಾಯಣ ಸೋಮಯಾಜಿ, ಶ್ರೀ ಗಣೇಶ ಸೋಮಯಾಜಿ ಹಾಗೂ ದೆಹಲಿಯ ಶೃಂಗೇರಿ ಶಾರದಾ ಪೀಠದ ಶಾಖಾ ಮಠದಿಂದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ಟ, ದೆಹಲಿಯ ಶಾರದ ಪೀಠದ ವೇದ ಶಾಲಾ ಅಧ್ಯಾಪಕ ರಾಘವೇಂದ್ರ ಭಟ್ಟ ಈ 6 ಜನ ವಿದ್ವಾಂಸರು ತೆರಳಿ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ನಾಳೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ  ಶೃಂಗೇರಿ ಪುರೋಹಿತರರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುಲಿದೆ.

ಮೇ 28ರಂದು ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್‌ ಭವನ ಹಲವು ವಿಶೇಷತೆಗಳಿಗೆ, ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಇದುವರೆಗೂ ಸಂಸತ್‌ ಕಟ್ಟಡವನ್ನು ‘ಪಾರ್ಲಿಮೆಂಟ್‌ ಹೌಸ್‌’ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಸಾಹತುಶಾಹಿ ಮನಸ್ಥಿತಿಯನ್ನು ನೆನಪಿಸುವ ಹಲವು ಹೆಸರುಗಳನ್ನು ಬದಲಾಯಿಸಿದ್ದ ಕೇಂದ್ರ ಸರ್ಕಾರ, ಸಂಸತ್‌ ಭವನಕ್ಕೂ ಹೊಸ ಹೆಸರು ಇಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ಇದುವರೆಗೂ ಸಂಸತ್‌ ಭವನದ ದ್ವಾರಗಳನ್ನು ಸಂಖ್ಯೆಗಳ ಮೂಲಕ ಗುರುತಿಸಲಾಗುತ್ತಿತ್ತು. 

ಆದರೆ ಹೊಸ ಸಂಸತ್‌ ಭವನದ ಮೂರು ದ್ವಾರಗಳಿಗೆ ಜ್ಞಾನದ್ವಾರ, ಶಕ್ತಿದ್ವಾರ ಮತ್ತು ಕರ್ಮದ್ವಾರ ಎಂದು ಹೆಸರಿಡಲಾಗಿದೆ. ಇನ್ನು ಕಲಾಪದ ವೇಳೆ ವಿಪಕ್ಷಗಳ ಸದಸ್ಯರು ಸದನದ ಬಾವಿಗೆ ಧುಮುಕಿ ಅಧಿಕಾರಿಗಳ ಮೇಲೆ ಪೇಪರ್‌ ಎಸೆಯುವುದು, ಕಲಾಪದ ಚಿತ್ರೀಕರಣ ಮಾಡುವ ಕ್ಯಾಮೆರಾ ಕಣ್ಣಿಗೆ ಬೀಳಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಹೊಸ ಸಂಸತ್‌ ಭವನದಲ್ಲಿ ಇದು ಅಷ್ಟು ಸುಲಭವಲ್ಲ. ಕಾರಣ ಸದನದ ಬಾವಿಯು, ಮೊದಲ ಸಾಲಿನಲ್ಲಿ ಕುರ್ಚಿಗಿಂತ ಸಾಕಷ್ಟುಕೆಳಗಿದೆ. ಹೀಗಾಗಿ ಪ್ರತಿಭಟನಾ ನಿರತರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳುವುದು ಸಾಧ್ಯವಾಗದು.

ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಸರ್ಮಥುರಾದಿಂದ ಸ್ಯಾಂಡ್‌ಸ್ಟೋನ್‌,  ರಾಜಸ್ಥಾನದ ಜೈಸಲ್ಮೇರ್‌ನ ಲಾಖಾ ಗ್ರಾಮದ ಗ್ರಾನೈಟ್ ಕಲ್ಲುಗಳನ್ನು ಹೊಸ ಸಂಸತ್ತಿನ ವಿವಿಧ ರಚನೆಗಳ ಬಾಹ್ಯ ಮತ್ತು ಆಂತರಿಕ ಪದರವನ್ನು ಅಭಿವೃದ್ಧಿಪಡಿಸಲು ಬಳಸಲಾಗಿದೆ.

ಹೊಸ ಸಂಸತ್ತಿಗೆ ಬಳಸಲಾಗಿರುವ ಮರಗಳನ್ನು ಬಹುತೇಕ ನಾಗ್ಪುರದಿಂದ ತರಲಾಗಿದೆ. ಮತ್ತು ಮರದ ವಾಸ್ತುಶಿಲ್ಪದ ವಿನ್ಯಾಸವನ್ನು ಮುಂಬೈ, ಮಹಾರಾಷ್ಟ್ರದ ಕುಶಲಕರ್ಮಿಗಳು ಮಾಡಿದ್ದಾರೆ. ಆಯಾ ರಾಜ್ಯಗಳ ಮರಗಳ ಕರಕುಶಲತೆಯನ್ನು ಇವರು ಮಾಡಿದ್ದಾರೆ.

Follow Us:
Download App:
  • android
  • ios