ವಿಧಾನಸಭೆ ನೂತನ ಸ್ಪೀಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವನ ವಿರುದ್ಧ ಸೈಬರ್ ಕ್ರೈಂಗೆ ದೂರು

ಸಂವಿಧಾನಿಕ ಹುದ್ದೆಯಲ್ಲಿರುವ ಸಭಾಧ್ಯಕ್ಷ ಯುಟಿ ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವ ಶ್ರೀರಾಮಸೇನೆ ಮುಖಂಡನ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಸೈಬರ್ ಸ್ಟೇಷನ್‍ಗೆ ದೂರು  ನೀಡಲಾಗಿದೆ.

Derogatory post against Speaker UT Khader Complaint filed against sri ram sena Leader  in chikkamagaluru gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ.27): ಸಂವಿಧಾನಿಕ ಹುದ್ದೆಯಲ್ಲಿರುವ ಸಭಾಧ್ಯಕ್ಷರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವ ಶ್ರೀರಾಮಸೇನೆ ಮುಖಂಡನ ವಿರುದ್ಧ ಕಾಂಗ್ರೆಸ್ ಐಟಿ ಸೆಲ್ ಸೈಬರ್ ಸ್ಟೇಷನ್‍ಗೆ ದೂರು ಸಲ್ಲಿಸಿದ್ದಾರೆ. ಚಿಕ್ಕಮಗಳೂರು ನಗರದ ಶ್ರೀರಾಮಸೇನೆ ಮುಖಂಡ ಪ್ರೀತೇಶ್ ಎಂಬುವರು ಕಾಂಗ್ರೆಸ್ ಸರ್ಕಾರದ ನೂತನ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಧರ್ಮನಿಂದನೆಯಾಗುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದನ್ನ ಗಮನಿಸಿದ ಕಾಂಗ್ರೆಸ್ಸಿನ ಐಟಿ ಸೆಲ್‍ನ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಎ. ಮಂಜುನಾಥ್ ಎಂಬುವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಲೆಗಳಿಗೆ ಬಳಿದಿರುವ ಕೇಸರಿ ಬಣ್ಣ ಬದಲಾಗಬೇಕು: ಸಚಿವ ಸತೀಶ್‌ ಜಾರಕಿಹೊಳಿ

ದೂರಿನಲ್ಲಿ ಪ್ರೀತೇಶ್ ಎಂಬುವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭಾ ಸಭಾಧ್ಯಕ್ಷರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಜನಾಂಗಕ್ಕೆ ನೋವು ಉಂಟು ಮಾಡುವುದರ ಜೊತೆ ಕೋಮುದ್ವೇಷದ ಪ್ರಚೋದನೆ ರೀತಿ ಇದೆ ಎಂದು ವಿವರಿಸಿ, ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮುಂದಿನ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ

ದೂರಿನಲ್ಲಿಏನಿದೆ?:
ಪ್ರೀತೇಶ್ ಚಿಕ್ಕಮಗಳೂರು ಎಂಬುವವರು ಅವರ ಫೇಸ್ ಬುಕ್ ಖಾತೆಯಲ್ಲಿ ಸಂವಿಧಾನಿಕ ಹುದ್ದೆಯಲ್ಲಿರುವ ಕರ್ನಾಟಕ ಸರ್ಕಾರದ ವಿಧಾನಸಭಾ ಸಭಾಧ್ಯಕ್ಷರ ಕುರಿತು ಅವಹೇಳನ ಹೇಳಿಕೆಯ ಪೋಸ್ಟ್ ಮಾಡಿದ್ದು ಮತ್ತು ಇದು ಒಂದು ಜನಾಂಗಕ್ಕೆ ನೋವನ್ನು ಉಂಟುಮಾಡುವ ಮತ್ತು ಕೋಮು ದ್ವೇಷ ಪ್ರಚೋದನೆಯ ಹೇಳಿಕೆ ರೀತಿ ಇದೆ, ಎಂದು ಚಿಕ್ಕಮಗಳೂರು ನಗರದಲ್ಲಿರುವ ಸೈಬರ್ ಕ್ರೈಮ್ ಠಾಣೆಗೆ ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಎ. ಮಂಜು ಎಂಬುವರಿಂದ ದೂರು ನೀಡಲಾಗಿದೆ.

Latest Videos
Follow Us:
Download App:
  • android
  • ios