Asianet Suvarna News Asianet Suvarna News

World Sparrow Day: ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ ಶಿವಪ್ರಸಾದ್ ಫ್ಯಾಮಿಲಿ

*  ಶಿವಪ್ರಸಾದ್ ಮನೆಯಂಗಳದಲ್ಲಿ ಗುಬ್ಬಚ್ಚಿಗಳ ಕಲರವ
*  ಶಿವಪ್ರಸಾದ್ ಅವರ ಮನೆಗೆ ಬಂದು ಹಸಿವು ಮತ್ತು ದಾಹ ನೀಗಿಸಿಕೊಳ್ಳುತ್ತಿರುವ ಗುಬ್ಬಚ್ಚಿಗಳು
*  ಪಕ್ಷಿಗಳ ಮೇಲಿನ ಇವರ ಕುಟುಂಬದ ಪ್ರೀತಿ, ಕಾಳಜಿ ಎಲ್ಲರಿಗೂ ಮಾದರಿ

Shivaprasads Family Who Given Shelter to Sparrows in Chikkamagaluru grg
Author
First Published Mar 20, 2022, 1:03 PM IST

ಆಲ್ದೂರು ಕಿರಣ್  ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಮಾ.20): ಅಭಿವೃದ್ದಿ ನೆಪದಲ್ಲಿ‌ ಮನುಷ್ಯ ಪರಿಸರದ ಮೇಲೆ ಅಕ್ರಮಣ ಮಾಡುತ್ತಿದ್ದಾನೆ. ಇದರ‌ ಪರಿಣಾನಮ‌ ಪ್ರಾಣಿ ಪಕ್ಷಿಗಳ‌ ಸ್ವಚ್ಛಂದ ಬದುಕಿಗೆ ಕಂಟಕಪ್ರಾಯನಾಗಿದ್ದಾನೆ. ಅರಿಯಾದ ಕಾಂಕ್ರೀಟಿಕರಣ , ಮೊಬೈಲ್‌ ಟವರ್‌ನಿಂದಾಗಿ ಗುಬ್ಬಚ್ಚಿಗಳು ಸಂತತಿ ಕಡಿಮೆಯಾಗುತ್ತಿದೆ. ನಾಡಿನಲ್ಲಿ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿದ್ದು ಗುಬ್ಬಚ್ಚಿಗಳು ಊರಿನಿಂದ ದೂರ ಹೋಗುವೆ. ಸಣ್ಣ ಗೂಡು ಕಟ್ಟಲಿಕ್ಕೂ ಆಗದ ದುಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಫಿನಾಡಿನ‌ ಕಳಸ ತಾಲ್ಲೂಕಿನಲ್ಲಿ ಗುಬ್ಬಚ್ಚಿಗಳಿಗೆ ಕುಟುಂಬವೊಂದು ಆಶ್ರಯ ನೀಡಿದೆ.

Shivaprasads Family Who Given Shelter to Sparrows in Chikkamagaluru grg

ಹೌದು, ಕಳಸದ ಓಣಿಗಂಡಿಯ ಶಿವಪ್ರಸಾದ್ ಎಂಬುವವರು 500ಕ್ಕೂ ಹೆಚ್ಚು ಗುಬ್ಬಚ್ಚಿಗಳನ್ನು ಪೋಷಣೆ ಮಾಡುತ್ತ ಪುಟ್ಟ ಪಕ್ಷಿಗಳ ಅಪಾರ ಪ್ರೀತಿ ಗಳಿಸಿದ್ದಾರೆ. ಹಿಂದೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದ ಗುಬ್ಬಚ್ಚಿಗಳು ಈಗ ಅಪರೂಪವಾಗುತ್ತಿವೆ. ಮನೆಗಳ ಸಂದಿಗಳಲ್ಲಿ ಕಸ, ಕಡ್ಡಿಗಳನ್ನು ತಂದು ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಮನೆ ಸುತ್ತಮುತ್ತ ಗುಬ್ಬಚ್ಚಿಗಳಿಗೆ ತಿನ್ನಲು ಸಾಕಷ್ಟು ಆಹಾರವೂ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮನೆ ಸಂದಿಗಳಲ್ಲಿ ಸಿಮೆಂಟ್‌ನಿಂದ ನಿರ್ಮಾಣವಾಗಿರುವುದ ರಿಂದ ಅವುಗಳಿಗೆ ಗೂಡು ಕಟ್ಟಲು ಜಾಗವೇ ಇಲ್ಲದಂತಾಗಿದೆ. ಇನ್ನು ಕೆಲವರು ಗೂಡು ಕಟ್ಟಿದರೆ ಮನೆ ಹಾಳಗುತ್ತದೆ ಎಂಬ ಕಾರಣಕ್ಕೆ ಕಟ್ಟಿರುವ ಗೂಡುಗಳನ್ನೇ ನಾಶಪಡಿಸುತ್ತಿದ್ದಾರೆ.ವಿದ್ಯುತ್ ತಂತಿಗಳು, ಕಾಂಕ್ರೀಟ್ ಕಟ್ಟಡಗಳ ಜೊತೆಗೆ ಆಹಾರ ಸಮಸ್ಯೆಯೂ ಉಂಟಾಗಿದೆ. ಆಧುನಿಕತೆಯ ಪರಿಣಾಮ ಮೊಬೈಲ್ ಟವರ್ ಗಳ ಹೊಡೆತಕ್ಕೆ ಸಿಲುಕಿರುವ ಗುಬ್ಬಚ್ಚಿಗಳು ಕಾಲ ಕಳೆದಂತೆ ಅಪರೂಪವಾಗಿ ಬಿಟ್ಟಿದೆ.

ಅವನತಿ ಅಂಚಿನ ಗುಬ್ಬಿಗಳಿಗೆ ಆಸರೆಯಾದ ಪಕ್ಷಿ ಪ್ರೇಮಿ ಚಂದ್ರು

ಇಂದು ವಿಶ್ವ ಗುಬ್ಬಚ್ಚಿ ದಿನ 

ಮೊಬೈಲ್ ಟವರ್, ಅಭಿವೃದ್ದಿ ಗೊಳ್ಳುತ್ತಿರುವ ಗ್ರಾಮ, ಪಟ್ಟಣದಿಂದ ಗುಬ್ಬಚ್ಚಿಗಳು ಗೂಡು ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ರೆ ಇದಕ್ಕೆ ಶಿವಪ್ರಸಾದ್ ಮನೆ ತದ್ವಿರುದ್ಧ. ಇವರ ಮನೆಯಂಗಳದಲ್ಲಿ ನಿತ್ಯ ನೂರಾರು ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ. ಕಳೆದ 5 ವರ್ಷಗಳ ಹಿಂದೆ  ಬೇಸಿಗೆ ವೇಳೆ ಮನೆ  ಅಂಗಳದಲ್ಲಿ ಒಂದು ಪಾತ್ರೆಯಲ್ಲಿ ಪಕ್ಷಿಗಳ ಪಾತ್ರೆ ಯಲ್ಲಿ ಬಾಯಾರಿಕೆಗೆ ನೀಗಿಸಲು ನೀರು ಇಡಲು ಆರಂಭಿಸಿದರು. ಪ್ರಾರಂಭದಲ್ಲಿ ಗುಬ್ಬಚ್ಚಿಗಳು ಬಂದು ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದವು. ದಿನ ಕಳೆದಂತೆ ಗುಬ್ಬಚ್ಚಿಗಳ ಸಂಖ್ಯೆ ಹೆಚ್ಚಾಗತೊಡಗಿತು. ನಂತರ ಬೆಳಗ್ಗೆ ನೀರಿನೊಂದಿಗೆ ದವಸ ಧಾನ್ಯಗಳನ್ನು ಅಂಗಳದಲ್ಲಿ ಹಾಕುತ್ತಿದ್ದರು. ಇದನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದವು.

ವಾಸ್ತು ಟಿಪ್ಸ್: ಮನೆಯಲ್ಲಿ ಗುಬ್ಬಚ್ಚಿ ಗೂಡಿದ್ದರೆ ಅದೃಷ್ಟ ಖುಲಾಯಿಸುತ್ತೆ

ದಿನಕಳೆದಂತೆ ಮನೆಯ ಸುತ್ತಮುತ್ತ ಗುಬ್ಬಚ್ಚಿಗಳು ವಂಶಾಭಿವೃದ್ಧಿ ಹೆಚ್ಚಿಸಿಕೊಂಡವು. ಮನೆಯಲ್ಲಿರುವ ಮಕ್ಕಳೂ ಗುಬ್ಬಚ್ಚಿಗಳನ್ನು ಕಂಡು ಸಂತಸಗೊಂಡಿದ್ದಾರೆ. ಪ್ರಾರಂಭದಲ್ಲಿ ಒಂದೆರಡು ಗುಬ್ಬಚ್ಚಿಗಳು ಬರುತ್ತಿದ್ದವು. ಈಗ ನಿತ್ಯವೂ ನೂರಾರು ಗುಬ್ಬಚ್ಚಿಗಳು ಬರುತ್ತಿವೆ. ನನ್ನ ಮಕ್ಕಳು ಮತ್ತು ಪತ್ನಿಗೂ ಅವುಗಳ ಮೇಲಿರುವ ಪ್ರೀತಿಯಿಂದ ನಮಗೆ ನಿತ್ಯ ಕಾಯಕದ ಜತೆಗೆ ಹಕ್ಕಿಗಳು ಮನೆಗೆ ಬಂದು ಆಹಾರ ತಿಂದು ಹೋಗುವುದನ್ನು ನೋಡುವುದೇ ಖುಷಿ. ನಾವು ಪ್ರೀತಿ ತೋರಿಸಿದರೆ ಅವು ನಮಗೆ ಹತ್ತಿರವಾಗುತ್ತವೆ. ಇಂಥ ಅಪರೂಪದ ಪಕ್ಷಿಗಳ ವಿನಾಶಕ್ಕೆ ಮಾನವನೇ ಕಾರಣನಾಗುತ್ತಿದ್ದಾನೆ  ಎಂದು ಶಿವಪ್ರಸಾದ್ ವಿಷಾದ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಶಿವಪ್ರಸಾದ್ ಮನೆಯಲ್ಲಿ ನಿತ್ಯ ಈಗ ಐನೂರಕ್ಕೂ ಹೆಚ್ಚು ಗುಬ್ಬಚ್ಚಿಗಳು ಇವರ ಮನೆಗೆ ಬಂದು ಹಸಿವು ಮತ್ತು ದಾಹ ನೀಗಿಸಿಕೊಳ್ಳುತ್ತಿವೆ. ಮನೆಯಂಗಳದಲ್ಲಿ ಗೂಡು ಕಟ್ಟುತ್ತವೆ. ಇಲ್ಲಿ ಗುಬ್ಬಚ್ಚಿಗಳಿಗೆ ಯಾವುದೇ ಭಯವಿಲ್ಲ. ದಿನಕ್ಕೆ ಎರಡು ಬಾರಿ ಬಂದು ಹಸಿವು ನೀಗಿಸಿಕೊಳ್ಳುತ್ತವೆ. ಪಕ್ಷಿಗಳ ಮೇಲಿನ ಇವರ ಕುಟುಂಬದ ಪ್ರೀತಿ, ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.
 

Follow Us:
Download App:
  • android
  • ios