ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ (ಮೇ.22): ಜಿಲ್ಲೆಯ ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಭೆಯಲ್ಲಿ ಎರಡು ಮುಖ್ಯ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಬೇಸೂರು ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆಗಬೇಕೆಂದು ವಕೀಲರ ಸಂಘ ಸೇರಿದಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹೋರಾಟ ಮಾಡುತ್ತಿದ್ದು, ಪಕ್ಷಾತೀತವಾಗಿ

ಈ ನಿರ್ಣಯ ಕುರಿತಾದ ಸಹಿ ಹೊಂದಿದ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಹ ಸಲ್ಲಿಸಿ ಒತ್ತಡ ತರೋಣ ಎಂದರು. ನಾನೇ ವೈಯಕ್ತಿಕ ಕೆಲವು ಪಿಎಚ್‌ಸಿ ಗಳಿಗೆ ಭೇಟಿ ನೀಡಿದ್ದೇನೆ. ವೈದ್ಯರ ಕೊರತೆ, ಹುದ್ದೆ ಭರ್ತಿ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು. 10 ರಿಂದ 15 ಒಳಗೆ ಸಮಿತಿ ರಚಿಸಬೇಕಿದೆ. ಮೆಗ್ಗಾನ್ ಬೋಧನಾ ಆಸ್ಪತ್ರೆ ಒತ್ತಡ ಹೆಚ್ಚುತ್ತಿರುವ ಕಾರಣ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಂಜೂರಾತಿ ಬಗ್ಗೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ವೈದ್ಯರ ಕೊರತೆ, ಮೆಗ್ಗಾನ್ ಆಸ್ಪತ್ರೆ ಸಮಸ್ಯೆಗಳು ಕುರಿತು ಚರ್ಚಿಸಲು 10 ರಿಂದ 15 ದಿನಗಳ ಒಳಗೆ ಉಸ್ತುವಾರಿ ಸಮಿತಿ ರಚಿಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಡ್ಯಾಂ ಸೂಕ್ಷ್ಮ ಪ್ರದೇಶದಲ್ಲಿ ಮುಳುಗಡೆಯಾಗಿ ಎರಡು ಬಾರಿ ಜನರು ನಿರಾಶ್ರಿತರಾಗಿ ಈಗಾಗಲೇ ಬೇಸತ್ತಿದ್ದು ಇದೀಗ ಬೇಸೂರು ಅಣುಸ್ಥಾವರ ಪ್ರಸ್ತಾಪದ ಬಗ್ಗೆ ರೈತರು ಬಹಳ ಭಯದಲ್ಲಿದ್ದಾರೆ. ಬೇಸೂರು ಅಣು ಸ್ಥಾವರ ಮಾಡಲು ಸಚಿವರು, ಶಾಸಕರು ಬಿಡುವುದಿಲ್ಲ ಎಂದರು. ಇಲ್ಲಿ 90 ಲಕ್ಷ ರು. ಪ್ರಕರಣ ಬಾಕಿ ಇದ್ದು, ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ, ಸರ್ವಾನುಮತದಿಂದ ಪೀಠ ಸ್ಥಾಪನೆಗೆ ಒತ್ತಾಯಿಸುತ್ತೇವೆ ಎಂದರು.
ಮುಳುಗಡೆ ಸಂತ್ರಸ್ತರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಫಾರೆಸ್ಟರ್ ಗಳು ಜನರು ಗಾಬರಿಯಾಗುವ ರೀತಿಯಲ್ಲಿ ಈ ಭಾಗದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗಾಬರಿಯಲ್ಲಿದ್ದಾರೆ. ಗಮನಕ್ಕೆ ಬಾರದೆ ಡೀಮ್ಡ್ ಅರಣ್ಯ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದೀರಿ. ರೈತರ ಗಿಡಗಳನ್ನು ಏಕೆ ಕೀಳುತ್ತೀರಿ. ನಮ್ಮ ಗಮನಕ್ಕೆ ಏಕೆ ತರುತ್ತಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನ ತಿರುಗಿಬೀಳುತ್ತಾರೆ. ಅರಣ್ಯ ಕಾಯ್ದೆಯಂತೆ ನಡೆದುಕೊಳ್ಳಿರಿ.ಸಮಸ್ಯೆಯನ್ನು ಎಲ್ಲರೂ ಕೂತು ಬಗೆಹರಿಸಬೇಕು. ಇಂತಹ ಕ್ರಮ ವಹಿಸುವ ಮುನ್ನ ಅರಣ್ಯ ಇಲಾಖೆಯವರು ಸಭೆ ಕರೆಯಬೇಕು ಎಂದರು.
ಕಡ್ಡಾಯವಾಗಿ ಪಡೆಯಬೇಕು
ಡಿಎಚ್‌ಒ ಡಾ. ನಟರಾಜ್ ಮಾತನಾಡಿ, 18 ಪಿಎಚ್‌ಸಿಗಳಲ್ಲಿ 18 ಹುದ್ದೆ ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ ಎಂದರು. ಡಾ.ಧನಂಜಯ ಸರ್ಜಿ ಮಾತನಾಡಿ, ಪಿಜಿ ಔಟ್ ಪುಟ್ ಸಾಕಷ್ಟಿದ್ದು, ಪಿಜಿ ವಿದ್ಯಾರ್ಥಿಗಳ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪಡೆಯಬೇಕು. ಆಗ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಾಧ್ಯವಾಗುತ್ತದೆ. ಅವರು ಸೇವೆ ಸಲ್ಲಿಸದಿದ್ದರೆ 15 ರು. ರಿಂದ 50 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 2 ರು. ಕೋಟಿ ವೆಚ್ಚದಲ್ಲಿ ಮಂಜೂರಾದ ಸಾರ್ವಜನಿಕರಿಗೆ ಶೌಚಾಶಯ, ವಿಶ್ರಾಂತಿ ಭವನ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಮಾತನಾಡಿ, ಬಲ್ಕೀಶ್ ಬಾನು ಮೆಡಿಕಲ್ ಕಾಲೇಜುಗಳ ನೋಟಿಸ್ ಬೋರ್ಡ್ ಗಳಲ್ಲಿ ಖಾಲಿ ಹುದ್ದೆಗಳ ಬಗ್ಗೆ ತಿಳಿಸಿರಿ ಎಂದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದಲ್ಲಿ ವೈದ್ಯರ ಕೊರತೆ ತುಂಬಾ ಇದೆ. ವೈದ್ಯರ ನೇಮಕ ಆಗಿದ್ದರೂ ರೋಗಿಗಳು ಬಂದಾಗ ವೈದ್ಯರು ಲಭ್ಯ ಇರುವುದಿಲ್ಲ. ಹಾಗೂ ಈ ಭಾಗದಲ್ಲಿ ಆಂಬುಲೆನ್ಸ್ ಇಲ್ಲವೆಂದು ತಿಳಿಸಿದರು. ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ರಾತ್ರಿ ವೇಳೆ ಹಿರಿಯ ವೈದ್ಯರೇ ಇರುವುದಿಲ್ಲ. ಇಲ್ಲಿ ಆಡಳಿತ ವೈಫಲ್ಯ ಆಗಿದೆ ಎಂದು ದೂರಿದರು.


