Coronavirus ಶಿವಮೊಗ್ಗದಲ್ಲಿ ಕೊರೋನಾ ಬ್ಪಾಸ್ಟ್, ತಮಿಳುನಾಡು ಓಂ ಶಕ್ತಿ ದರ್ಶನಕ್ಕೆ ಹೋಗಿಬಂದವರಿಗೆ ಸೋಂಕು

* ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಬ್ಲಾಸ್ಟ್
* ತಮಿಳುನಾಡು ಓಂ ಶಕ್ತಿ ದರ್ಶನಕ್ಕೆ ಹೋಗಿಬಂದವರಿಗೆ ಸೋಂಕು
* ಬೆಚ್ಚಿಬಿದ್ದ ಶಿವಮೊಗ್ಗ ಜಿಲ್ಲಾಡಳಿತ

shimogga Based tests positive for Covid Who Returned From TN  om shakti pilgrims rbj

ಶಿವಮೊಗ್ಗ, (ಜ.07): ತಮಿಳುನಾಡಿನ(Tamil Nadu) ಓಂ ಶಕ್ತಿ ಧಾರ್ಮಿಕ ಪ್ರವಾಸಕ್ಕೆಂದು ಹೋಗಿ ಬಂದ ಪ್ರವಾಸಿಗರಲ್ಲಿ ಕೋವಿಡ್ ಸೋಂಕಿನ (Coronavirus) ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಸೋಂಕಿನ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಡಿ. 31 ರಂದು ತಮಿಳುನಾಡಿನ ಓಂ ಶಕ್ತಿ ದೇವತೆಯ ದರ್ಶನಕ್ಕೆ ಜಿಲ್ಲೆಯಿಂದ 4 ಸಾವಿರ ಮಂದಿ 84 ಬಸ್‌ಗಳಲ್ಲಿ ತೆರಳಿದ್ದು, ಬುಧವಾರ ವಾಪಸ್ಸು ಮರಳಿದ್ದರು. ಬುಧವಾರ ಬೆಳಗ್ಗೆ ಜಿಲ್ಲೆಗೆ ಆಗಮಿಸಿದ 4154 ಮಂದಿಯನ್ನು ಅಂದೇ ಸ್ಕ್ರೀನಿಂಗ್ ಮಾಡಿಸಿ, ಸೋಂಕು ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಂದು ಯಾವುದೇ ಸೋಂಕು ಕಾಣಿಸಿರಲಿಲ್ಲ.

Corona Update : ಓಂ ಶಕ್ತಿ ಪ್ರವಾಸಿಗರಿಗೆ ಕೊರೋನಾ ಟೆಸ್ಟ್.. ಎಚ್ಚರ ಎಚ್ಚರ!

.ಆದರೆ ಗುರುವಾರ 100 ಜನರಲ್ಲಿ ನಡೆಸಿದ ಆರ್‌ಟಿಪಿಸಿಎಲ್ ಟೆಸ್‌ಟ್‌‌ನಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಮರಳಿದ ಎಲ್ಲ ಭಕ್ತರನ್ನು ಕೂಡ ಕೋವಿಡ್ ಪರೀಕ್ಷೆ ಒಳಪಡಿಸಲು ನಿರ್ಧರಿಸಿದ್ದು, ಗುರುವಾರದಿಂದ ಶುಕ್ರವಾರ ಸಂಜೆಯವರೆಗೆ ಒಟ್ಟು 1 ಸಾವಿರ ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 400 ಜನರ ರಿಪೋರ್ಟ್ ಬಂದಿದ್ದು, ಇದರಲ್ಲಿ 20 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಓ ಶಕ್ತಿ ಧಾರ್ಮಿಕ ಪ್ರವಾಸಕ್ಕೆ ತೆರಳಿದವರಲ್ಲಿ ಸಾಮೂಹಿಕವಾಗಿ ಸೋಂಕು ಹರಡಿರಬಹುದೆಂಬ ಭಯ ನಿಜವಾಗುವ ಸಾಧ್ಯತೆ ಎದುರಾಗಿದೆ. ಮೊದಲ ದಿನದ ಪರೀಕ್ಷೆಯಲ್ಲಿ ಇದು ಆತಂಕಕಾರಿಯಲ್ಲ ಎಂದು ಡಿಹೆಚ್‌ಓ ಹೇಳಿದ್ದರು. ಆದರೆ ಎರಡನೇ ದಿನ ಕಾಣಿಸಿದ ಸೋಂಕಿನ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಉಳಿದ ಸುಮಾರು 3 ಸಾವಿರ ಜನರ ಪರೀಕ್ಷೆ ನಡೆಸಿದಲ್ಲಿ ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

 ಜೊತೆಗೆ ಮರಳಿದ 4154 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ತಿಳಿಸಿತ್ತಾದರೂ ಇವರ ಮೇಲೆ ನಿಗಾ ವಹಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇದರಿಂದ ಅವರ ಕುಟುಂಬ ವರ್ಗದವರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಜೊತೆಗೆ ಇವರಲ್ಲಿ ಅನೇಕರು ಸಮುದಾಯದ ಜೊತೆ ಬೆರೆತಿದ್ದಾರೆ ಎನ್ನಲಾಗಿದ್ದು, ಮತ್ತಷ್ಟು ಭೀತಿ ಶುರುವಾಗಿದೆ.

ಮೂರು ವಿದ್ಯಾರ್ಥಿಗಳಿಗೆ ಸೋಂಕು
ಸಾಗರದ ಖಾಸಗಿ ಪ್ರೌಢಶಾಲೆ ಮತ್ತು ಹಾಸ್ಟೆಲ್‌ನಲ್ಲಿ ಒಟ್ಟು ಮೂರು  ವಿದ್ಯಾಾರ್ಥಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಹಾಸ್ಟೆಲ್ ಅನ್ನು ಸೀಲ್‌ಡೌನ್ ಮಾಡಲಾಗಿದೆ.

ಸಾಗರ ತಾಲೂಕಿನ ಉಳ್ಳೂರಿನ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೋರ್ವನಲ್ಲಿ ಹಾಗೂ ಇದೇ ಶಾಲೆಗೆ ಸಂಬಂಧಿಸಿದ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತು. ಹಾಸ್ಟೆಲ್‌ಅನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳನ್ನು ಅಲ್ಲಿಯೇ ಉಳಿಸಿಕೊಂಡು ನಿಗಾದಲ್ಲಿ ಇರಿಸಲಾಗಿದೆ.  ಸೋಂಕಿನ ಮೂವರುವಿದ್ಯಾರ್ಥಿಗಳನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಎಚ್ಚೆತ್ತ ಜಿಲ್ಲಾಡಳಿತ
ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವಂತೆಯೇ ಜಿಲ್ಲಾಡಳಿತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ಬೆಡ್‌ಗಳ ಸಿದ್ಧತೆ ನಡೆಸಿದೆಯಲ್ಲದೆ, ಕ್ವಾಾರಂಟೈನ್ ತೆರೆಯಲು 50 ಸ್ಥಳಗಳನ್ನು ಗುರುತಿಸಿದೆ.

ಈ ಕ್ಷಣದಲ್ಲಿ ಕ್ವಾಾರಂಟೈನ್ ಅಗತ್ಯವಿಲ್ಲ. ಆದರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಖ್ಯೆ ಶೇ. 50 ರಷ್ಟು ಬೆಡ್ ಕೋವಿಡ್ ಚಿಕಿತ್ಸೆಗಾಗಿ ಇವೆ.  ಸೋಂಕಿನ ಸಂಖ್ಯೆ ದಾಟಿದ ತಕ್ಷಣ ಕ್ವಾಾರಂಟೈನ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಡಿಹೆಚ್‌ಓ ಡಾ. ರಾಜೇಶ್ ಸುರಗಿಹಳ್ಳಿ ಕನ್ನಡಪ್ರಕ್ಕೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 1040 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 415 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಮಕ್ಕಳಿಗಾಗಿ 115 ಬೆಡ್‌ಗಳನ್ನು ಕಾದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios