ಅಫಜಲ್ಪುರ: ನಶೆಯಲ್ಲಿ ತೇಲಾಡಿ ಕಾರು ಓಡಿಸಿ ಆಕ್ಸಿಡೆಂಟ್ ಮಾಡಿದ ಶಾಂತಲಿಂಗ ಶ್ರೀ, ಬಟ್ಟೆ ಬಿಚ್ಕೊಂಡು ಸ್ವಾಮೀಜಿ ಅಲೆದಾಟ!
ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಸುಪ್ರಸಿದ್ಧ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜ.8ರಂದು ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದರಿಂದ ಸಾರ್ವಜನಿಕರ ಕೈಗೆ ಸಿಕ್ಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಫಜಲ್ಪುರ(ಜ.14): ಮಠದ ಸ್ವಾಮೀಜಿಗಳಾಗಿ ಮಠದಲ್ಲಿ ಧರ್ಮ ಬೋಧನೆ ಮಾಡುತ್ತಾ ಭಕ್ತರಿಗೆ ಮಾದರಿ ಆಗಬೇ ಕಾಗಿದ್ದ ಸ್ವಾಮೀಜಿಗಳೇ ಇಂದು ರಸ್ತೆಯಲ್ಲಿಯೇ ಸಾರಾಯಿ ಕುಡಿದು ರಂಪಾಟ ಮಾಡಿರುವ ಶ್ರೀ ಶಾಂತಲಿಂಗ ಶಿವಾಚಾರ್ಯರ ನಡುವಳಿಕೆಗಳಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಉಡಚಾಣ ಗ್ರಾಮದ ಸುಪ್ರಸಿದ್ಧ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜ.8ರಂದು ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದರಿಂದ ಸಾರ್ವಜನಿಕರ ಕೈಗೆ ಸಿಕ್ಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅರ್ಧಮರ್ಧ ಬಟ್ಟೆ ಬಿಚ್ಚಿಕೊಂಡು ಅಲೆದಾಡುತ್ತಿದ್ದ ಸ್ವಾಮೀಜಿಗಳಿಗೆ ಸಾರ್ವಜನಿಕರು ಅವರ ಬಗ್ಗೆ ಮಾಹಿತಿ ಕೇಳಿದಾಗ ಸುಳ್ಳು ಮಾಹಿತಿಯನ್ನು ನೀಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಆ ಗ್ರಾಮದ ಸಾರ್ವಜನಿಕರು ಅವರನ್ನು ಬಿಡದಿದ್ದಾಗ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಉಡಚಾಣ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಸಮಜಾಯಿಸಿ 22 ಸಾವಿರದಂಡಕಟ್ಟಿ ಅವರನ್ನು ಬಿಡಿಸಿಕೊಂಡು ಬಂದಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಸರ್ಕಾರದ ಈಗ 20% ಕಮಿಷನ್ ಬಾಂಬ್!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ಹಾಲಳ್ಳಿ ಎಂಬಾತನು ತನ್ನ ಫೇಸ್ಟುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದಕ್ಕಿಂತ ಮುಂಚೆಯೂ ಈ ರೀತಿ ಘಟನೆ ಸಾಕಷ್ಟು ಬಾರಿ ನಡೆದಿದ್ದವು ಎಂದು ಗ್ರಾಮಸ್ಥರು ಚರ್ಚೆ ನಡೆಸುತ್ತಿದ್ದಾರೆ.
ಶೋಕಿ ಸ್ವಾಮಿಯ ಬಳಿ ಪರವಾನಗಿ ಪಿಸ್ತೂಲ್:
ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಶ್ರೀ ಶಾಂತಲಿಂಗ ಶಿವಾಚಾರ್ಯರು ತಮ್ಮ ಹೆಸರಲ್ಲಿ ಲೈಸೆನ್ಸ್ ಪಡೆದು ಪಿಸ್ತೂಲ್ ಪಡೆದಿದ್ದರೂ ಈಗ ಅದು ಪೊಲೀಸ್ ವಶದಲ್ಲಿದೆ. ಅಲ್ಲದೇ ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ದೊಡ್ಡ ಐಎಎಸ್, ಐಪಿಎಸ್ ಅಧಿಕಾರಿಗಳ ರೀತಿಯಲ್ಲಿಯೇ ಬರೆದುಕೊಂಡಿದ್ದಾರೆ. ಈ ಸ್ವಾಮೀಜಿ ಭಕ್ತರ ಹಣದಲ್ಲಿ ದಿನ ನಿತ್ಯ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈಗ ಸ್ವಾಮೀಜಿ ತಾವು ಚಲಾಯಿಸುತ್ತಿದ್ದ ಕಾರು ಮಠದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಕೊಟ್ಟ ಮಾತು ಮರೆತ ಸಚಿವ ಪ್ರಿಯಾಂಕ್, ಶರಣಪ್ರಕಾಶ್ ಪಾಟೀಲ್: ಪ್ರಣವಾನಂದ ಶ್ರೀ
ಹೊಸ ಮಠಾಧಿಪತಿ ನೇಮಕಕ್ಕೆ ಗ್ರಾಮಸ್ಥರು ನಿರ್ಧಾರ:
ಉಡಚಾಣ ಗ್ರಾಮದ ಶ್ರೀ ಶಾಂತಲಿಂಗ ಶಿವಾಚಾರ್ಯರ ನಡುವಳಿಕೆಗಳಿಗೆ ಬೇಸತ್ತು ಗ್ರಾಮಸ್ಥರು ಮಠದ ಹೆಸರು ಈಗಿನ ಸ್ವಾಮೀಜಿಗಳು ಹಾಳು ಮಾಡುತ್ತಿದ್ದಾರೆ. ಅಲ್ಲದೇ ಈ ರೀತಿ ಘಟನೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಜ.15ರಂದು ಶಾಸಕ ಎಂ. ವೈ. ಪಾಟೀಲರನ್ನು ಭೇಟಿಯಾಗಿ ಉಜ್ಜಯಿನಿ ಜಗದ್ಗುರುಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ ಮಠಕ್ಕೆ ಹೊಸ ಮಠಾಧಿಪತಿ ನೇಮಕ ಮಾಡುವಂತೆ ಮನವಿ ಸಲ್ಲಿಸಲು ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ.