ಕಾಂಗ್ರೆಸ್‌ ಸರ್ಕಾರದ ಈಗ 20% ಕಮಿಷನ್ ಬಾಂಬ್!

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ಧ ಶೇ.60 ಕಮಿಷನ್ ಆರೋಪ ಮಾಡುವ ಬದಲು, ಇದನ್ನು ಸಿಬಿಐ ತನಿಖೆಗೆ ವಹಿಸಲಿ. ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ನಾವು ಒದಗಿಸುತ್ತೇವೆ ಎಂದು ಆಗ್ರಹಿಸಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ
 

MLAs Asking 20 Percent Commission Says State Contractors Association President Jagannath Shegaji

ಕಲಬುರಗಿ(ಜ.14): ಇತ್ತೀಚೆಗೆ ಕಾಂಗ್ರೆಸ್‌ನವರು ಕಾಮಗಾರಿಗಳಿಗೆ ಶೇ.60 ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, 'ಕೆಕೆಆರ್‌ಡಿಬಿ (ಕಲ್ಯಾ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ)ಯಲ್ಲಿ ಕಾಮಗಾರಿಗಳ ಗುತ್ತಿಗೆಗೆ ಶಾಸಕರು ಶೇ.20ರಷ್ಟು ಕಮಿಷನ್ ಕೇಳುತ್ತಿದ್ದಾರೆ' ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಸ್ಫೋಟಕ ಆರೋಪ ಮಾಡಿದ್ದಾರೆ. ಅಲ್ಲದೆ, 'ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ಧ ಶೇ.60 ಕಮಿಷನ್ ಆರೋಪ ಮಾಡುವ ಬದಲು, ಇದನ್ನು ಸಿಬಿಐ ತನಿಖೆಗೆ ವಹಿಸಲಿ. ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ನಾವು ಒದಗಿಸುತ್ತೇವೆ' ಎಂದು ಆಗ್ರಹಿಸಿದ್ದಾರೆ. 

ಕಲಬುರಗಿಯಲ್ಲಿ ಸೋಮವಾರ 'ಕನ್ನಡಪ್ರಭ' ಜೊತೆ ಅವರು ಮಾತನಾಡಿ, 'ಕೆಕೆಆರ್ ಡಿಬಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕೆಕೆಆರ್ ಡಿಬಿ ಅನುದಾನದಲ್ಲಿ ಶಾಸಕರು ಶೇ.20ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಇಷ್ಟು ಕಮಿಷನ್ ಕೊಟ್ಟರೆ ಮಾತ್ರ ಕೆಲಸ ನೀಡುವುದಾಗಿ ನೇರವಾಗಿಯೇ ಹೇಳುತ್ತಿದ್ದಾರೆ. ಕೆಕೆಆರ್‌ಡಿಬಿ ಅನುದಾನ ಎಂದರೆ ಶಾಸಕರುಗಳು ತಮ್ಮ ಮನೆಯ ಆಸ್ತಿ ಅಂದುಕೊಂಡಿದ್ದಾರೆ' ಎಂದು ಆರೋಪಿಸಿದರು. 

ಕೊಟ್ಟ ಮಾತು ಮರೆತ ಸಚಿವ ಪ್ರಿಯಾಂಕ್, ಶರಣಪ್ರಕಾಶ್ ಪಾಟೀಲ್: ಪ್ರಣವಾನಂದ ಶ್ರೀ

ಆದರೆ ಯಾವ ಶಾಸಕ ಎಂದು ಅವರು ಹೇಳಲಿಲ್ಲ. 'ಆದರೆ ನಮ್ಮಿಂದ ಕಮಿಷನ್‌ ಸಿಗಲ್ಲ ಎಂದು ಕೆಆರ್‌ಐಡಿಲ್ (ಲ್ಯಾಂಡ್‌ಆರ್ಮಿ)ಗೆ ಅವರು ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ. ಲ್ಯಾಂಡ್ ಆರ್ಮಿಗೆ ಕಾಮಗಾರಿ ಕೊಡಬೇಡಿ ಎಂಬುದು ನಮ್ಮ ಬೇಡಿಕೆಯಾದರೂ ಶಾಸಕರು ತಮ್ಮ ಅನುದಾನದಲ್ಲಿನ ಕಾಮಗಾರಿಗಳನ್ನೆಲ್ಲ ಇದಕ್ಕೇ ವಹಿಸಿಕೊಡುತ್ತಿದ್ದಾರೆ. ಏಕೆಂದರೆ ಇದರಿಂದ ಅವರಿ ಅವರಿಗೆ ಅನಾಯಾಸವಾಗಿ ಕಮಿಷನ್ ದೊರಕುತ್ತದೆ. ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ' ಎಂದು ಅವರು ಆರೋಪಿಸಿದರು. 

ಸಿಬಿಐ ತನಿಖೆಗೆ ವಹಿಸಲಿ: ಈ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸಿಬಿಐನಿಂದ ತನಿಖೆಯಾಗಲಿ ಎಂಬುದು ನಮ್ಮ ಆಗ್ರಹ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ದ ಶೇ.60 ಕಮಿಷನ್ ಆರೋಪ ಮಾಡುವ ಬದಲು, ಇದನ್ನು ಸಿಬಿಐ ತನಿಖೆಗೆ ವಹಿಸಲಿ. ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ನಾವು ಒದಗಿಸುತ್ತೇವೆ ಎಂದು ಆಗ್ರಹಿಸಿದರು.

ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾದಂತಿದೆ: ಸಚಿವ ಪ್ರಿಯಾಂಕ್ ಖರ್ಗೆ

₹32000 ಕೋಟಿ ಬಿಲ್‌ ಬಾಕಿ ನೀಡಲು ಗುತ್ತಿಗೆದಾರರ ಪಟ್ಟು

ಕಲಬುರಗಿ: ಸರ್ಕಾರದಿಂದ ಬಾಕಿ ಬರಬೇಕಿರುವ ಸುಮಾರು 32000 ಕೋಟಿ ರು.ಗಳನ್ನು 8 ದಿನದೊಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ 8 ಸಚಿವರಿಗೆ ಪತ್ರ ಬರೆದಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದ್ದಾರೆ. ಸಚಿವರಿಂದ ಸ್ಪಂದನೆ ಸಿಗದಿದ್ದರೆ ಮುಖ್ಯಮಂತ್ರಿಗೆ ಬಳಿಕ ಪ್ರಧಾನಿಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.

ಶಾಸಕರ ಹೆಸರು ಹೇಳಿ ಪರ್ಸಂಟೇಜ್ ಕೇಳಿರುವ ಶಾಸಕರು ಯಾರೆಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳಲಿ. ಯಾವ ಶಾಸಕರ ಮೇಲೆ ಅವರು ಆರೋಪ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಗುತ್ತಿಗೆಯಲ್ಲಿ ಮೈಕ್ರೋ, ಮ್ಯಾಕ್ರೋ ಅಂತ ಇರುತ್ತದೆ. ಮೈಕ್ರೋ ಕಾಮಗಾರಿಯ ಗುತ್ತಿಗೆಗಳು ಶಾಸಕರ ಹಂತದಲ್ಲಿ ನಡೆಯುತ್ತವೆ ಎಂದು  ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios