Omicron: ವಿದ್ಯಾರ್ಥಿಗೆ ಕೊರೋನಾ ದೃಢ: ಶಾಲೆಗೆ ರಜೆ
* ಡಿ. 6ರ ವರೆಗೆ ಶಾಲೆಗೆ ರಜೆ ಘೋಷಣೆ
* ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್
* ಜಿನೋಮ್ ಸಿಕ್ವೇನ್ಸ್ ಟೆಸ್ಟ್ ನೆಗೆಟಿವ್: ಜಿಲ್ಲಾಧಿಕಾರಿ
ಹುಬ್ಬಳ್ಳಿ(ಡಿ.02): ಇಲ್ಲಿನ ಆದರ್ಶನಗರದ ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ(Student) ಕೊರೋನಾ(Coronavirus) ದೃಢಪಟ್ಟ ಹಿನ್ನೆಲೆ ಡಿ. 6ರ ವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ.
ಈ ವಿದ್ಯಾರ್ಥಿಯ ಸಹೋದರಿ ಧಾರವಾಡ(Dharwad) ಎಸ್‌ಡಿಎಂನಲ್ಲಿ(SDM) ಎಂಬಿಬಿಎಸ್(MBBS) ಓದುತ್ತಿದ್ದಾರೆ. ಎಸ್‌ಡಿಎಂನಲ್ಲಿ ಇತ್ತೀಚೆಗೆ 306ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಕೊರೋನಾ ದೃಢಪಟ್ಟಿತ್ತು. ಈ ವಿದ್ಯಾರ್ಥಿಯ ಸಹೋದರಿಗೂ ಕೊರೋನಾ ದೃಢಪಟ್ಟಿತ್ತು. ಈ ಹಿನ್ನೆಲೆ ಅವರ ಕುಟುಂಬಸ್ಥರಿಗೂ ಕೊರೋನಾ ಟೆಸ್ಟ್(Covid Test) ಮಾಡಿಸಲಾಗಿತ್ತು. ಅದರಲ್ಲಿ ಈ ಶಾಲೆಯ ವಿದ್ಯಾರ್ಥಿಗೆ ದೃಢಪಟ್ಟಿದೆ. ಸದ್ಯ ಹೋಂ ಕ್ವಾರಂಟೈನ್(Home Quarantine) ಮಾಡಲಾಗಿದೆ.
Hubballi Railway Station: ಸೋಂಕು ಹೆಚ್ಚುತ್ತಿದ್ರೂ ಲಸಿಕೆ ಪ್ರಮಾಣಪತ್ರ ಪರಿಶೀಲನೆಗಿಲ್ಲ ವ್ಯವಸ್ಥೆ..!
ಶಾಲೆಗೆ(School) ಬಂದಿದ್ದ ಮಕ್ಕಳನ್ನು ಬುಧವಾರ ಮಧ್ಯಾಹ್ನವೇ ಮನೆಗೆ ಕಳುಹಿಸಲಾಗಿದೆ. ಶಾಲೆಯನ್ನು ಸ್ಯಾನಿಟೈಸ್(Sanitize) ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ಡಿ. 6ರ ವರೆಗೆ ರಜೆ ಘೋಷಿಸಲಾಗಿದೆ. ಶಾಲೆಯಲ್ಲಿನ ಶಿಕ್ಷಕರು(Teachers), ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ.
ಈ ಕುರಿತಂತೆ ಮಾತನಾಡಿದ ಪ್ರಾಂಶುಪಾಲ ನರೇಶ ಪಾಟೀಲ್, ಮುಂಜಾಗ್ರತಾ ಕ್ರಮವಾಗಿ ನಾಳೆ ಶಾಲೆಯಲ್ಲಿರುವ ಮಕ್ಕಳಿಗೆ ಕೊರೋನಾ ಟೆಸ್ಟ್ ಮಾಡಲಾಗುವುದು. ಸೋಮವಾರ ವರೆಗೆ ರೋಟರಿ ಶಾಲೆಗೆ ರಜೆ ನೀಡಲಾಗಿದೆ ಎಂದರು. ತಹಸೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿನೋಮ್ ಸಿಕ್ವೇನ್ಸ್ ಟೆಸ್ಟ್ ನೆಗೆಟಿವ್: ಜಿಲ್ಲಾಧಿಕಾರಿ
ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಜಿನೋಮ್ ಸಿಕ್ವೇನ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಕಳುಹಿಸಿ ಕೊಡಲಾಗಿತ್ತು. ಟೆಸ್ಟ್ ವರದಿ ಕಳೆದ ರಾತ್ರಿ ಬಂದಿದೆ. ಯಾರಿಗೂ ಪಾಸಿಟಿವ್ ಬಂದಿಲ್ಲ. ಜನರು ಆತಂಕ ಪಡಬಾರದು. ಫಸ್ಟ್ ಡೋಸ್ ಶೇ. 90ರಷ್ಟು ಲಸಿಕಾಕರಣ ಆಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ(Nitesh Patil) ಹೇಳಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ. ಎರಡೂವರೆ ಲಕ್ಷ ಲಸಿಕೆ ನಮ್ಮ ಬಳಿ ಲಭ್ಯವಿದೆ. ಹುಬ್ಬಳ್ಳಿಯ(Hubballi) ಕಿಮ್ಸ್(KIMS) ಆಸ್ಪತ್ರೆಯಲ್ಲಿ ನಿನ್ನೆ 4 ಜನರಿಗೆ ಪಾಸಿಟಿವ್ ಬಂದಿದೆ. ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ ಪಾಸಿಟಿವ್ ಬಂದಿದೆ ಎಂದರು.
ಇನ್ನೂ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಸುತ್ತಲಿನ ಶಾಲಾ- ಕಾಲೇಜುಗಳು ಮತ್ತೆ ಇಂದಿನಿಂದ ಆರಂಭ ಮಾಡುತ್ತೇವೆ. ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂಧ ಹೇರಲ್ಲ. ನಿರ್ಬಂಧ ಹೇರಲು ಅವಕಾಶ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ ಎಂದರು.
Dharwad: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಶಾಲಾ-ಕಾಲೇಜಿಗೆ ರಜೆ
ಲಸಿಕೆ ಪಡೆಯದಿದ್ರೆ ಪಾರ್ಕ್, ಮಾಲ್‌ಗೆ ನೋ ಎಂಟ್ರಿ..?
ಬೆಂಗಳೂರು ನಗರದಲ್ಲಿ ಒಮಿಕ್ರಾನ್(Omicron) ಆಂತಕ ಹೆಚ್ಚುತ್ತಿದ್ದಂತೆಯೇ ಪೂರ್ಣ ಲಸಿಕಾಕರಣಕ್ಕೆ ಪಣ ತೊಟ್ಟಿರುವ ಬಿಬಿಎಂಪಿ(BBMP) ಎರಡೂ ಡೋಸ್ ಲಸಿಕೆ ಪಡೆಯದವರಿಗೆ ಸಿನಿಮಾ ಮಂದಿರ, ಮೆಟ್ರೋ, ಮಾಲ್, ಉದ್ಯಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡದಿರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರ ನೀಡುವ ನಿರ್ದೇಶನದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಉನ್ನತ ಮೂಲಗಳು ತಿಳಿಸಿವೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅವರು, ಚಿತ್ರಮಂದಿರಗಳಿಗೆ ಶೇ.50ರಷ್ಟು ಹಾಜರಾತಿ, ಮಾಲ್‌ಗಳಿಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆ ಇಲ್ಲ ಎನ್ನುತ್ತಾರೆ. ಆದರೆ, ಕೋವಿಡ್ಎ ರಡೂ ಲಸಿಕೆ ಪಡೆದವರಿಗೆ ಮಾತ್ರ ಚಿತ್ರಮಂದಿರ ಹಾಗೂ ಮಾಲ್‌ಗಳಿಗೆ ಪ್ರವೇಶ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ರವಾನೆಯಾಗಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದಿಲ್ಲ. ಮೂಲಗಳು ಮಾತ್ರ ಇಂತಹ ಗಂಭೀರ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ.