Asianet Suvarna News Asianet Suvarna News

Hubballi Railway Station: ಸೋಂಕು ಹೆಚ್ಚುತ್ತಿದ್ರೂ ಲಸಿಕೆ ಪ್ರಮಾಣಪತ್ರ ಪರಿಶೀಲನೆಗಿಲ್ಲ ವ್ಯವಸ್ಥೆ..!

*  ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಮಾಡಲ್ಲ
*  ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆ ನಿರ್ಲಕ್ಷ್ಯ ಸಲ್ಲ
*  ಇಷ್ಟು ದಿನ ಶಾಂತವಾಗಿದ್ದ ಕೋವಿಡ್‌ ಮತ್ತೆ ವಕ್ಕರಿಸುತ್ತಿದೆ 
 

No Vaccine Certificate Verification System in Hubballi Railway Station grg
Author
Bengaluru, First Published Dec 1, 2021, 9:32 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.01):  ಎಲ್ಲೆಡೆ ಮತ್ತೆ ಕೊರೋನಾ(Coronavirus) ಆತಂಕ ಶುರುವಾಗಿದೆ. ಬೆಂಗಳೂರು(Bengaluru) ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೋವಿಡ್‌ ವ್ಯಾಕ್ಸಿನೇಷನ್‌ ಪಡೆದಿದ್ದಾರೋ, ಇಲ್ಲವೋ ಎಂಬುದರ ಪರಿಶೀಲನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಹುಬ್ಬಳ್ಳಿಯ(Hubballi) ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲೇ ಈ ಯಾವ ವ್ಯವಸ್ಥೆಯೂ ಇಲ್ಲ!. ಇದನ್ನು ಪರಿಶೀಲನೆ ನಡೆಸುವ ಜವಾಬ್ದಾರಿ ಜಿಲ್ಲಾಡಳಿತದ್ದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ನೈರುತ್ಯ ರೈಲ್ವೆ ವಲಯದ(South Western Railway) ಕೇಂದ್ರ ಕಚೇರಿ ಇಲ್ಲೇ ಇದೆ. ಪ್ರತಿನಿತ್ಯ ನೂರಾರು ರೈಲುಗಳು(Train) ಬಂದು ಹೋಗುವ ಜಂಕ್ಷನ್‌ ಇದಾಗಿದೆ. ಅಂದಾಜಿನ ಪ್ರಕಾರ ಪ್ರತಿನಿತ್ಯ ಕನಿಷ್ಠವೆಂದರೂ 35 ಸಾವಿರ ಫುಟ್‌ಪಾಲ್‌ ಇಲ್ಲಿ ಆಗುತ್ತದೆ. ದೆಹಲಿ, ರಾಜಸ್ತಾನ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾ ಸೇರಿದಂತೆ ಹತ್ತಾರು ಕಡೆಗಳಿಂದ ಪ್ರತಿನಿತ್ಯ ಹತ್ತಾರು ರೈಲುಗಳು ಇಲ್ಲಿಗೆ ಬರುತ್ತಿರುತ್ತವೆ. ಈ ಎಲ್ಲ ರಾಜ್ಯಗಳಿಂದ ಜನರು ಆಗಮಿಸುತ್ತಲೇ ಇರುತ್ತಾರೆ. ಅಂತಾರಾಜ್ಯ ಪ್ರಯಾಣ ಮಾಡಬೇಕೆಂದರೆ ಎರಡು ಡೋಸ್‌ ವ್ಯಾಕ್ಸಿನೇಷನ್‌ ಪಡೆದಿರುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ(Government of Karnataka) ಸುತ್ತೋಲೆ ಹೊರಡಿಸಿದೆ.

Dharwad: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಶಾಲಾ-ಕಾಲೇಜಿಗೆ ರಜೆ

ಈ ಪ್ರಮಾಣ ಪತ್ರಗಳನ್ನು(Certificate) ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಮಾಡಲು ಇಲ್ಲಿ ವ್ಯವಸ್ಥೆಯನ್ನೇ ಮಾಡಿಲ್ಲ. ಯಾವ ಪ್ರಯಾಣಿಕರನ್ನೂ(Passengers) ಇಲ್ಲಿ ಪರಿಶೀಲನೆ ಮಾಡುವುದಿಲ್ಲ. ಜತೆಗೆ ಪ್ರಯಾಣಿಕರಿಗೆ ಕೋವಿಡ್‌(Covid19) ಲಕ್ಷಣಗಳಿದ್ದಲ್ಲಿ ಅವರಿಗೆ ಸರಿಯಾದ ಮಾಹಿತಿ ನೀಡಲು ಕೂಡ ಇಲ್ಲಿ ವ್ಯವಸ್ಥೆ ಇಲ್ಲ. ಕೋವಿಡ್‌ ಮೊದಲ ಹಾಗೂ ಎರಡನೆಯ ಅಲೆಯ ವೇಳೆ ಕೋವಿಡ್‌ ಹೆಲ್ಪ್‌ ಡೆಸ್ಕ್‌(Covid Help Desk) ಎಂದು ಇಲ್ಲಿ ಮಾಡಲಾಗಿತ್ತು. ಅಲ್ಲಿ ಥರ್ಮಲ್‌ ಸ್ಕ್ರೀನಿಂಗ್‌(Thermal Screening) ಮಾಡಿ ಸ್ಯಾನಿಟೈಸರ್‌(Sanitizer) ನೀಡಲಾಗುತ್ತಿತ್ತು. ಜತೆಗೆ ಅಗತ್ಯ ಬಿದ್ದವರಿಗೆ ಆರ್‌ಟಿಪಿಸಿಆರ್‌ ತಪಾಸಣೆಗೆ ವ್ಯವಸ್ಥೆ ಇಲ್ಲಿ ಇತ್ತು. ಆದರೆ ಈ ಯಾವ ವ್ಯವಸ್ಥೆ ಸದ್ಯಕ್ಕೆ ಇಲ್ಲಿಲ್ಲ.

ಇಷ್ಟು ದಿನ ಶಾಂತವಾಗಿದ್ದ ಕೋವಿಡ್‌ ಮತ್ತೆ ವಕ್ಕರಿಸುತ್ತಿದೆ. ಅದರಲ್ಲೂ ಧಾರವಾಡದ(Dharwad) ಎಸ್‌ಡಿಎಂ ಕಾಲೇಜಿನಲ್ಲೇ 300ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇಂಥ ಸಮಯದಲ್ಲೂ ಈ ರೀತಿ ನಿರ್ಲಕ್ಷ್ಯ ಎಷ್ಟು ಸರಿ ಎಂಬ ಪ್ರಶ್ನೆ ಪ್ರಜ್ಞಾವಂತರದ್ದು. ವ್ಯಾಕ್ಸಿನೇಷನ್‌(Vaccination) ಪಡೆದಿದ್ದಾರೋ ಇಲ್ಲವೋ ಎಂಬುದನ್ನು ರೈಲು ಪ್ರಯಾಣ ಪ್ರಾರಂಭಿಸುವಾಗಲೇ ಟಿಕೆಟ್‌ ತಪಾಸಣೆ ವೇಳೆ ಮಾಡುತ್ತಾರೆ ಎಂದು ಆರೋಗ್ಯ ಇಲಾಖೆ ತಿಳಿಸುತ್ತದೆ. ಇದು ನಿಜವೂ ಹೌದು. ಆದರೂ ಇಲ್ಲೊಂದು ಪರಿಶೀಲನೆಗೆ ವ್ಯವಸ್ಥೆ ಬೇಕಾಗುತ್ತದೆ. ವಿಮಾನ ಪ್ರಯಾಣಿಕಕ್ಕೂ ಎರಡು ಡೋಸ್‌ ವ್ಯಾಕ್ಸಿನೇಷನ್‌ ಆಗಿರಬೇಕು ಎಂಬ ನಿಯಮವಿದೆ. ಆದರೂ ಇಲ್ಲಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸುವುದಿಲ್ಲವೇ? ಅದೇ ರೀತಿ ಹುಬ್ಬಳ್ಳಿಯಲ್ಲೊಂದು ತಪಾಸಣೆಗೆ ವ್ಯವಸ್ಥೆಯಾಗಬೇಕೆಂಬ ಆಗ್ರಹ ಸಾರ್ವಜನಿಕರದ್ದು.

ನಮ್ಮದ್ದಲ್ಲ ರಾಜ್ಯ ಸರ್ಕಾರದ್ದು:

ಇನ್ನು ಆರೋಗ್ಯ ವಿಷಯ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದ್ದು. ಹಿಂದೆ ಕೂಡ ಆರೋಗ್ಯ ಇಲಾಖೆಯೇ ಈ ರೀತಿ ವ್ಯವಸ್ಥೆ ಮಾಡಿಕೊಂಡಿತ್ತು. ನಮ್ಮ ಇಲಾಖೆ ಅದಕ್ಕೆ ನೆರವು ನೀಡಿತಷ್ಟೇ. ಸದ್ಯ ಬೆಂಗಳೂರು ಕೆಎಸ್‌ಆರ್‌ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಿಬಿಎಂಪಿಯೇ(BBMP) ವ್ಯವಸ್ಥೆ ಮಾಡಿಕೊಂಡಿದೆ. ನಾವು ಅದಕ್ಕೆ ಜಾಗ ನೀಡಿದ್ದೇವೆ. ಅದೇ ರೀತಿ ಇಲ್ಲಿನ ಜಿಲ್ಲಾಡಳಿತ ಬಯಸಿದರೆ ಜಾಗ ಕೊಡುತ್ತೇವೆ. ಪ್ರಯಾಣಿಕರ ಪ್ರಮಾಣಪತ್ರ ಪರಿಶೀಲನೆ, ಆರೋಗ್ಯ ತಪಾಸಣೆ ಜಿಲ್ಲಾಡಳಿತವೇ ಮಾಡಿಕೊಳ್ಳಬೇಕು ಎಂಬ ಸ್ಪಷ್ಟನೆ ರೈಲ್ವೆ ಇಲಾಖೆಯದ್ದು.

Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!

ಪ್ರಯಾಣಿಕರ ಪ್ರಮಾಣಪತ್ರ ಹಾಗೂ ಆರೋಗ್ಯ ತಪಾಸಣೆ ಯಾರಿಗೆ ಸಂಬಂಧಪಟ್ಟಿರುತ್ತದೆಯೋ ಗೊತ್ತಿಲ್ಲ. ಆದರೆ ಹುಬ್ಬಳ್ಳಿಗರ ಆರೋಗ್ಯದ ದೃಷ್ಟಿಯಿಂದ ಇಲ್ಲೊಂದು ಹೆಲ್ಪ್‌ ಡೆಸ್ಕ್‌ ತೆರೆದು ಪರಿಶೀಲನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಬೇಡಿಕೆ ಪ್ರಜ್ಞಾವಂತರದ್ದು.

ಕಳೆದ ಬಾರಿಯೂ ಜಿಲ್ಲಾಡಳಿತವೇ ಇಲ್ಲಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿತ್ತು. ಈ ಸಲವೂ ಅದು ಇಲ್ಲಿ ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆಗೆ ಮುಂದಾದರೆ ಅದಕ್ಕೆ ಬೇಕಾದ ನೆರವು ನೀಡುತ್ತೇವೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.  
 

Follow Us:
Download App:
  • android
  • ios