Asianet Suvarna News Asianet Suvarna News

Dharwad: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಶಾಲಾ-ಕಾಲೇಜಿಗೆ ರಜೆ

*  204ಕ್ಕೆ ಏರಿದ ಎಸ್‌ಡಿಎಂ ಕಾಲೇಜು ಸೋಂಕಿತರ ಸಂಖ್ಯೆ
*  ಸೋಂಕಿತರ ಟ್ರಾವಲ್‌ ಹಿಸ್ಟರಿ, ಜಿನೋಮ್‌ ಸಿಕ್ವೆನ್ಸಿ ಪರಿಶೀಲನೆ
*  ಹೊರ ರೋಗಿಗಳ ತಪಾಸಣಾ ಕೇಂದ್ರ ಬಂದ್‌, ಅನಗತ್ಯ ಭೇಟಿಗೆ ತಡೆ
 

204 New Corona Cases in Dharwad on Nov 26th grg
Author
Bengaluru, First Published Nov 27, 2021, 9:30 AM IST

ಧಾರವಾಡ(ನ.27): ನ. 17ರಂದು ಎಸ್‌ಡಿಎಂ(SDM) ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ(Students) ಕೋವಿಡ್‌ ಸೋಂಕು ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 66 ರಿಂದ 204ಕ್ಕೆ ಏರಿಕೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸಾವಿರ ಜನರನ್ನು ಕೋವಿಡ್‌ ತಪಾಸಣೆ(Covid Test) ಮಾಡಲಾಗಿದ್ದು, ಮೊದಲು 66 ನಂತರ 116 ಮತ್ತೆ ರಾತ್ರಿಯ ವೇಳೆ ಪತ್ತೆಯಾದ 22 ಪ್ರಕರಣಗಳು ಸೇರಿ ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

Covid19: ಧಾರವಾಡ SDM ಕಾಲೇಜಲ್ಲಿ ಕೊರೋನಾ ಸ್ಫೋಟ: ಮತ್ತೆ 116 ವಿದ್ಯಾರ್ಥಿಗಳಿಗೆ ಪಾಸಿಟಿವ್‌

ಸೋಂಕು ಯಾವುದೇ ಕಾರಣಕ್ಕೂ ಹಬ್ಬದಂತೆ ತುಂಬ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೊದಲು ಸೋಂಕಿತರಾದವರ ಟ್ರಾವೆಲ್‌ ಹಿಸ್ಟರಿ, ಜಿನೋಮ್‌ ಸಿಕ್ವೆನ್ಸಿ ಪರಿಶೀಲಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಎಂಗೆ ಸಾರ್ವಜನಿಕರ ಅನಗತ್ಯ ಭೇಟಿ ಹಾಗೂ ರೋಗಿಗಳ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿ​ಧಿಸಲಾಗಿದ್ದು ಜೊತೆಗೆ ಹೊರ ರೋಗಿಗಳ ತಪಾಸಣೆಯನ್ನು ಸಹ ಶುಕ್ರವಾರದಿಂದ ಭಾನುವಾರದ ವರೆಗೆ 3 ದಿನ ಬಂದ್‌ ಮಾಡಲಾಗಿದೆ. ಒಳ ರೋಗಿಗಳ ವಿಭಾಗದಲ್ಲೂ ತುರ್ತು ಚಿಕಿತ್ಸೆ(Treatment) ಮಾತ್ರ ಲಭ್ಯವಿದೆ. ಇದರ ಜೊತೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವ ಪ್ರತಿಯೊಂದು ರೋಗಿಗಳಿಗೆ ಕೋವಿಡ್‌ ಟೆಸ್ಟ್‌ ಮಾಡಿ, ನೆಗೆಟಿವ್‌(Negative) ಇದ್ದರಷ್ಟೇ ಹೊರಗೆ ಕಳುಹಿಸಲಾಗುತ್ತಿದೆ. ಒಳ ರೋಗಿಗಳ ಸಂಬಂಧಿಗಳಿಗೆ ಆಸ್ಪತ್ರೆ(Hospital) ಪ್ರವೇಶ ನಿರ್ಬಂಧಿಸಲಾಗಿದೆ. ಇದರೊಂದಿಗೆ ಎಸ್‌ಡಿಎಂ ಸುತ್ತಲಿನ 500 ಮೀಟರ್‌ ಪ್ರದೇಶದ ಶಾಲೆ- ಕಾಲೇಜುಗಳಿಗೆ(School-Colleges) ಶುಕ್ರವಾರ ರಜೆ ಘೋಷಿಸಲಾಗಿತ್ತು.

ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಸುಮಾರು 3,500 ಜನ ಎಸ್‌ಡಿಎಂ ಆವರಣದಲ್ಲಿದ್ದಾರೆ. ಆದ್ದರಿಂದ ಹುಬ್ಬಳ್ಳಿಯಿಂದ(Hubballi) ಹೆಚ್ಚಿನ ತಂಡಗಳನ್ನು ಕರೆಯಿಸಿ ಅವರ ಸ್ವ್ಯಾಬ್‌ ಸಂಗ್ರಹಿಸಲಾಗುತ್ತಿದೆ. ಡಿಮ್ಹಾನ್ಸ್‌, ಕಿಮ್ಸ್‌ ಹಾಗೂ ಎಸ್‌ಡಿಎಂ ಪ್ರಯೋಗಾಲಯಗಳನ್ನು ಸಂಗ್ರಹಿತ ಮಾದರಿಗಳ ವರದಿ ಪಡೆಯಲಾಗುವುದು. ಎಲ್ಲ ವರದಿಗಳು(Report) ಶುಕ್ರವಾರ ಮಧ್ಯರಾತ್ರಿ ಅಥವಾ ಶನಿವಾರ ಬೆಳಗಿನ ಹೊತ್ತಿಗೆ ಲಭ್ಯವಾಗಬಹುದು. ತದನಂತರ ಈ ಪ್ರಕರಣದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಲಭ್ಯವಾಗಲಿದೆ.

Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!

ಕಲಾಕ್ಷೇತ್ರದಲ್ಲಿ ನ. 17 ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮ, ನ. 19 ರಂದು ನಡೆದ ಮದುವೆ ಸಮಾರಂಭ ಹಾಗೂ ನ. 25 ರಂದು ನಡೆದ ಹೆಗ್ಗಡೆ ಅವರ ಜನ್ಮದಿನದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡವರೆಲ್ಲರೂ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಲು ಸೂಚನೆ ನೀಡಿಲಾಗಿದೆ. ಸೋಂಕಿತರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿದ ವ್ಯಕ್ತಿಗಳೂ ಕೂಡ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಸಮಾಧಾನದ ಸಂಗತಿ ಏನೆಂದರೆ, ಸೋಂಕಿತರು ಕೋವಿಡ್‌ ನಿರೋಧಕ ಲಸಿಕೆಯ(Vaccine) ಎರಡೂ ಡೋಸ್‌ ಪಡೆದಿದ್ದಾರೆ. ತೀವ್ರತರ ಲಕ್ಷಣಗಳಿಲ್ಲ. ಉತ್ತಮ ಚಿಕಿತ್ಸೆ, ಔಷಧೋಪಚಾರ ಕಲ್ಪಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ಮಾಹಿತಿ ನೀಡಿದರು.

ಪಾಲಕರ ತಪಾಸಣೆಗೂ ಸೂಚನೆ:

ನ. 17 ರಂದು ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕೆಲವು ಪಾಲಕರೂ ಕೂಡ ಭಾಗವಹಿಸಿದ್ದರೆಂದು ತಿಳಿದು ಬಂದಿದೆ. ಅಂತಹ ವ್ಯಕ್ತಿಗಳೂ ಕೂಡ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಇದುವರೆಗೆ ಎಸ್‌ಡಿಎಂ ಆವರಣದಿಂದ ಹೊರಗೆ ಎಲ್ಲಿಯೂ ಪ್ರಕರಣಗಳೂ ವರದಿಯಾಗಿಲ್ಲ. ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸ್ವ್ಯಾಬ್‌ ನೀಡಿ, ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್‌ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾ​ಕಾರಿಗಳು ಮನವಿ ಮಾಡಿದರು.
 

Follow Us:
Download App:
  • android
  • ios