ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ: ಸಿಟಿ ಫುಲ್ ಕೇಸರಿ, ಶಾಲೆ-ಕಾಲೇಜುಗಳಿಗೆ ರಜೆ

ಹಿಂದೂ ಪರಿಷತ್& ಭಜರಂಗದಳ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್, ಕೋಟೆನಾಡು ಎಲ್ಲೆಲ್ಲೂ ಕೇಸರಿಮಯ, ಫುಲ್ ಟೈಟ್ ಪೊಲೀಸ್ ಸೆಕ್ಯುರಿಟಿ, ಶಾಲೆ-ಕಾಲೇಜುಗಳಿಗೆ ರಜೆ: ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿದೆ.

School And College Holiday For Hindu Maha Ganesha procession in Chitradurga Om Sept 17th rbj

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ‌ನ್ಯೂಸ್

ಚಿತ್ರದುರ್ಗ, (ಸೆಪ್ಟೆಂಬರ್.16):
  ರಾಜ್ಯದಲ್ಲಿಯೇ ಅತ್ಯಂತ ಪ್ರಸಿದ್ದಿ ಹೊಂದಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಕೋಟೆನಾಡು ಚಿತ್ರದುರ್ಗ ನಗರ ಸಕಲ ಸಿದ್ದತೆ ಮಾಡಿಕೊಂಡಿದೆ. ನಗರದ ತುಂಬೆಲ್ಲಾ ಪ್ರಮುಖ ವೃತ್ತಗಳಲ್ಲಿ ಕೇಸರಿಯಿಂದ ಅಲಂಕೃತವಾಗಿರುವ ಪ್ರತಿಮೆಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪೊಲೀಸ್ ಕೂಡ ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

 ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ದ ಶೋಭಾಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ಕೋಟೆನಾಡು ಚಿತ್ರದುರ್ಗ ನಗರದ ಹಿಂದೂ ಮಹಾಗಣಪತಿ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಾಳೆ(ಸೆ.17) ನಡೆಯಲಿದ್ದು, ಅದಕ್ಕಾಗಿ ಇಡೀ ಚಿತ್ರದುರ್ಗ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿದೆ. 

ಗಣೇಶ ಮೆರವಣಿಗೆಯಲ್ಲಿ ಅಣ್ಣತಮ್ಮಂದಿರ ಕಾಳಗ: ಹೆಣ ಬೀಳ್ತಿದ್ದಂತೆ ಮೆರವಣಿಗೆಯೇ ಸ್ಟಾಪ್‌

ಮೆರವಣಿಗೆಯಲ್ಲಿ ಕಲಾ ತಂಡಗಳ ಮೆರಗು
School And College Holiday For Hindu Maha Ganesha procession in Chitradurga Om Sept 17th rbj

ನಾಳೆ ಸರಿ ಸುಮಾರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿವ ನಿರೀಕ್ಷೆಯಿದೆ. ಎರಡು ವರ್ಷ ಕೋವಿಡ್ ಕಾರಣದಿಂದ ಸರಳವಾಗಿ ಆಚರಿಸಲಾಗಿತ್ತು. ಆದ್ರೆ, ಈ ಬಾರಿ ಅದ್ದೂರಿಯಾಗಿ ಶೋಭಾಯಾತ್ರೆ ಮಾಡಲು ನಿರ್ಧಿರಿಸಿದ್ದೀವಿ. ಅದಕ್ಕಾಗಿಯೇ ನಗರದ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಹಾಗೂ  ಶೋಭಾಯಾತ್ರೆಯಲ್ಲಿ ಕೇರಳ ಹಾಗೂ ತಮಿಳು ನಾಡಿನಿಂದ ವಿಶೇಷ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಲಿವೆ. 

ಬಿಗಿ ಪೊಲೀಸ್ ಬಂದೋಬಸ್ತ್
School And College Holiday For Hindu Maha Ganesha procession in Chitradurga Om Sept 17th rbj

ಇನ್ನು  ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನರು ಸೇರಲಿದ್ದು ಅದಕ್ಕಾಗಿ ನಗರದಲ್ಲೆಡೆ ಪೊಲೀಸ್ ಇಲಾಖೆ ಕೂಡ ಸೂಕ್ತ ಬಿಗಿ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಇಂದು(ಶುಕ್ರವಾರ) ಸಂಜೆ ಎಸ್ಪಿ ಹಾಗೂ ಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ ಮಾಡುವ ಮೂಲಕ ಪರಿಶೀಲನೆ ನಡೆಸಿದರು. 

ಹೊರಗಿನಿಂದ ಬರುವವರ ತಪಾಸಣೆಗಾಗಿಯೇ 9 ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಸೂಕ್ತ ಬಂದೋ ಬಸ್ತ್ ಗಾಗಿ 8 KSRP, 8 DAR ತುಕಡಿಗಳು ಹಾಗೂ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದ ಮುಖ್ಯ ರಸ್ತೆಯ ಸಂಚಾರಿ ಮಾರ್ಗವನ್ನು ಕೂಡ ಬದಲಾವಣೆ ಮಾಡಲಾಗಿದೆ. ನಾಳಿನ ಶೋಭಾಯಾತ್ರೆ ಹಾಗೂ ಹಿಂದೂ ಮಹಾಗಣಪತಿ ವಿಸರ್ಜನೆಗೆ ಎಲ್ಲಾ ರೀತಿಯ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.

 ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಕಾನೂನು ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ನಾಳೆ(ಸೆ.17)  ಚಿತ್ರದುರ್ಗ ನಗರ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಶುಕ್ರವಾರ ಚಿತ್ರದುರ್ಗ ಡಿಡಿಪಿಐ  ರವಿಶಂಕರ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಒಟ್ಟಾರೆ ನಾಳೆ ಚಿತ್ರದುರ್ಗ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಕ್ಷಣ ಗಣನೆ ಶುರುವಾಗಿದ್ದು ಕೋಟೆನಾಡಿನ ಮಂದಿ ಕಾತುರದಿಂದ ಕಾಯ್ತಿದ್ದಾರೆ. ಅದೇನೆ ಇರ್ಲಿ ನಾಳಿನ ಕಾರ್ಯಕ್ರಮ ಯಾವುದೇ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದೇ ಸಾಗಲಿ ಎಂಬುದು ಎಲ್ಲರ ಬಯಕೆ.

Latest Videos
Follow Us:
Download App:
  • android
  • ios