ಹಾಸನ(ಫೆ.06): ಮದುವೆಯಲ್ಲಿ ಧಾರೆ ಸೀರೆ ಮಹತ್ವವಾದದ್ದು. ಆದರೆ ಧಾರೆ ಸೀರೆ ವಿಚಾರಕ್ಕೆ ಮದುವೆಯೇ ಮುರಿದುಬಿದ್ದಂತಹ ವಿಚಾರ ಕೇಳಿದ್ದೀರಾ..? ಹಾಸನದಲ್ಲಿ ಧಾರೆ ಸೀರೆ ವಿಚಾರಕ್ಕಾಗಿಯೇ ವಿವಾಹ ಮುರಿದು ಬಿದ್ದ ಘಟನೆ ನಡೆದಿದೆ.

ಹಾಸನ ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದುವೆ ದಿನ ವರ ಎಸ್ಕೆಪ್ ಆಗಿದ್ದಾನೆ. ಇದರಿಂದ ವಿವಾಹವೂ ಮುರಿದು ಬಿದ್ದಿದೆ. ಧಾರೆ ಸೀರೆ ವಿಚಾರಕ್ಕೆ ಬೀಗರ ನಡುವೆ ಶುರುವಾದ ಜಗಳ ಮದುವೆ ಮುರಿದು ಬೀಳುವುದರಲ್ಲಿ ಕೊನೆಯಾಗಿದೆ.

ಮುಂಜಾವ 3 ಗಂಟೆಗೇ ಮದುವೆ ಹೆಣ್ಣು ಎಸ್ಕೇಪ್, ನಷ್ಟ ಪರಿಹಾರ ಕೇಳಿದ ವರ

ಮದುವೆ ಹಿಂದಿನ ದಿನ ಮದುಮಗ ಮನೆಯಿಂದ ಪರಾರಿಯಾಗಿದ್ದಾನೆ. ಬಿ.ಎನ್.ರಘುಕುಮಾರ್ ಎಸ್ಕೇಪ್ ಆದ ವರ. ಅದೇ ಗ್ರಾಮದ ಬಿ.ಆರ್.ಸಂಗೀತಾ ಅವರೊಂದಿಗೆ ಬಿದರಕೆರೆ ಗ್ರಾಮದಲ್ಲಿ ಮದುವೆ ನಿಶ್ವಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿದ್ದರು. ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಧಾರಾ ಮುಹೂರ್ತ ಮುಗಿಸಿ ಪರೀಕ್ಷೆ ಬರೆದ ಮದುಮಗಳು!

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ