ತೋರಣಗಲ್ಲು ಗ್ರಾಪಂ ವ್ಯಾಪ್ತಿಯ ಸುಲ್ತಾನಪುರದಲ್ಲಿ ಗ್ರಾಮ ಸ್ಥಳಾಂತರ ಕುರಿತಂತೆ ಸಾರ್ವಜನಿಕ ಸಭೆ  ಗ್ರಾಮವನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಅಹವಾಲು, ಅನಿಸಿಕೆ ತಿಳಿಸುವಂತೆ ಮನವಿ

ಸಂಡೂರು (ನ.03): ಮಂಗಳವಾರ ಬಳ್ಳಾರಿ (Ballary) ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು (Toranagallu) ಗ್ರಾಪಂ ವ್ಯಾಪ್ತಿಯ ಸುಲ್ತಾನಪುರದಲ್ಲಿ ಗ್ರಾಮ ಸ್ಥಳಾಂತರ ಕುರಿತಂತೆ ಸಾರ್ವಜನಿಕ ಸಭೆ ನಡೆಯಿತು.

ಗ್ರಾಮವನ್ನು ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಅಹವಾಲು, ಅನಿಸಿಕೆ ತಿಳಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಆಕಾಶ್‌ ಶಂಕರ್‌ (Akash shankar) ಸಾರ್ವಜನಿಕರಿಗೆ ಕೋರಿದರು.

ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್‌ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ

100 ಮೈಕ್ರೋನ್‌ ವಾಯು ಮಾಲಿನ್ಯವಿದ್ದರೆ (Pollution) ಮನುಷ್ಯರು ವಾಸಮಾಡಲು ಯೋಗ್ಯವಲ್ಲ. ಆದರೆ ಇಲ್ಲಿ 705 ಮೈಕ್ರೋನ್‌ನಷ್ಟು ಮಾಲಿನ್ಯವಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ (pollution Board) ಹೇಳುತ್ತದೆ ಎಂದು ಕೆ.ಜಂಭಣ್ಣ, ಹುಚ್ಚಪ್ಪ, ಹನುಮೇಶ, ಶಿವಕುಮಾರ್‌ ಮತ್ತಿತರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಬೇಡಿಕೆಗನುಗುಣವಾಗಿ ವಸತಿ (shelter), ಉದ್ಯೋಗ (Job) ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿದಲ್ಲಿ ಮಾತ್ರ ಸ್ಥಳಾಂತರಕ್ಕೆ ಒಪ್ಪಿಗೆ ನೀಡಲಾಗುವುದೆಂದರು.

100 ಎಕರೆಗೂ ಅಧಿಕ ಕೃಷಿ ಭೂಮಿ (Agriculture land) ಇದ್ದು ಮಾಲಿನ್ಯದಿಂದ ಬೆಳೆ ಬೆಳೆಯಲಾರದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಕರೆಗೆ 1.20 ಕೋಟಿ ರು. ಬೆಲೆ ನಿಗದಿಪಡಿಸುವ ಜತೆಗೆ ಪ್ರತಿ ಕುಟುಂಬದಲ್ಲಿ (family) ಒಬ್ಬರಿಗೆ ಉದ್ಯೋಗ (Job) ನೀಡಬೇಕು. 180 ಕುಟುಂಬಗಳಿದ್ದು, 300ಕ್ಕೂ ಹೆಚ್ಚು ಮನೆಗಳಿವೆ. ಸ್ಥಳಾಂತರಗೊಳಿಸುವುದಾದಲ್ಲಿ 40- 60 ಅಳತೆಯ ನಿವೇಶನದಲ್ಲಿ ಸುಸಜ್ಜಿತ ಮನೆಗಳನ್ನು (House) ನಿರ್ಮಿಸಿಕೊಡಬೇಕು. ಮಸೀದಿ, ಮಂದಿರ ನಿರ್ಮಾಣದ ಜತೆಗೆ ಆಸ್ಪತ್ರೆ (Hospital), ಅಂಗನವಾಡಿ, ಆಟದ ಮೈದಾನವನ್ನೊಳಗೊಂಡ ಶಾಲೆ (School), ಕುಡಿಯುವ ನೀರು (Drinking water), ರಸ್ತೆ, ಮಿನಿ ಕೆರೆ, ಇ-ಗ್ರಂಥಾಲಯ (E Library) ಸೇರಿ ಸಕಲ ಸೌಲಭ್ಯವುಳ್ಳ ಪರ್ಯಾಯ ಗ್ರಾಮ ನಿರ್ಮಿಸಿದಲ್ಲಿ ಮಾತ್ರ ಸ್ಥಳಾಂತರಕ್ಕೆ ಒಪ್ಪಿಗೆ ನೀಡುವುದಾಗಿ ತಿಳಿಸಿದರು.

ಈ ಊರಿಗೆ ಬರೋ ಮುನ್ನ ಹುಷಾರ್‌...!

ಗ್ರಾಮಸ್ಥೆ ಸಂಧ್ಯಾ ಮಾತನಾಡಿದರು.

ಒಟ್ಟಾರೆ ಶೇ.90ರಷ್ಟು ಜನರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದರು. ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ ಉಮಾಶಂಕರ್‌, ತಹಶೀಲ್ದಾರ್‌ ಎಚ್‌.ಜೆ. ರಶ್ಮಿ, ಪ್ರಭಾರ ಆರ್‌ಐ ಕೆ. ಮಂಜುನಾಥ, ಗ್ರಾಪಂ ಅಧ್ಯಕ್ಷೆ ಸಿ.ಮಹೇಶ್ವರಿ ಕಟ್ಟೆಪ್ಪ, ಉಪಾಧ್ಯಕ್ಷ ಆರ್‌. ಗೋವಿಂದರೆಡ್ಡಿ, ಸದಸ್ಯ ಮೌನೇಶ, ಪಿಡಿಒ ಯು.ಹನುಮಂತಪ್ಪ, ಗ್ರಾಮಸ್ಥರಾದ ಆರ್‌. ವೆಂಕಟೇಶರೆಡ್ಡಿ, ಕೆ. ಸುರೇಶ, ಪಿ. ಕುಬೇರ, ಆರ್‌. ಶಿವಕುಮಾರ್‌, ಎಸ್‌. ಹುಲುಗಪ್ಪ ಇತರ ಗ್ರಾಮಸ್ಥರಿದ್ದರು.

ಮತ್ತೆ ಗಣಿಗಾರಿಕೆ ಆರಂಭ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ 2023ರಲ್ಲಿ ಆರಂಭವಾಗಲಿದೆ ಎಂದು ಕೆಐಒಸಿಎಲ್ ಎಂಡಿ ಟಿ.ಸಾಮಿನಾಥನ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಗಣಿಗಾರಿಕೆಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಮೊದಲ ಹಂತದ ಅನುಮೋದನೆ ಪಡೆಯಲಾಗಿದ್ದು, 2022ರ ಮಾರ್ಚ್‌ ವೇಳೆಗೆ 2ನೇ ಹಂತದ ಕ್ಲಿಯರ್‌ ನಡೆಯುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಗಳೆಲ್ಲ ಮುಗಿದು 2023ರ ವೇಳೆಗೆ ಗಣಿಗಾರಿಕೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ದೇವದಾರಿಯಲ್ಲಿ 2 ಎಂಟಿಪಿಎ ಕಬ್ಬಿಣದ ಅದಿರು ಮತ್ತು 500 ಟಿಪಿಎ ಮ್ಯಾಂಗನೀಸ್ ಅದಿರಿನ ಸಾಮರ್ಥ್ಯವಿದೆ ಎಂದು ಸಾಮಿನಾಥನ್‌ ಮಾಹಿತಿ ನೀಡಿದರು.

ವಿವಿಧೆಡೆ ಖನಿಜ ಪರಿಶೋಧನೆ: 

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌, ಭಾರತ ಸರ್ಕಾರದ ಗಣಿ ಸಚಿವಾಲಯ, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದೇಶದ ವಿವಿಧೆಡೆ ಖನಿಜ ಪರಿಶೋಧನೆ ಕಾರ್ಯಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಕೆಐಒಸಿಎಲ್ಅಂತಹ ನಾಲ್ಕು ಬ್ಲಾಕ್ಗಳಿಗೆ ಜಿ4 ಮಟ್ಟದ ಖನಿಜ (ನಿಕ್ಕೆಲ್, ಲೈಮ್ಸ್ಟೋನ್, ಡೋಲೊಮೈಟ್) ಪರಿಶೋಧನಾ ಕಾರ್ಯ ಪೂರ್ಣಗೊಳಿಸಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ ವರದಿ ಸಲ್ಲಿಸಿದೆ. ಜತೆಗೆ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರದಿಂದ ಮಂಜೂರಾದ 10 ಕಬ್ಬಿಣ ಮತ್ತು ಮ್ಯಾಂಗನೀಸ್‌ ಕ್ವಾರಿಗಳಲ್ಲಿ ಜಿ2, ಜಿ3 ಮಟ್ಟದ ಪರಿಶೋಧನೆ ಕಾರ್ಯ ಪ್ರಗತಿಯಲ್ಲಿವೆ ಎಂದು ವಿವರಿಸಿದರು.