ವಿಶ್ವದ್ಯಾಂತ ಸಿನಿಮಾ ಬಿಡುಗಡೆಗೆ ವಿತರಕರು ಮುಂದಾಗಿದ್ದರೂ ಕಾಫಿನಾಡಿನಲ್ಲಿ‌ 'ಕೆಜಿಎಫ್ 2' ಬಿಡುಗಡೆ ಆಗುತ್ತಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು ಪ್ರತಿಭಟನೆ ಹಾದಿಯನ್ನು ಹಿಡಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.13): 'ಕೆಜಿಎಫ್ 2' (KGF Chapter 2) ಚಿತ್ರ ಈಗಾಗಲೇ ವಿಶ್ವದಾದ್ಯಂತ ರಿಲೀಸ್‌ಗೆ ಚಿತ್ರತಂಡ ತಯಾರಿ ನಡೆಸಿದೆ. ಯಶ್ (Yash) ಅಭಿಮಾನಿಗಳು (Fans) ಕೂಡ ಈಗಾಗಲೇ ಟಿಕೆಟ್ ಕಾಯ್ದಿರಿಸುವಲ್ಲಿ ನಿರತರಾಗಿದ್ದಾರೆ. ವಿಶ್ವದ್ಯಾಂತ ಸಿನಿಮಾ ಬಿಡುಗಡೆಗೆ ವಿತರಕರು ಮುಂದಾಗಿದ್ದರೂ ಕಾಫಿನಾಡಿನಲ್ಲಿ (Chikkamagaluru)‌ 'ಕೆಜಿಎಫ್ 2' ಬಿಡುಗಡೆ ಆಗುತ್ತಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು ಪ್ರತಿಭಟನೆ ಹಾದಿಯನ್ನು ಹಿಡಿದ್ದಾರೆ. 

ಕಾಫಿನಾಡಿನಲ್ಲಿ‌ ಕೆಜಿಎಫ್ 2 ಸಿನಿಮಾ ಬಿಡುಗಡೆ ಇಲ್ಲ: ನಾಳೆ ರಾಜ್ಯಾದ್ಯಂತ ಬಹುನಿರೀಕ್ಷಿತ ಕೆಜಿಎಫ್ 2 ಬಿಡುಗಡೆಯಾಗುತ್ತಿದ್ದರೂ ಚಿಕ್ಕಮಗಳೂರು ನಗರದಲ್ಲಿ ಬಿಡುಗಡೆಯಾಗುತ್ತಿಲ್ಲವಾದ್ದರಿಂದ ಯಶ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ನಗರದ ಎಂಎನ್‌ಸಿ ಸರ್ಕಲ್‌ನಲ್ಲಿರುವ ನಾಗಲಕ್ಷ್ಮಿ ಥಿಯೇಟರ್ (Nagalakshmi Theater) ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಥಿಯೇಟರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

KGF 2 ಚಿತ್ರದ ಸುಲ್ತಾನ ಹಾಡು ರಿಲೀಸ್!

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಸಿ ಟಿ ರವಿ: ನಗರದ ಎನ್ ಎಮ್ ಸಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಭಿಮಾನಿಗಳನ್ನು ಇದೇ ರಸ್ತೆಯಲ್ಲಿ ಹೋಗುತ್ತಿದ್ದ ಶಾಸಕ ಸಿ.ಟಿ ರವಿ (CT Ravi) ನೋಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಸಿನಿಮಾ ಬಿಡುಗಡೆ ಆಗದಿರುವ ಬಗ್ಗೆ ಚಿತ್ರಮಂದಿರದ ಮಾಲೀಕರ ಜತೆ ಚರ್ಚೆ ನಡೆಸಿದರು. ತದನಂತರ ಅಭಿಮಾನಿಗಳಿಗೆ ನಟ ಯಶ್ ಹಾಗೂ ವಿತರಕರ ಜತೆ ಮಾತನಾಡುವ ಭರವಸೆ ನೀಡಿದರು. ಯಶ್ ನಟನೆಯ ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಹಾಗಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲೇಬೇಕೆಂದು ಪಟ್ಟು ಹಿಡಿದಿದ್ದ ಅಭಿಮಾನಿಗಳನ್ನು ಮನವೊಲಿಸಿ ಪರಿಣಾಮ ಪ್ರತಿಭಟನೆಯನ್ನು ಅಭಿಮಾನಿಗಳನ್ನು ಕೈಬಿಟ್ಟರು.

ಕೆಜಿಎಫ್‌-2ಗೆ ಕೆಜಿಎಫ್‌ನಲ್ಲೇ ಬಿಡುಗಡೆ ಭಾಗ್ಯವಿಲ್ಲ: ಕೆಜಿಎಫ್‌ ಚಾಪ್ಟರ್‌-2 ಹೆಸರಿನ ಸಿನಿಮಾ ಕೆಜಿಎಫ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ, ಇದರಿಂದ ಸಾವಿರಾರು ಯಶ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೆಜಿಎಫ್‌ ನಗರದಲ್ಲಿ ಇರುವ ಒಂದು ಚಿತ್ರಮಂದಿರದಲ್ಲಿ ತಮಿಳು ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಜಿಎಫ್‌ ಚಾಪ್ಟರ್‌-2 ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ. ಯಶ್‌ಗೆ ಕೆಜಿಎಫ್‌ ಚಾಪ್ಟರ್‌-1 ಹೆಸರು ಮತ್ತು ಹಣಗೊಳಿಸಿಕೊಟ್ಟಿದೆ, ಅದೇ ರೀತಿ ಕೆಜಿಎಫ್‌ ಚಾಪ್ಟರ್‌-2 ಸಹ ಭರ್ಜರಿ ಪ್ರಚಾರದಿಂದ ಕೆಜಿಎಫ್‌ನ ಚಾಪ್ಟರ್‌-2 ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಆದರೆ ಕೆಜಿಎಫ್‌ ಹೆಸರಿನ ಚಿತ್ರ ಕೆಜಿಎಫ್‌ನಲೇ ಬಿಡುಗಡೆಯಾಗುತ್ತಿಲ್ಲ. ಕೆಜಿಎಫ್‌ ಸಿನಿಮಾ ನೋಡಲು ಅಭಿಮಾನಿಗಲೂ 30 ಕಿ,ಮೀಟರ್‌ ದೂರದ ಕೋಲಾರಕ್ಕೆ ಹೋಗಬೇಕಿದೆ. ಈ ಹಿಂದೆ ಕೆಜಿಎಫ್‌ -1 ಸಹ ಬಿಡುಗಡೆ ಮಾಡಿರಲಿಲ್ಲ. ನಂತರ ಮಧ್ಯಮಾಮಗಳಲ್ಲಿ ಬಂದ ನಂತರ ಕೆಜಿಎಫ್‌ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೆಜಿಎಫ್‌ ಚಾಪ್ಟರ್‌ ಒಂದು ಗೆ ಕೆಜಿಎಫ್‌ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ರೀತಿ ಕೆಜಿಎಫ್‌ ಚಾಪ್ಟರ್‌-2 ಕೆಜಿಎಫ್‌ ನಗರದಲ್ಲಿ ಬಿಡುಗಡೆಗಾಗಿ ಯಶ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

'KGF 2' ಮೊದಲ ವಿಮರ್ಶೆ ಔಟ್; ಭಾರತೀಯ ಚಿತ್ರರಂಗದ ಕಿರೀಟ ಎಂದ ಸೆನ್ಸಾರ್ ಸದಸ್ಯ

ನಾಳೆ ಕೆಜಿಎಫ್‌ 2 ರಿಲೀಸ್‌: ಯಶ್‌ ನಟನೆಯ ಕೆಜಿಎಫ್‌ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಏ.14) ರಂದು ಚಿತ್ರ ವಿಶ್ವಾದ್ಯಂತ ತೆರೆಕಾಣಲಿದ್ದು, ಭರ್ಜರಿ ನಿರೀಕ್ಷೆ ಹುಟ್ಟು ಹಾಕಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನೆಲ್ಲೆಡೆ ಚಿತ್ರದ ಟಿಕೇಟ್‌ಗಳು ಸೋಲ್ಡ್‌ಔಟ್‌ ಆಗಿವೆ. ರಾಷ್ಟ್ರಮಟ್ಟದಲ್ಲೂ ಚಿತ್ರ ಸದ್ದು ಮಾಡುತ್ತಿದ್ದು, ಜನ ರಾಕಿ ಬಾಯ್‌ ಬರುವಿಕೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಅಮೆರಿಕಾ, ಆಸ್ಪ್ರೇಲಿಯಾ, ನ್ಯೂಜಿಲ್ಯಾಂಡ್‌ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೆಜಿಎಫ್‌ 2 ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ರಜೆಯ ವರದಾನ: ನಾಳೆ ಅಂಬೇಡ್ಕರ್‌ ಜಯಂತಿ, ನಾಡಿದ್ದು ಗುಡ್‌ಫ್ರೈ ಡೇ, ಶನಿವಾರ ಭಾನುವಾರ ವೀಕೆಂಡ್‌ ರಜೆಗಳು ಚಿತ್ರಕ್ಕೆ ವರದಾನವಾಗಲಿದೆ. ಇದರಿಂದ ಅತ್ಯುತ್ತಮ ಕಲೆಕ್ಷನ್‌ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ. ಉತ್ತರ ಭಾರತದಲ್ಲಿ ಏ.14ರಂದು ಬೈಸಾಕಿ ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಅಲ್ಲೂ ಆರಂಭದ ದಿನವೇ ಅತ್ಯುತ್ತಮ ಕಲೆಕ್ಷನ್‌ನ ನಿರೀಕ್ಷೆ ಇದೆ.