Asianet Suvarna News Asianet Suvarna News

Bengaluru News: 2022ರಲ್ಲಿ ಐಐಎಸ್‌ಸಿ ಸಂಶೋಧಕರಿಂದ 585 ಪೇಟೆಂಟ್‌ಗೆ ಅರ್ಜಿ: ಪೇಟೆಂಟ್‌ ಸಲ್ಲಿಕೆಯಲ್ಲಿ ಗಮನಾರ್ಹ ಹೆಚ್ಚಳ

ಹೆಚ್ಚುತ್ತಿರುವ ಪೇಟೆಂಟ್‌ಗಳ ಸಂಖ್ಯೆಯು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಸಂಶೋಧನೆಯ ಮೇಲೆ IISc ಯ ಹೆಚ್ಚಿನ ಗಮನವನ್ನು ಸೂಚಿಸುತ್ತದೆ ಎಂದು ತಿಳಿದುಬಂದಿದೆ. ಭಾರತೀಯ ಸಂಶೋಧಕರು ಈ ಹಿಂದೆ ಈ ರೀತಿಯ ಸಂಶೋಧನೆ ಮಾಡಲು ಹಿಂಜರಿಯುತ್ತಿತ್ತು ಎಂದು ಕಂಡುಬಂದಿದೆ.

researchers at iisc bangalore filed 2 patents every 3 days in 2022 ash
Author
First Published Jan 9, 2023, 1:30 PM IST | Last Updated Jan 9, 2023, 1:30 PM IST

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸುತ್ತಿರುವ ಪ್ರಮಾಣದಲ್ಲಿ ಕಳೆದ ದಶಕದಲ್ಲಿ ಗಮನಾರ್ಹ ಹೆಚ್ಚಳ ಕಂಡಿದೆ. ಅದರಲ್ಲೂ, ಕಳೆದ ಐದು ವರ್ಷಗಳಲ್ಲಿ ವಿಶೇಷವಾಗಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಜನವರಿ 2001 ರಿಂದ ಡಿಸೆಂಬರ್ 2022 ರವರೆಗೆ, IISc ಸಂಶೋಧಕರು ಮತ್ತು ವಿಜ್ಞಾನಿಗಳು 3,147 ಪೇಟೆಂಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ ಜನವರಿ 2018 ಮತ್ತು ಡಿಸೆಂಬರ್ 2022 ರ ನಡುವಿನ ಅವಧಿಯಲ್ಲಿ ಸುಮಾರು 70% ಅಂದರೆ 2,157 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಡೇಟಾ ತೋರಿಸುತ್ತದೆ.

ಉದಾಹರಣೆಗೆ, ಶತಮಾನದಷ್ಟು ಹಳೆಯದಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ ಸಂಸ್ಥೆಯ (Indian Institute of Science Institute) ವಿಜ್ಞಾನಿಗಳು (Scientists) ಮತ್ತು ಸಂಶೋಧಕರು (Researchers) , 2022 ರಲ್ಲಿ ಸರಾಸರಿ ಪ್ರತಿ ಮೂರು ದಿನಗಳಿಗೊಮ್ಮೆ ಎರಡು ಪೇಟೆಂಟ್‌ಗಳ (Patents) ಪ್ರಮಾಣದಲ್ಲಿ 585 ಪೇಟೆಂಟ್‌ಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ಇದು 2021 ರಲ್ಲಿ ಸಲ್ಲಿಕೆಯಾದ 512 ಪೇಟೆಂಟ್‌ ಅರ್ಜಿಗಿಂತ ಹೆಚ್ಚಳವಾಗಿದೆ. 2017 ರಲ್ಲಿ ಮೊದಲ ಬಾರಿ 200 ರ ಗಡಿಯನ್ನು ದಾಟಿದ್ದ ಪೇಟೆಂಟ್‌ ಅರ್ಜಿಯ ಪ್ರಮಾಣ ನಂತರ ಏರಿಕೆಯಾಗಿದೆ.  2018 ರಲ್ಲಿ, ಅಂತಹ ಕನಿಷ್ಠ 283 ಅರ್ಜಿಗಳನ್ನು ಸಲ್ಲಿಸಲಾಗಿದೆ. 

ಇದನ್ನು ಓದಿ: IISC Recruitment 2022: ಬೆಂಗಳೂರಿನಲ್ಲಿ ಬಂಪರ್ ಆಫರ್

ಈ ಪ್ರಮಾಣ ನಾಲ್ಕೇ ವರ್ಷದಲ್ಲಿ ಮತ್ತಷ್ಟು ಹೆಚ್ಚಾಗಿದ್ದು, 2022 ರಲ್ಲಿ ಆ ಪ್ರಮಾಣ 585 ಆಗಿದೆ ಎಂದು ತಿಳಿದುಬಂದಿದೆ. ಹೆಚ್ಚುತ್ತಿರುವ ಪೇಟೆಂಟ್‌ಗಳ ಸಂಖ್ಯೆಯು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಸಂಶೋಧನೆಯ ಮೇಲೆ IISc ಯ ಹೆಚ್ಚಿನ ಗಮನವನ್ನು ಸೂಚಿಸುತ್ತದೆ ಎಂದು ತಿಳಿದುಬಂದಿದೆ. ಭಾರತೀಯ ಸಂಶೋಧಕರು ಈ ಹಿಂದೆ ಈ ರೀತಿಯ ಸಂಶೋಧನೆ ಮಾಡಲು ಹಿಂಜರಿಯುತ್ತಿತ್ತು ಎಂದು ಕಂಡುಬಂದಿದೆ.

ಇನ್ನೊಂದೆಡೆ, ಜನವರಿ 2006 ರಿಂದ ಇಂದಿನವರೆಗೆ, 983 ಪೇಟೆಂಟ್‌ಗಳಿಗೆ ಹಸಿರು ನಿಶಾನೆ ಸಿಕ್ಕಿದೆ ಎಂದು ತಿಳಿದುಬಂದಿದೆ. IISc ಮಾಜಿ ನಿರ್ದೇಶಕ ಮತ್ತು PM ಸಲಹೆಗಾರ ಪ್ರೊಫೆಸರ್‌. ಸಿಎನ್‌ಆರ್ ರಾವ್, "ಸಂಶೋಧಕರು ಕೇವಲ ಹುಡುಕುವುದು, ಪ್ರಕಟ ಮಾಡುವುದು ಮತ್ತು ಹಾಗೆ ಮುಂದೆ ಹೋಗಿ ಅದನ್ನು ಬಿಟ್ಟು ಬಿಡುವುದನ್ನು ಮಾಡಬಾರದು. ತಮ್ಮ ವಿಜ್ಞಾನವನ್ನು ತಂತ್ರಜ್ಞಾನಕ್ಕೆ ಪರಿವರ್ತನೆ ಮಾಡಬಾರದು ಎಂದು ಅನೇಕ ಬಾರಿ ಪುನರುಚ್ಚರಿಸಿದ್ದರು.

ಇದನ್ನೂ ಓದಿ: Artificial Coronavirus: ಐಐಎಸ್‌ಸಿಯಲ್ಲಿ ಕೃತಕ ಕೊರೋನಾ ವೈರಸ್‌ ಸೃಷ್ಟಿ..!

ಇನ್ನು, ಅಂತಾಷ್ಟ್ರೀಯ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮೂಲಭೂತ ಸಂಶೋಧನೆಗಳು ನಡೆಯುತ್ತಲೇ ಇದ್ದರೂ, ನಾವು ಕೆಲವು ಭಾಷಾಂತರದಲ್ಲಿ ಗಮನಹರಿಸುವಂತೆ ನಾವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಅವರ ಕೆಲಸಗಳು ಆ ಸಮಯದಲ್ಲಿ ನಾವೀನ್ಯತೆಗಳು ಮತ್ತು ಉತ್ಪನ್ನಗಳು ಹೊರಹೊಮ್ಮುತ್ತವೆ. ಕೆಲವು ಪೇಟೆಂಟ್‌ಗಳನ್ನು ಕಳೆದ ಕೆಲವು ವರ್ಷಗಳಲ್ಲಿ ಉದ್ಯಮಕ್ಕೆ ವರ್ಗಾಯಿಸಲಾಗಿದೆ. ಸೊಸೈಟಿ ಫಾರ್‌ ಇನ್ನೊವೇಷನ್‌ ಅಂಡ್‌ ಡೆವಲಪ್‌ಮೆಂಟ್‌ ಈ ಕೆಲವು ಕೆಲಸವನ್ನು ಇನ್‌ಕ್ಯುಬೇಟೆಡ್ ಕಂಪನಿಗಳ ಮೂಲಕ ಮಾಡುವುದು ಸಹ ಹೆಚ್ಚುತ್ತಿದೆ ಎಂದು IPTeL (ಬೌದ್ಧಿಕ ಆಸ್ತಿ ಮತ್ತು ತಂತ್ರಜ್ಞಾನ ಪರವಾನಗಿ) ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಜಿ.ಕೆ. ಅನಂತ ಸುರೇಶ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಐಐಎಸ್ಸಿ ಪ್ರಜ್ಞಾಪೂರ್ವಕವಾಗಿ ಹೆಚ್ಚಿದ ಪೇಟೆಂಟ್ ಫೈಲಿಂಗ್ ಅನ್ನು ಸುಗಮಗೊಳಿಸುತ್ತಿದೆ ಎಂದೂ ಅನಂತ ಸುರೇಶ್ ಹೇಳಿದರು. "ನಮ್ಮಲ್ಲಿ ಟೆಕ್ ಬಿಜ್ ಇನ್‌ಕ್ಯುಬೇಶನ್ ಕಚೇರಿಗಳಿವೆ ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಹೆಚ್ಚಿಸುವ ಹಲವಾರು ಚಟುವಟಿಕೆಗಳನ್ನು ಹೊಂದಿದ್ದೇವೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗುವ ಭರವಸೆ ಇದೆ. ಅಲ್ಲದೆ, ದೇಶದಲ್ಲಿ ಪೇಟೆಂಟ್ ಪರಿಸರವೂ ಸುಧಾರಿಸುತ್ತಿದೆ ಮತ್ತು ಅದು ತುಂಬಾ ಸ್ಪಷ್ಟವಾಗುತ್ತಿದೆ" ಎಂದೂ IPTeL (ಬೌದ್ಧಿಕ ಆಸ್ತಿ ಮತ್ತು ತಂತ್ರಜ್ಞಾನ ಪರವಾನಗಿ) ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಜಿ.ಕೆ. ಅನಂತ ಸುರೇಶ್ ಹೇಳಿದರು.

ಇದನ್ನೂ ಓದಿ: NIRF Ranking; ಬೆಂಗಳೂರಿನ ಐಐಎಸ್‌ಸಿ ದೇಶದ ನಂ.1 ವಿವಿ

Latest Videos
Follow Us:
Download App:
  • android
  • ios