ನಗರದ ಗೋಕುಲ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ್ದು, ವರ್ತಕರಿಗೆ ಮತ್ತು ನಿವಾಸಿಗಳಿಗೆ ಅನಾನುಕೂಲವಾಗದಂತೆ ವ್ಯವಸ್ಥೆಯಲ್ಲಿ ಅಲ್ಪಪ್ರಮಾಣದಲ್ಲಿ ಸಡಿಲಗೊಳಿಸುವತ್ತ ಪೊಲೀಸರು ಕ್ರಮವಹಿಸಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಹುಣಸೂರು (ನ.07): ನಗರದ ಗೋಕುಲ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ್ದು, ವರ್ತಕರಿಗೆ ಮತ್ತು ನಿವಾಸಿಗಳಿಗೆ ಅನಾನುಕೂಲವಾಗದಂತೆ ವ್ಯವಸ್ಥೆಯಲ್ಲಿ ಅಲ್ಪಪ್ರಮಾಣದಲ್ಲಿ ಸಡಿಲಗೊಳಿಸುವತ್ತ ಪೊಲೀಸರು ಕ್ರಮವಹಿಸಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಗೋಕುಲ ರಸ್ತೆಯ ವರ್ತಕರು, ನಿವಾಸಿಗಳು ಮತ್ತು ಪೊಲೀಸರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಗೋಕುಲ ರಸ್ತೆಯಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ (School) ಕಾಲೇಜುಗಳಿಗೆ (College) ತೆರಳುತ್ತಿದ್ದು, ಸಂಚಾರ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ರಸ್ತೆಯನ್ನು ಏಕಮುಖ ವಾಹನ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಸರಿಯಷ್ಟೆ. ಆದರೆ ಶಾಲಾ ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ಅವಧಿಯನ್ನು ಹೊರತುಪಡಿಸಿ ಮಿಕ್ಕ ವೇಳೆ ರಸ್ತೆಯಲ್ಲಿ ಸಂಚಾರ ವ್ಯತ್ಯವಾಗುತ್ತಿಲ್ಲವೆನ್ನುವುದು ಅಲ್ಲಿನ ವರ್ತಕರ ವಾದವಾಗಿದೆ.
ಅಲ್ಲದೇ ಸುತ್ತಮುತ್ತಲ ಬಡಾವಣೆಯ ನಾಗರೀಕರು ಮನೆಗೆ ತೆರಳಲು ರಸ್ತೆಯನ್ನು ಸುತ್ತುಹಾಕಬೇಕಿದೆ. ಪೊಲೀಸರ ನಿರ್ಧಾರ ಸರಿಯಾದರೂ ವರ್ತಕರ ಮತ್ತು ನಾಗರೀಕರ ಅನುಕೂಲಕ್ಕಾಗಿ ದಿನದ ಬೆಳಗ್ಗೆ ಮತ್ತು ಸಂಜೆಯ ವೇಳೆ ತಲಾ ಎರಡು ಗಂಟೆಗಳ ಕಾಲ (ಬೆಳಗ್ಗೆ 8ರಿಂದ 10 ಮತ್ತು ಸಂಜೆ 3ರಿಂದ 5ಗಂಟೆಯವರೆಗೆ) ನಿಯಮವನ್ನು ಸಡಿಲಗೊಳಿಸುವತ್ತ ಇಲಾಖೆ ಗಮನಹರಿಸುವುದು ಸೂಕ್ತ. ಈ ಕುರಿತು ಪರಿಶೀಲಿಸಿ ಎಂದು ಡಿವೈಎಸ್‌ಪಿ ರವಿಪ್ರಸಾದ್‌ಗೆ ಸೂಚಿಸಿದರು.
ವರ್ತಕರಾದ ಮಹಮದ್ ಷಫಿ, ಮಾಲಿಕ್ ಪಾಷಾ ಮುಂತಾದವರು ಮಾತನಾಡಿ, ದಿನವಿಡೀ ಏಕಮುಖ ಸಂಚಾರ ವ್ಯವಸ್ಥೆಯಿಂದಾಗಿ ವ್ಯಾಪಾರ ವಹಿವಾಟು ಗಣನೀಯವಾಗಿ ತಗ್ಗಿದೆ. ಇಷ್ಟಕ್ಕೂ ರಸ್ತೆ ಬದಿ ವಾಹನಗಳನ್ನು 15 ದಿನಕ್ಕೊಮ್ಮೆ ಒಂದೊಂದು ಬದಿಗೆ ನಿಲ್ಲಿಸುವ ಪದ್ಧತಿಯನ್ನು ಪೊಲೀಸರ ನಿರ್ದೇಶನದಂತೆ ಈಗಾಗಲೇ ಅನುಸರಿಸಲಾಗುತ್ತಿದೆ. ಶಾಲೆ ಆರಂಭ ಮತ್ತು ಬಿಟ್ಟವೇಳೆಯಲ್ಲಿ ಮಾತ್ರ ಸಮಸ್ಯೆ ಆಗುತ್ತಿದ್ದು, ವ್ಯವಹಾರಕ್ಕೆ ಧಕ್ಕೆ ಬಾರದಂತೆ ಹಾಗೂ ನಿವಾಸಿಗಳಿಗೆ ಅನಾನುಕೂಲವಾಗದಂತೆ ಕ್ರಮವಹಿಸಬೇಕು ಎಂದು ಅವರು ಕೋರಿದರು.
ಡಿವೈಎಸ್‌ಪಿ ರವಿಪ್ರಸಾದ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾನೂನು ಇನ್ನಷ್ಟುಕಠಿಣವಾಗಲಿದೆ. ಶಾಲಾ ಕಾಲೇಜುಗಳ ಅವಧಿ ಹೊರತುಪಡಿಸಿ ಗೊಕುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದು ನಿಜ. ವರ್ತಕರು ತಮ್ಮ ಅಂಗಡಿಗೆ ಬರುವ ಗ್ರಾಹಕರ ವಾಹನಗಳನ್ನು ಅಡ್ಡಡ್ಡವಾಗಿ ನಿಲ್ಲಿಸಿಕೊಳ್ಳುವುದನ್ನು ನಿಯಂತ್ರಿಸಬೇಕು. ಸೆಲ್ಪ್ ಡಿಸಿಪ್ಲೀನ್ ಇಲ್ಲದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ನಿಯಮ ಸಡಿಲಗೊಳಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುತ್ತೇನೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು. ಅಶೋಕ್, ಗಿರಿ, ಗೋಪಿ, ಮಹಮದ್ ಷಫಿ, ಮಾಲಿಕ್ ಪಾಷಾ, ನಿಶ್ಚಲ್, ಎಲ್ಡೊ ಮೊದಲಾದವರು ಇದ್ದರು.
ನಿಯಮ ಪಾಲಿಸಿದ್ರೆ ಗಿಫ್ಟ್
ಹೈದರಾಬಾದ್(ಜು.31): ರಸ್ತೆ ನಿಯಮ ಉಲ್ಲಂಘಿಸಿದರೆ ದಂಡ ತಪ್ಪಿದ್ದಲ್ಲ. ಇದೀಗ ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. 100 ರೂಪಾಯಿ ದಂಡ ಇನ್ಮುಂದೆ 1000 ರೂಪಾಯಿ ಆಗಲಿದೆ. ನಗರದೆಲ್ಲಡೆ ಸಿಸಿಟಿವಿ, ಹೆಚ್ಚುವರಿ ಪೊಲೀಸರು ನೇಮಿಸಿದರೂ ರಸ್ತೆ ನಿಯಮ ಉಲ್ಲಂಘನೆ ಗಣನೀಯ ಇಳಿಕೆಯಾಗಿಲ್ಲ. ಇದೀಗ ಪೊಲೀಸರು ಹೊಸ ಯೋಜನೆ ಜಾರಿ ತಂದಿದ್ದಾರೆ. ರಸ್ತೆ ನಿಯಮವನ್ನು ಪಾಲಿಸುವವರಿಗೆ ಪೊಲೀಸರು ಭರ್ಜರಿ ಗಿಫ್ಟ್ ನೀಡಿ ಅಭಿನಂದಿಸುತ್ತಿದ್ದಾರೆ.
ಇದನ್ನೂ ಓದಿ: 3 ಗಂಟೆಯಲ್ಲಿ 1,169 ಡ್ರಿಂಕ್ & ಡ್ರೈವ್ ಪ್ರಕರಣ; ಬೆಂಗಳೂರು ಪೊಲೀಸರ ದಾಖಲೆ!
ರಸ್ತೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿ, ಯಾವುದೇ ನಿಯಮ ಉಲ್ಲಂಘಿಸದೇ ವಾಹನ ಚಲಾಯಿಸುವವರಿಗೆ ಹೈದರಾಬಾದ್ ಪೊಲೀಸರು ಉಡುಗೊರೆ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಿಯಮ ಪಾಲಿಸಿದ ವಾಹನ ಸವಾರರನ್ನು ಗುರುತಿಸಿ ಹೈದರಾಬಾದ್ ಪೊಲೀಸರು ಅಭಿನಂದಿಸಿದ್ದಾರೆ. ಇಷ್ಟೇ ಅಲ್ಲ ಅವರಿಗೆ ಉಚಿತ ಮೂವಿ ಟಿಕೆಟ್ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ವಾಹನ ಮಾರಾಟ ಕುಸಿತ; 10 ಲಕ್ಷ ಉದ್ಯೋಗ ಕಡಿತ!
ಹೈದರಾಬಾದ್ ಸಿಟಿ ಪೊಲೀಸ್ ಕಮಿಶನರ್ ಅಂಜನಿ ಕುಮಾರ್ ಸ್ವತಃ ನಗರದ ರಸ್ತೆಗಳಿದಿದ್ದಾರೆ. ನಿಯಮ ಪಾಲಿಸುವರನ್ನು ರಸ್ತೆಗಳಲ್ಲೇ ಅಭಿನಂದಿಸಿ ಜಾಗೃತಿ ಮೂಡಿಸುತ್ತಿದ್ದಾರೆ. 45 ಮೋಟಾರ್ ಬೈಕ್ ಸವಾರರನ್ನು ಗುರುತಿಸಿ ಉಚಿತ ಮೂವಿ ಟಿಕೆಟ್ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಕಚೇರಿ, ಮನೆ, ನೆರಮನೆ ಸೇರಿದಂತೆ ಎಲ್ಲರಲ್ಲೂ ರಸ್ತೆ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲು ಮನವಿ ಮಾಡಿದ್ದಾರೆ.
