ವಾಹನ ಮಾರಾಟ ಕುಸಿತ; 10 ಲಕ್ಷ ಉದ್ಯೋಗ ಕಡಿತ!
2019ರಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ವಾಹನ ಮಾರಾಟ ದಾಖಲೆಯ ಕುಸಿತ ಕಂಡಿದೆ. ಇದನ್ನೇ ನೆಚ್ಚಿಕೊಂಡಿರುವ ಸಣ್ಣ ಉದ್ಯಮ ಕಂಪನಿಗಳು ನಷ್ಟ ಭರಿಸಲಾಗದೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಇದೀಗ ಬರೋಬ್ಬರಿ 10 ಲಕ್ಷ ಉದ್ಯೋಗ ಕಡಿತಗೊಳ್ಳಲಿದೆ.
ನವದೆಹಲಿ(ಜು.25): ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೆಂದು ಕಾಣದಂತ ಕುಸಿತ ಕಂಡಿದೆ. ಮಾರಾಟದಲ್ಲಿನ ಕುಸಿತ ವಾಹನ ಕಂಪನಿಗಳ ಆದಾಯಕ್ಕೆ ಕತ್ತರಿ ಹಾಕಿದೆ. ಇದರ ಜೊತೆಗೆ ಹೊಸ ನಿಯಮಗಳಿಂದ ವಾಹನದ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರು ವಾಹನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಆಟೋಮೊಬೈಲ್ ಕಂಪನಿಗಳಿಗೆ ಮಾತ್ರವಲ್ಲ, ಇದನ್ನು ನೆಚ್ಚಿಕೊಂಡಿರುವ ಇತರ ಕಂಪನಿ ಹಾಗೂ ಸಣ್ಣ ಉದ್ಯಮದ ಮೇಲೂ ಹೊಡೆತ ಬಿದಿದ್ದೆ.
ಇದನ್ನೂ ಓದಿ: ಸಂಕಷ್ಟದಲ್ಲಿ ಭಾರತೀಯ ವಾಹನ ಮಾರುಕಟ್ಟೆ - ಕಳೆದ 8 ವರ್ಷಗಳಲ್ಲಿ ಇದೇ ಮೊದಲು!
ವಾಹನ ಮಾರಾಟ ಕುಸಿತದಿಂದ ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಗಳು ಇದೀಗ ನಷ್ಟದಲ್ಲಿದೆ. ದೇಶ -ವಿದೇಶಿ ಕಂಪನಿಗಳು ಇದೀಗ ಭಾರತದಲ್ಲಿ ವಾಹನ ಉತ್ಪಾದನಾ ಘಟಕ ಹೊಂದಿದೆ. ಈ ಮೂಲಕ ಇಲ್ಲೇ ವಾಹನ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದೆ. ಈ ಕಂಪನಿಗಳಿಗೆ ಬಿಡಿ ಭಾಗಗಳನ್ನು ಪೂರೈಸುವ ಸುಮಾರು 50,000 ಸಣ್ಣ ಉದ್ಯಮಗಳು ಭಾರತದಲ್ಲಿವೆ.
ಇದನ್ನೂ ಓದಿ: 3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!
ಭಾರತದ GDPಗೆ 2.3% ರಷ್ಟು ಆದಾಯ ಇದೇ ಬಿಡಿ ಭಾಗ ಪೂರೈಸೋ ಕಂಪನಿಯಿಂದ ಹರಿದು ಬರುತ್ತಿದೆ. ಇದೀಗ ವಾಹನ ಮಾರಾಟದಲ್ಲಿ ಕುಸಿತ ಕಂಡಿರೋ ಕಾರಣ, ಬಿಡಿ ಭಾಗ ಪೂರೈಸೋ ಕಂಪನಿಯ ಸುಮಾರು 8 ರಿಂದ 10 ಲಕ್ಷ ಉದ್ಯೋಗಕ್ಕೆ ಕುತ್ತು ಬಂದಿದೆ. 2018-19ರಲ್ಲಿ ವಾಹನ ಕಂಪನಿಗಳಿಗೆ ಬಿಡಿ ಭಾಗ ಪೂರೈಸೋ ಕಂಪನಿಗಳ ವಾರ್ಷಿಕ ವ್ಯವಹಾರ 4 ಲಕ್ಷ ಕೋಟಿ ರೂಪಾಯಿ.
ಇದನ್ನೂ ಓದಿ: ಅಲ್ಲು ಅರ್ಜುನ್ 7 ಕೋಟಿ ರೂ. ಫಾಲ್ಕನ್ ವ್ಯಾನ್ ಮೇಲೆ ಮೊದಲ ಕೇಸ್ !
ವಾರ್ಷಿಕ ಸರಾಸರಿ ಅಂಕಿ ಅಂಶದ ಪ್ರಕಾರ, 2.3 ಲಕ್ಷ ರೂಪಾಯಿ ಮೌಲ್ಯದ ಬಿಡಿ ಭಾಗಗಳು ಭಾರತದಲ್ಲಿರುವ ವಾಹನ ಕಂಪನಿಗಳು ಖರೀದಿಸುತ್ತಿದೆ. ಇನ್ನು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಿಡಿ ಭಾಗಗಳು ವಿದೇಶಗಳಿಗೆ ರಫ್ತಾಗುತ್ತಿದೆ. ಆದರೆ 2019ರ ಆರಂಭದಿಂದಲೇ ವಾಹನ ಮಾರಾಟ ಕುಸಿತದಿಂದ ಉತ್ಪಾದನೆಯಾಗಿರುವ ವಾಹನದ ಬಿಡಿ ಭಾಗಗಳು ಮಾರಾಟವಾಗದೆ ಉಳಿದಿದೆ. ಹೀಗಾಗಿ 8 ರಿಂದ 10 ಲಕ್ಷ ಕಾರ್ಮಿಕರ ಉದ್ಯೋಗ ತೂಗುಯ್ಯಾಲೆಯಲ್ಲಿದೆ.
ಇದನ್ನೂ ಓದಿ: ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ ರೂಲ್ಸ್!
ವಾಹನ ಕಂಪನಿ ಹಾಗೂ ಇದನ್ನು ನೆಚ್ಚಿಕೊಂಡಿರುವ ಕಂಪನಿಗಳು ನಷ್ಟದಿಂದ ಹೊರಬರಲು ಕೇಂದ್ರ ಸರ್ಕಾರಕ್ಕೆ ಹಲವು ಬೇಡಿಕೆ ಇಟ್ಟಿವೆ. GSTಯನ್ನು ಶೇಕಡಾ 18ಕ್ಕೆ ಇಳಿಸಲು ಮನವಿ ಮಾಡಲಾಗಿದೆ. ಆದರೆ ಇತ್ತೀಚೆಗಿನ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಹೊರತು ಪಡಿಸಿ, ಇತರ ವಾಹನಕ್ಕೆ ಯಾವುದೇ ಅನುದಾನ ಅಥವಾ ಕೂಡುಗೆ ನೀಡಿಲ್ಲ. ಇದು ವಾಹನ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡಿದೆ. ಒಂದೆಡೆ ಮಾರಾಟ ಕುಸಿತ, ಉದ್ಯೋಗ ಕಡಿತ ಭಾರತದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಲಿದೆ.