Asianet Suvarna News Asianet Suvarna News

ರಂಗ ಶಂಕರ: ನಾಟಕ ಪ್ರಿಯರ ಮನತಣಿಸುವ ಹಬ್ಬ

ಅಕ್ಟೋಬರ್ - ನವೆಂಬರಿನಲ್ಲಿ ಕಲೆಗಳು ಅರಳುತ್ತದಂತೆ. ಹೌದು. ಅಂಥ ಹಲವು ಪ್ರದರ್ಶನಗಳ ಗುಚ್ಛ ನಿಮಗಾಗಿ. ನಾಟಕ ಪ್ರಿಯರಿಗಾಗಿ. ರಂಗಶಂಕರದಲ್ಲಿ ನಡೆಯೋ ನಾಟಕೋತ್ಸವದ ಹೈಲೇಟ್ಸ್ ಇದು.

Ranga shankara Theatre Festival 2018 Bengaluru
Author
Bengaluru, First Published Oct 15, 2018, 5:44 PM IST

ಬೆಂಗಳೂರು: ನಾಟಕ ಪ್ರಿಯರು ನಿರೀಕ್ಷೆಯಿಂದ ಕಾದು ಕೂರುವ ರಂಗಶಂಕರದ ನಾಟಕೋತ್ಸವ ಈ ವರ್ಷ ಅಕ್ಟೋಬರ್ 27ರಿಂದ ನವೆಂಬರ್ 4ರವರೆಗೆ ನಡೆಯಲಿದೆ. ಜೆಪಿ ನಗದ ರಂಗ ಶಂಕರದಲ್ಲಿ ರಂಗ ಪ್ರಿಯರಿಗೆ ರಸದೌತಣ ನೀಡುವ ಈ ಉತ್ಸವದಲ್ಲಿ ವಿವಿಧ ಭಾಷೆಯ, ವಿಭಿನ್ನ ತಂಡಗಳು ಹಲವು ನಾಟಕಗಳ ಪ್ರದರ್ಶನ ನೀಡುತ್ತವೆ.

ರಂಗವೇರದೇ ಉಳಿಯುತ್ತಿರುವ ನಾಟಕಗಳು ರಂಗ ಶಂಕರದಲ್ಲಿ ಮಾತ್ರ

ಈ ನಾಟಕೋತ್ಸವದ ವಿಶೇಷವೇನು?

ಪ್ರಗತಿಯ ಮೊದಲ ಸಂಕೇತವೆಂದರೆ ಸೆನ್ಸಾರ್‌ಷಿಪ್ಪನ್ನು ತೆಗೆದು ಹಾಕುವುದು
-ಜಾರ್ಜ್ ಬರ್ನಾರ್ಡ್ ಶಾ
 

ನಾಟಕೋತ್ಸವದಲ್ಲಿ  ಪ್ರದರ್ಶನಗೊಳ್ಳುವ ನಾಟಕಗಳ ಗುಚ್ಛ

ರಂಗಭೂಮಿಯ ಮಾಂತ್ರಿಕ ಪ್ರಭೆಯನ್ನು ಜೀವಂತವಾಗಿರಿಸಲು ರಂಗ ಶಂಕರ 14 ವರ್ಷಗಳಿಂದ ನಿರಂತರವಾಗಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ಎಲ್ಲರಿಗೂ ದಕ್ಕುವಂತಹ, ನಮ್ಮ ಸಂಸ್ಕೃತಿಯ ಮೂಲ ಬೇರಿನ ಸಂಪರ್ಕವನ್ನು ಕಾಪಾಡಿಕೊಳ್ಳುತ್ತಲೇ ಜಾಗತಿಕ ಶ್ರೇಣಿಯ ರಂಗಭೂಮಿಯನ್ನು ಹುಟ್ಟು ಹಾಕಬೇಕೆಂಬ ಅಭೀಪ್ಸೆಯೊಂದಿಗೆ ಬೆಳೆದ ರಂಗ ಶಂಕರ ಈಗ ಸಾಕಷ್ಟು ದಾರಿ ಕ್ರಮಿಸಿದೆ. 

ಬೆಂಗಳೂರಷ್ಟೇ ಅಲ್ಲ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ರಂಗಭೂಮಿಯ ಚೌಕಟ್ಟಿನಲ್ಲಿ ರಂಗ ಶಂಕರ ಬಹು ಮುಖ್ಯ ಸ್ಥಾನ ಹೊಂದಿದೆ. ಇಂದು ರಂಗ ಶಂಕರಕ್ಕಿರುವ ಸ್ಧಾನ, ಅದರ ಸಾಮಾಜಿಕ ಮೌಲ್ಯ ಭಾರತದ ರಂಗಭೂಮಿಯ ಪ್ರಮುಖ ಸಂಪನ್ಮೂಲಗಳಲ್ಲಿ ಬಹಳ ಎತ್ತರದ್ದು ರಂಗ ಶಂಕರದ ಪ್ರೇಕ್ಷಕರಿಗೆ ಇದು ಹಕ್ಕಿನ ಹೆಮ್ಮೆ. ರಂಗಭೂಮಿ ಸಮುದಾಯಕ್ಕೆ ಇದು ಅತ್ಯಮೂಲ್ಯ ತಾಣ. 

ರಂಗ ಶಂಕರವೆಂದರೆ ರಂಗಭೂಮಿಯೊಂದಿಗೆ ಇರುವ ಬದ್ಧತೆ ಮತ್ತು ಭಾರತೀಯ ರಂಗಭೂಮಿಯೊಂದಿಗಿರುವ ಸಾಂಸ್ಕೃತಿಕ ನಂಟು. ಕಳೆದ ಹದಿನಾಲ್ಕು ವರ್ಷಗಳಲ್ಲಿ ನಾವು 26 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭಾಷೆಗಳಲ್ಲಿ, ಸುಮಾರು 5400 ಪ್ರದರ್ಶನಗಳನ್ನು 8 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗೆ ಏರ್ಪಡಿಸಿದೆ.

ರಂಗ ಶಂಕರ ನಾಟಕೋತ್ಸವ

ರಂಗ ಶಂಕರ ಆರಂಭವಾಗಿದ್ದು 2004ರ ಅಕ್ಟೋಬರ್ ತಿಂಗಳಲ್ಲಿ. ಪ್ರತಿ ವರ್ಷ ಅಕ್ಟೋಬರ್/ನವೆಂಬರ್‌ನಲ್ಲಿ ಇದು ಅತ್ಯಂತ ಅರ್ಥಪೂರ್ಣ ಹಾಗೂ ಅತ್ಯುತ್ತಮ ಕಲಾತ್ಮಕ ನಾಟಕಗಳ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕಗಳು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತವೆ. ಈ ನಾಟಕೋತ್ಸವವನ್ನು ಕೇವಲ ಬೆಂಗಳೂರೇ ಅಲ್ಲ, ಭಾರತೀಯ ರಂಗಕರ್ಮಿಗಳೂ, ಪ್ರೇಕ್ಷಕರೂ ಎದುರು ನೋಡುತ್ತಾರೆ. ರಂಗ ಶಂಕರದ ಪ್ರೇಕ್ಷಕರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಬಲು ಉತ್ಕೃಷ್ಟ ರುಚಿ ಹಾಗೂ ಪ್ರಜ್ಞೆಯನ್ನು ಹೊಂದಿರುವವರು ಅವರಿಗೆ ನಾಟಕ ಮನರಂಜನೆಯನ್ನೂ ಮೀರಿ ಅಲೋಚನೆಯ ದಿಕ್ಕನ್ನು ಬದಲಾಯಿಸುವ ಕ್ರಿಯೆಯಾಗಿರಬೇಕೆಂದು ಆಶಿಸುತ್ತಾರೆ. ಪ್ರೇಕ್ಷಕರ ಈ ಬೇಡಿಕೆಗೆ ಪೂರಕವಾಗಿ ಏರ್ಪಡಿಸುವ ನಾಟಕಗಳ ಪ್ರದರ್ಶನ ಭಾರತ ಹಾಗೂ ಕರ್ನಾಟಕದಾದ್ಯಂತ ಹೆಸರು ಮಾಡಿದ್ದಲ್ಲದೇ ನಾಟಕ ಕಲೆಯ ಪ್ರೋತ್ಸಾಹ ಹೇಗೆ ನಡೆಯುತ್ತಿರಬೇಕು ಎನ್ನುವುದಕ್ಕೆ ರಂಗ ಶಂಕರ ಒಂದು ಉತ್ತಮ ಉದಾಹರಣೆ. 

Follow Us:
Download App:
  • android
  • ios