Asianet Suvarna News Asianet Suvarna News

ರಾಮ ಮಂದಿರ ಲೋಕಾರ್ಪಣೆ: ಮನೆ-ಮನೆಗೆ ಆಹ್ವಾನ

ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಯಾಗುತ್ತಿರುವ ಕಾರ್ಯಕ್ರಮಕ್ಕೆ ಸ್ವಯಂ ಸೇವಾ ಯುವಕರು ಅಕ್ಷತೆ ನೀಡುವ ಮೂಲಕ ಪ್ರತಿ ಮನೆ-ಮನೆಯ ಎಲ್ಲಾ ಸದಸ್ಯರನ್ನು ಆಹ್ವಾನಿಸುವ ಕಾರ್ಯ ಮಾಡುತ್ತಿದ್ದು ಸಂತೋಷದ ವಿಚಾರ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Ram Mandir inauguration   Door-to-door invitation snr
Author
First Published Dec 12, 2023, 9:57 AM IST

 ಕೊರಟಗೆರೆ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಯಾಗುತ್ತಿರುವ ಕಾರ್ಯಕ್ರಮಕ್ಕೆ ಸ್ವಯಂ ಸೇವಾ ಯುವಕರು ಅಕ್ಷತೆ ನೀಡುವ ಮೂಲಕ ಪ್ರತಿ ಮನೆ-ಮನೆಯ ಎಲ್ಲಾ ಸದಸ್ಯರನ್ನು ಆಹ್ವಾನಿಸುವ ಕಾರ್ಯ ಮಾಡುತ್ತಿದ್ದು ಸಂತೋಷದ ವಿಚಾರ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಗದ್ದುಗೆ ಆಂಜನೇಯಸ್ವಾಮಿ ದೇವಾಲಯದ ಬಳಿ ಏರ್ಪಡಿಸಿದ್ದ ಅಯೋಧ್ಯೆಯಿಂದ ಬರುವ ಮಂತ್ರಾಅಕ್ಷತೆ ಕಳಶ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಭಾರತೀಯರ ಆಸೆಯಂತೆ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ. ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ, 2024 ರ ಜನವರಿ 22 ರಂದು ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ನೆರವೇರಲಿದೆ, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ, ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಮುದ್ರಿಸಿ ದೇಶದ ಎಲ್ಲಾ ಮನೆ-ಮನೆ ಗಳಿಗೆ ಸ್ವಯಂ ಸೇವ ಯುವಕರಿಂದ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆಗಳು ತಲುಪಿಸುವ ಕಾರ್ಯ ಮಾಡುತ್ತಿದೆ ಎಂದ ಶ್ರೀಗಳು ಇದೊಂದು ಅವಿಸ್ಮರಣೀಯ ಸಮಾರಂಭವಾಗಿದ್ದು ಜಗ್ಗತ್ತಿನಾದ್ಯಂತ ಅನೇಕ ಪ್ರಮುಖರು, ಭಕ್ತರು, ಪವಿತ್ರ ರಾಮಂದಿರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಕೊರಟಗೆರೆ ಪಟ್ಟಣದ ಎಲ್ಲಾ ಭಕ್ತರು ಭಾಗವಹಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪವನ್‌ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸಂಜೀವರಾಯಪ್ಪ, ಎಂ.ಜಿ. ಬದ್ರಿನಾಥ್, ಅಶೋಕ್‌ಕುಮಾರ್, ಸಂಪಂಗಿ ರಾಮಶ್ರೇಷ್ಠಿ, ಮೇಡಿಕಲ್ ಕೃಷ್ಣಮೂರ್ತಿ, ಲಕ್ಷ್ಮೀಪ್ರಸಾದ್, ಉಮೇಶ್, ಗುರುದತ್ತ್, ಸ್ವಾಮಿ, ರವಿಕುಮಾರ್, ಪ್ರಕಾಶ್‌ರೆಡ್ಡಿ, ಕೆ.ವಿ.ರೋಹಿತ್, ಅನಿಲ್‌ಕುಮಾರ್, ನಾಗೇಶ್‌ರಾವ್, ಶ್ರೀನಿವಾಸ್‌ರಾವ್, ಗೋಪಿ, ವೆಂಕಟೇಶ್, ಪ್ರಭಯ್ಯ, ಅರವಿಂದ್, ಸುಶೀಲಮ್ಮ, ಪದ್ಮರಮೇಶ್, ಮಮತಾ ಸೇರಿದಂತೆ ಇನ್ನಿತರು ಹಾಜರಿದ್ದರು. 

ರಾಮನ ಅರ್ಚನೆಗೆ ಮೋಹಿತ್

ಅಯೋಧ್ಯೆ: ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವ ಶ್ರೀರಾಮನ ದೇಗುಲ ಉದ್ಘಾಟನೆಗೆ ದಿನಗಣನೆಯಾಗ್ತಿದೆ. ದೇಗುಲ ನಿರ್ಮಾಣ ಕಾಮಗಾರಿ ಕೊನೆ ಹಂತ ತಲುಪಿದ್ದು 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ದೇಗುಲದ ಉದ್ಘಾಟನೆ ಮಾಡಲಿದ್ದಾರೆ.  ಈ ಭವ್ಯ ಮಂದಿರದಲ್ಲಿ ಪೂಜೆಗಾಗಿ ದೇಶದೆಲ್ಲೆಡೆಯಿಂದ ಈ ಹಿಂದೆಯೇ ಪುರೋಹಿತರ ನೇಮಕ ಮಾಡಲಾಗಿದ್ದು, ಹೀಗೆ ನೇಮಕವಾದ ಪುರೋಹಿತರ ಪೈಕಿ ಓರ್ವ ವಿದ್ಯಾರ್ಥಿಯೂ ಸೇರಿದ್ದಾನೆ. ಅವರೇ ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋಹಿತ್ ಪಾಂಡೆ ಅವರ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಗಾಜಿಯಾಬಾದ್‌ನ (Gaziabad) ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ (Mohit Pande) ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ದೇಶದೆಲ್ಲೆಡೆಯ ಪುರೋಹಿತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 3 ಸಾವಿರಕ್ಕೂ ಹೆಚ್ಚು ಮಂದಿ ಈ ಪೌರೋಹಿತ್ಯ ಕೆಲಸಕ್ಕಾಗಿ ಸಂದರ್ಶನಕ್ಕೆ ಹಾಜರಾಗಿದ್ದರು. ಅಷ್ಟೊಂದು ಜನರಲ್ಲಿ ಕೇವಲ 50 ಮಂದಿಯನ್ನು ದೇಗುಲದ ಪೂಜೆಗಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರಾಗಿದ್ದಾರೆ ಈ ವಿದ್ಯಾರ್ಥಿ ಮೋಹಿತ್ ಪಾಂಡೆ.  ಇಲ್ಲಿ ಪುರೋಹಿತರಾಗಿ ಆಯ್ಕೆಯಾದ ಅರ್ಚಕರಿಗೆ ಆರು ತಿಂಗಳ ಕಾಲ ತರಬೇತಿ ನೀಡಲಾಗಿದೆ. 

ಅಯೋಧ್ಯೆ ದೇಗುಲದ ಬಗ್ಗೆ BRS ಶಾಸಕಿ ಕವಿತಾ ಪೋಸ್ಟ್‌: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು

ಈ ಮೋಹಿತ್ ಪಾಂಡೆಯವರು ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ (Dudheshwaranath Mutt) ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠದಲ್ಲಿ ವೇದಾಧ್ಯಯನ ನಡೆಸಿದ್ದಾರೆ. ಈ ದೂಧೇಶ್ವರನಾಥ ಮಠವೂ ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರಪಂಚದೆಲ್ಲೆಡೆಯಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವೇದಾಧ್ಯಯನ ಪೀಠದಲ್ಲಿ ಸುಮಾರು 70 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ದೇಶದ ಮಾತ್ರವಲ್ಲದೇ ವಿದೇಶಗಳಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ದೂಧೇಶ್ವರನಾಥ ಮಠದ ಪೀಠಾಧೀಶ್ವರ ಮಹಾಂತ್‌ ನಾರಾಯಣ ಗಿರಿ ಮಾತನಾಡಿದ್ದು, ದೂಧೇಶ್ವರ ದೇವರ ಆಶೀರ್ವಾದದಿಂದ  ಅಯೋಧ್ಯೆಯ ಶ್ರೀರಾಮನ ಸೇವೆಗೆ ಮೋಹಿತ್ ಪಾಂಡೆ ಆಯ್ಕೆಯಾಗಿದ್ದಾರೆ. ಈ ನಮ್ಮ ಮಠದಲ್ಲಿ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವೇದಾಧ್ಯಾಯನ ಕಲಿಸಿ ಸಂಸ್ಕಾರ ನೀಡಲಾಗಿದೆ. ಕಳೆದ 23 ವರ್ಷಗಳಿಂದ ಇಲ್ಲಿ ವೇದಾಧ್ಯಾಯನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ: ಗರ್ಭಗುಡಿ ಫೋಟೋ ಬಿಡುಗಡೆ ಮಾಡಿದ ಮಂದಿರ ಟ್ರಸ್ಟ್‌

ಧೂದೇಶ್ವರ ವಿದ್ಯಾಪೀಠದಲ್ಲಿ ಮೋಹಿತ್ ಅವರು 7 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಇಲ್ಲಿ ಅಧ್ಯಯನದ ನಂತರ ಹೆಚ್ಚಿನ ವೇದಾಭ್ಯಾಸಕ್ಕಾಗಿ ಮೋಹಿತ್ ತಿರುಪತಿಗೆ ಹೋಗಿದ್ದರು ಎಂದು ಮಹಾಂತ್‌ ನಾರಾಯಣ ಗಿರಿ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios