Asianet Suvarna News Asianet Suvarna News

ಎಸ್‌ಡಿಪಿಐ ಕಚೇರಿ ಮೇಲೆ ದಾಳಿ; ಫ್ಲೆಕ್ಸ್‌, ಕರಪತ್ರ ಪತ್ತೆ!

  • ಎಸ್‌ಡಿಪಿಐ ಕಚೇರಿ ದಾಳಿ; ಫ್ಲೆಕ್ಸ್‌, ಕರಪತ್ರ ಪತ್ತೆ
  • ಕಚೇರಿ ಸೀಲ್‌ ಮಾಡಿದ ಪೊಲೀಸರು, ಕಾರ್ಯಕರ್ತನ ಮನೆಯಲ್ಲಿ ಪಿಎಫ್‌ಐ ದಾಖಲೆ
Raids on SDPI office Flex find the brochure rav
Author
First Published Oct 1, 2022, 12:58 PM IST

ದಾವಣಗೆರೆ (ಅ.1) : ಎಸ್‌ಡಿಪಿಐ ಜಿಲ್ಲಾ ಕಚೇರಿ ಹಾಗೂ ಕಾರ್ಯಕರ್ತನೊಬ್ಬನ ಮನೆ ಮೇಲೆ ಶುಕ್ರವಾರ ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿ, ಕಚೇರಿಗೆ ಬೀಗ ಜಡಿದ ಘಟನೆ ಇಲ್ಲಿನ ಆಜಾದ್‌ ನಗರದ ಬಾಷಾ ನಗರ ಮುಖ್ಯರಸ್ತೆಯಲ್ಲಿ ನಡೆದಿದೆ.

ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಸನದಲ್ಲಿ ಬಂಧನ

ಇಲ್ಲಿನ ಆಜಾದ್‌ ನಗರದ ಬಾಷಾ ನಗರದ ಮುಖ್ಯರಸ್ತೆಯ ಎಸ್‌ಡಿಪಿಐ ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು ಕಚೇರಿಯಲ್ಲಿದ್ದ ದಾಖಲೆ, ಕಾಗದ ಪತ್ರಗಳನ್ನು ಪರಿಶೀಲನೆ ನಡೆಸಿದರಲ್ಲದೇ, ಕಚೇರಿಯನ್ನು ಸೀಲ್‌ ಮಾಡಿದರು. ನಂತರ ಸಂಘಟನೆಯ ಕಾರ್ಯಕರ್ತ ಮೆಹಬೂಬ್‌ ಸುಬಾನಿ ಮನೆಯಲ್ಲೂ ತಪಾಸಣೆ ಮಾಡಿದರು. ಹಿಂದೆ ಪಿಎಫ್‌ಐ, ಸಿಎಫ್‌ಐ ಕಚೇರಿಯಾಗಿದ್ದ ಇದೇ ಕಚೇರಿ ಕಳೆದ ಆಗಸ್ಟ್‌ ತಿಂಗಳಿನಿಂದ ಎಸ್‌ಡಿಪಿಐ ಕಚೇರಿಯಾಗಿ ಪರಿವರ್ತನೆಯಾಗಿತ್ತು. ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್‌ ಬಸವರಾಜ ಕೋಟೂರು ನೇತೃತ್ವದಲ್ಲಿ ಎಸ್‌ಡಿಪಿಎ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಕಚೇರಿಯಲ್ಲಿ ಎನ್‌ಐಎ ದಾಳಿ ವಿರೋಧಿಸಿ ಪ್ರತಿಭಟನೆಯ ಫ್ಲೆಕ್ಸ್‌, ಕರಪತ್ರಗಳು, ಸಂಘಟನೆ ಬಾವುಟಗಳು ಪತ್ತೆಯಾದವು. ತಪಾಸಣೆ ನಂತರ ಕಚೇರಿ ಸೀಲ್‌ ಮಾಡಿ, ಬೀಗದ ಕೀಯನ್ನು ಪೊಲೀಸರು ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅವರಿಗೆ ಹಸ್ತಾಂತರಿಸಿದರು.

ಬೆಂಗಳೂರಿನ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿ ಎಸ್‌ಡಿಪಿಐ ಕಾರ್ಯಕರ್ತರಿಬ್ಬರ ದಾವಣಗೆರೆ, ಹರಿಹರದ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಈಚೆಗೆ ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಓರ್ವ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಸ್‌ಡಿಪಿಐ ಕಚೇರಿ ಹಾಗೂ ಸಂಘಟನೆಯ ಕಾರ್ಯಕರ್ತನೊಬ್ಬನ ಮನೆಯ ಮೇಲೆ ದಾಳಿ ನಡೆಸಿ, ಪಿಎಫ್‌ಐ ಸಂಘಟನೆಗೆ ಸೇರಿದ ಕೆಲವು ದಾಖಲೆಗಳನ್ನು ಪೊಲೀಸರು ಪತ್ತೆ ಮಾಡಿರುವುದು ಸಾಕಷ್ಟುಕುತೂಹಲಕ್ಕೂ ಕಾರಣವಾಗಿದೆ. ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ

ದಾಖಲೆಗಳು ಪತ್ತೆ, ಪರಿಶೀಲನೆ

ಎಸ್‌ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತ, ನಗರ ಸಮಿತಿ ಸದಸ್ಯನೂ ಆದ ಮೆಹಬೂಬ್‌ ಸುಬಾನಿ ಮನೆಯಲ್ಲೂ ತೀವ್ರ ತಪಾಸಣೆ ನಡೆಸಿದ ಪೊಲೀಸರು ಪಿಎಫ್‌ಐಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದರು. ಇದೇ ಮೆಹಬೂಬ್‌ ಸುಬಾನಿ ಹಿಂದೆ ಪಿಎಫ್‌ಐ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಪರಿಶೀಲನೆ ವೇಳೆ ಪತ್ತೆಯಾಗಿವೆ.

Follow Us:
Download App:
  • android
  • ios