ಮಂಗಳೂರು(ನ.20): ಪುತ್ತೂರಿನಲ್ಲಿ ನಡೆದ ಜೋಡಿ ಕೊಲೆಯ ಆರೋಪಿಯನ್ನು ಪೊಲೀಸರು 24 ಗಂಟೆಗಳೊಳಗಾಗಿ ಬಂಧಿಸಿದ್ದಾರೆ. ಕಳ್ಳತನ ಮಾಡಲು ಬಂದು, ಪರಿಚಿತನಾದ ಕಾರಣ ಸಿಕ್ಕಿ ಬೀಳುವ ಭಯದಿಂದ ಇಬ್ಬರನ್ನು ಕೊಂದು ಪರಾರಿಯಾಗಿದ್ದವನನ್ನು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪುತ್ತೂರಿನ ಕುರಿಯ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣ ನಡೆದಿದೆ. ಕೊಲೆ ನಡೆದ 24 ಗಂಟೆಯೊಳಗೆ ಕೊಲೆ ಆರೋಪಿಯನ್ನು ಪೊಲೀಸರು  ಬಂಧಿಸಿದ್ದಾರೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಗ್ರಾಮದಲ್ಲಿ ಕೊಲೆ ನಡೆದಿದೆ.

ತಾರಸಿಯಲ್ಲಿ ಪ್ಲಾಸ್ಟಿಕ್ ಟ್ರೇನಲ್ಲೇ ಗಂಧಸಾಲೆ ಭತ್ತ ಬೆಳೆದ ಕೃಷಿ ಪ್ರೇಮಿ ಕೃಷ್ಣಪ್ಪ ಗೌಡ್ರು!

ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (29) ಬಂಧಿತ ಆರೋಪಿ. ಮನೆ ಯಜಮಾನ ಶೇಕ್ ಕೊಗ್ಗು ಸಾಹೇಬ್ (70) ಮತ್ತು‌ ಮೊಮ್ಮಗಳು ಶಾಮಿಯಾ ಭಾನು(16) ಅವರನ್ನು ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಕೊಗ್ಗು ಸಾಹೇಬ್ ಪತ್ನಿ ಖತೀಜಾಬಿ(65) ಗಂಭೀರವಾಗಿ ಗಾಯಗೊಂಡಿದ್ದರು.

ಕರೀಂ ಖಾನ್ ಕಳ್ಳತನಕ್ಕೆ ಮನೆಯ ಒಳನುಗ್ಗಿದ್ದ ವೇಳೆ ಮನೆಯವರು ಎಚ್ಚರಗೊಂಡಿದ್ದರು. ಪರಿಚಿತನಾಗಿರುವ ಕಾರಣ ಸಿಕ್ಕಿಹಾಕಿಕೊಳ್ಳುವ ಭಯದಿಂದ ಕರೀಂ ಖಾನ್ ಕೊಲೆ ಮಾಡಿದ್ದಾನೆ. ಬಳಿಕ 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ. ಘಟನೆ ನಡೆದು 24 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು: ಹಾಡು ಹಾಡಲೂ ರಮಾನಾಥ ರೈ ಸೈ..!