ಮಂಗಳೂರು(ನ.19): ಮಾಜಿ ಸಚಿವ ರಮಾನಾಥ ರೈ ಇದೀಗ ಸ್ವತಃ ಹಾಡು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಮಹಾನಗರ ಪಾಲಿಕೆಯ ಪೋರ್ಟ್‌ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಲತೀಫ್‌ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ವಾರ್ಡ್‌ ನಾಗರಿಕರಿಂದ ಭಾನುವಾರ ಸಂಜೆ ಅವರಿಗೆ ಅಭಿನಂದನಾ ಸಮಾರಂಭವನ್ನು ರೊಸಾರಿಯೊ ಚಚ್‌ರ್‍ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು.ಅಭಿನಂದನೆ ಸಮಾರಂಭದ ಬಳಿಕ ಸ್ವತಃ ರಮಾನಾಥ ರೈ ವೇದಿಕೆಯಲ್ಲಿ ನಿಂತು ಹಳೆಯ ಚಿತ್ರಗೀತೆ ಹಾಡಿದ್ದಾರೆ.

ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!

ಸಮಾರಂಭದಲ್ಲಿ ಗಾಯಕ ಮಹಮ್ಮದ್‌ ಹನೀಫ್‌ ಗೀತೆಗಳನ್ನು ಹಾಡುತ್ತಿದ್ದರು. ಈ ವೇಳೆ ರಮಾನಾಥ ರೈ ಅವರು ಮಹಮ್ಮದ್‌ ರಫಿಯ ಹಳೆಯ 2 ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಪ್ರೇಕ್ಷಕರು ಚಪ್ಪಾಳೆ ತಟ್ಟಿಹುರಿದುಂಬಿಸಿದ್ದಾರೆ. ರೈ ಅವರ ಹಾಡಿನ ವಿಡಿಯೊ ಈಗ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ