ಮಂಗಳೂರು(ಜು.08): ಮುಂಗಡ ಟಿಕೆಟ್ ಕಾಯ್ದಿರಿಸಿ ತಿರುಪತಿಗೆ ಹೊರಟಿದ್ದ ದಂಪತಿಗೆ ಬೇರೆ ಬೇರೆ ಸೀಟ್ ನೀಡಿದ ಕಾರಣಕ್ಕೆ ಪ್ರಯಾಣಿಕ ಬಸ್ ಏಜೆಂಟ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಮೊಲದೇ ಹಣ ಕೊಟ್ಟು ಸೀಟ್ ಬುಕ್ ಮಾಡಿದ್ದರೂ, ಸೀಟು ಬದಲಾಯಿಸಿ ನೀಡಿರುವ ಬಸ್ ಏಜೆನ್ಸಿ, ಏಜೆಂಟ್ ವಿರುದ್ಧ ಸೇವಾ ಲೋಪಕ್ಕಾಗಿ ಪುತ್ತೂರಿನ ಪ್ರಯಾಣಿಕರೊಬ್ಬರು ಮೊಕದ್ದಮೆ ಹೂಡಿದ್ದಾರೆ. ಈ ತೀರ್ಥ ಯಾತ್ರೆ ಸಂದರ್ಭ ಪ್ರಯಾಣದಲ್ಲಿ ಅವರಿಗಾದ ತೊಂದರೆಗಾಗಿ ಪೂರ್ತಿ ಟಿಕೆಟ್ ಹಣ ಅವರಿಗೆ ಮರಳಿ ಸಿಕ್ಕಿದ್ದು,, ಪರಿಹಾರವಾಗಿ 15 ಸಾವಿರ ರೂಪಾಯಿ ಸಿಕ್ಕಿದೆ.

ಪ್ಯಾರೀಸ್‌ನಲ್ಲಿ ತೇಲುವ ಥಿಯೇಟರ್..! ತೇಲುವ ಬೋಟ್‌ನಲ್ಲಿ ವೀಕ್ಷಕರು

ದೀಪಕ್ ಸೀತಾರಾಮನ್ ಹಾಗೂ ಅವರ ಪತ್ನಿ ದಿವ್ಯ ದೀಪಕ್ ಮಂಗಳೂರಿನ ಹೆಗ್ಡೆ ಟ್ರಾವೆಲ್ಸ್ ಮೂಲಕ ಬಸ್ ಹಾಗೂ ಉಳಿಯುವ ಕೊಠಡಿಯನ್ನೂ ಬುಕ್ ಮಾಡಿದ್ದರು. ಮೇ 1, 2019ರಂದು 7 ಸಾವಿರ ರೂಪಾಯಿಯನ್ನು ಪಾವತಿಸಿದ್ದರು.

ಅಶೋಕ ಟ್ರಾವೆಲ್ಸ್‌ನಲ್ಲಿ ಮೇ 19ರ ಪ್ರಯಾಣಕ್ಕೆ ತಮಗೆ ಹಾಗೂ ತಮ್ಮ ಪತ್ನಿಗಾಗಿ 11, 12 ಸೀಟು ಆರಿಸಿಕೊಂಡಿದ್ದರು. ಆದರೆ ಬಸ್ ಹತ್ತಿದಾಗ ಸೀಟಲ್ಲಿ ಬೇರೆ ಪ್ರಯಾಣಿಕರು ಕುಳಿತಿದ್ದರು. ಕಂಡಕ್ಟರ್ ಅವರನ್ನು 15, 16ನೇ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದರು. ಸಕಲೇಶಪುರ ತಲುಪುವಾಗ ಅವರು ಬುಕ್ ಮಾಡಿದ ಸೀಟು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ನಂತರದಲ್ಲಿ ಯಾವ ಬದಲಾವಣೆಯನ್ನೂ ಮಾಡಿರಲಿಲ್ಲ.

194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ನಿರ್ಧಾರ!

2019 ಅಕಟ್ಓಬರ್ 31ರಂದು ದೀಪಕ್ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆಗೆ ತಮ್ಮ ಹಣ ಮರಳಿಸುವಂತೆ ದೂರು ನೀಡಿದ್ದರು. ದೀಪಕ್ ವಕೀಲರೊಬ್ಬರ ಮೂಲಕ ಮೊಕದ್ದಮೆ ದಾಖಲಿಸಿ ಮೂರು ಬಾರಿ ನೋಟಿಸ್ ಕಳುಹಿಸಿದರೂ, ಏಜೆನ್ಸಿಯವರು ಉತ್ತರಿಸಿರಲಿಲ್ಲ.

ಕಾಯ್ದಿರಿಸಿದ ಸೀಟುಗಳನ್ನು ಬದಲಾಯಿಸುವುದು ತಪ್ಪು ಎಂದು ಎರಡೂ ಏಜೆನ್ಸಿಗಳೂ ಹಣ ಹಿಂದಿರುಗಿಸುವಂತೆ ಸೂಚಿಸಲಾಗಿದೆ. 10 ಸಾವಿರ ಪರಿಹಾರ ಹಾಗೂ ಕೋರ್ಟ್ ಖರ್ಚಿಗಾಗಿ 5 ಸಾವಿರ ನೀಡಲು ತಿಳಿಸಲಾಗಿತ್ತು.