Asianet Suvarna News Asianet Suvarna News

194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ನಿರ್ಧಾರ!

194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ಸರ್ಕಾರ ನಿರ್ಧಾರ| ಲೈಟ್‌ಹೌಸ್‌ನ ಶ್ರೀಮಂತ ಇತಿಹಾಸವನ್ನು ಜನರಿಗೆ ತಿಳಿಸಲು ಈ ನಿರ್ಧಾರ| 100ಕ್ಕೂ ಅಧಿಕ ವರ್ಷ ಹಳೆಯದಾದ ಲೈಟ್‌ಹೌಸ್

Around 194 lighthouses across India to be developed as major tourist attractions
Author
Bangalore, First Published Jul 8, 2020, 11:16 AM IST

ನವದೆಹಲಿ(ಜು.08): ದೇಶಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ 194 ಐತಿಹಾಸಿಕ ಲೈಟ್‌ಹೌಸ್‌ಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ನಿರ್ಧರಿಸಿರುವುದಾಗಿ ಹಡಗು ಸಚಿವಾಲಯ ಮಂಗಳವಾರ ತಿಳಿಸಿದೆ.

ಹಂಪಿ ಸೇರಿ ಪ್ರಮುಖ ಐತಿಹಾಸಿಕ ತಾಣಗಳೀಗ ಪ್ರವಾಸಿಗರಿಗೆ ಮುಕ್ತ!

ಈ ಸಂಬಂಧ ಕೇಂದ್ರ ಹಡಗು ಸಚಿವ ಮನ್ಸುಖ್‌ ಮಾಂಡವಿಯಾ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಲೈಟ್‌ಹೌಸ್‌ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮತ್ತು ಲೈಟ್‌ಹೌಸ್‌ನ ಶ್ರೀಮಂತ ಇತಿಹಾಸವನ್ನು ಜನರಿಗೆ ತಿಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ 100ಕ್ಕೂ ಅಧಿಕ ವರ್ಷ ಹಳೆಯದಾದ ಲೈಟ್‌ಹೌಸ್‌ಗಳನ್ನು ಗುರುತಿಸಲಾಗುತ್ತಿದೆ ಎಂದಿದ್ದಾರೆ.

ಕೊರೋನಾ ಭೀತಿ: ಪ್ರವಾಸಿಗರು ಬಾರದಂತೆ ಬಸ್‌ ತಡೆದ ಗ್ರಾಮಸ್ಥರು

ಅಲ್ಲದೇ ಯೋಜನೆಯ ಪ್ರಕಾರ ಲೈಟ್‌ಹೌಸ್‌ ಅನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸಿಸಲು ಮ್ಯೂಸಿಯಂ, ಅಕ್ವೇರಿಯಂ, ಮಕ್ಕಳಿಗಾಗಿ ವಿವಿಧ ಆಟ ಮತ್ತು ಗಾರ್ಡನ್‌ ನಿರ್ಮಿಸಿ ಜನರನ್ನು ಆಕರ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios