Youth Suicide | ನಿಶ್ಚಿತಾರ್ಥವಾಗಲಿದ್ದ ಯುವಕನ ಮನೆಗೆ ಬೇರೆ ಯುವತಿ ದಿಬ್ಬಣ : ಯುವಕ ಆತ್ಮಹತ್ಯೆ

  • ಕೆಲವೇ ದಿನಗಳಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದ್ದ ಯುವಕ ಆತ್ಮಹತ್ಯೆ
  • ಮದುವೆಯಾಗಲೆಂದು ಬೇರೊಂದು ಹುಡುಗಿ ಮನೆಯವರು ದಿಡೀರ್‌ ದಿಬ್ಬಣ ಸಮೇತರಾಗಿ ಬಂದಿದ್ದಕ್ಕೆ ಆತ್ಮಹತ್ಯೆ
Puttur Man Commits Suicide Ahead of Engagement snr

ಪುತ್ತೂರು (ನ.23) : ಕೆಲವೇ ದಿನಗಳಲ್ಲಿ ವಿವಾಹ (Marriage) ನಿಶ್ಚಿತಾರ್ಥ (Engagement) ನಡೆಯಲಿದ್ದ ಯುವಕನೋರ್ವನನ್ನು ಮದುವೆಯಾಗಲೆಂದು ಬೇರೊಂದು ಹುಡುಗಿ (Girl) ಮನೆಯವರು ದಿಡೀರ್‌ ದಿಬ್ಬಣ ಸಮೇತರಾಗಿ ಬಂದಿದ್ದು,  ಈ ವೇಳೆ ಮನೆಯಿಂದ ನಾಪತ್ತೆಯಾದ ಯುವಕ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈ  ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು (Puttur) ತಾಲೂಕಿನ ನಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ಕರೆಂಟಿಯಡ್ಕ ಎಂಬಲ್ಲಿ ಭಾನುವಾರ ನಡೆದಿದೆ.  ನಿಶ್ಚಿತಾರ್ಥವಾಗಬೇಕಿದ್ದ ಯುವಕ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತನ್ನ ನಿಶ್ಚಿತಾರ್ಥದ ಸಂಭ್ರಮಕ್ಕೆ ಎಂದು ಊರಿಗೆ ಆಗಮಿಸಿದ್ದವನು ಇದೀಗ ಸಾವನ್ನಪ್ಪಿದ್ದಾನೆ. 

ಪುತ್ತೂರು ತಾಲೂಕಿನ ಸುಳ್ಯ ಪದವು ಶಬರಿ ನಗರ ಎಂಬಲ್ಲಿನ ನಿವಾಸಿ ರವಿರಾಜ್‌ ಪೂಜಾರಿ(31) ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ (Bengaluru) ಉದ್ಯೋಗದಲ್ಲಿದ್ದ (Job) ರವಿರಾಜ್‌ ಅವರಿಗೆ ಮದುವೆ ಮಾಡಲು ಕುಟುಂಬಸ್ಥರು (Family) ನಿರ್ಧರಿಸಿದ್ದು, ವಿಟ್ಲ ಸಮೀಪದಲ್ಲಿ ಹುಡುಗಿಯನ್ನು ನೋಡಿಟ್ಟಿದ್ದರು. ಅಲ್ಲದೆ ನ.25ರಂದು ವಿವಾಹ ನಿಶ್ಚಿತಾರ್ಥ ದಿನ ನಿಗದಿಯಾಗಿತ್ತು. ನಿಶ್ಚಿತಾರ್ಥಕ್ಕಾಗಿ ರವಿರಾಜ್‌ ಬೆಂಗಳೂರಿನಿಂದ ನ. 19ರಂದು ಊರಿಗೆ ಆಗಮಿಸಿದ್ದರು. ಅಲ್ಲದೆ ಉಂಗುರವನ್ನೂ (Ring) ಖರೀದಿಸಲಾಗಿತ್ತು. ನ.20ರಂದು ಮನೆಯವರಿಗೆ ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ನಾಳೆ ಸಂಜೆ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಅಂದು ರಾತ್ರಿ ತನ್ನ ಮನೆಗೆ ಕರೆ (Call) ಮಾಡಿ, ಮಳೆ ಬರುತ್ತಿದೆ ನಾನು ನಾಳೆ ಬರುತ್ತೇನೆ ಎಂದಿದ್ದರು.

ಈ ನಡುವೆ ಭಾನುವಾರ ರವಿರಾಜ್‌ ಅವರನ್ನು ವಿವಾಹವಾಗಲೆಂದು ಕುಂದಾಪುರದಿಂದ (Kundapur) ಬೇರೊಂದು ಹುಡುಗಿಯ ದಿಬ್ಬಣ ದಿಢೀರ್‌ ಆಗಮಿಸಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಕುಟುಂಬಸ್ಥರು ರವಿರಾಜ್‌ಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ಕರೆಂಟಿಯಡ್ಕ ಎಂಬಲ್ಲಿ ತನ್ನ ಸಹೋದರ ನಿರ್ಮಿಸಿದ್ದ ಇನ್ನೂ ಗೃಹಪ್ರವೇಶ ನಡೆಯದ ನೂತನ ಮನೆಯ ಬಚ್ಚಲು ಕೋಣೆಯಲ್ಲಿ ವೆಂಟಿಲೇಟರ್‌ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ರವಿರಾಜ್‌ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರದಿಂದ ಬಂದಿದ್ದ ಮದುವೆ ದಿಬ್ಬಣ ಹಿಂದಿರುಗಿ ಹೋಗಿದೆ. ಮೃತರ ತಂದೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲಿ ಕೇಸು ದಾಖಲಾಗಿದೆ. ಪೊಲೀಸರು (Police) ತನಿಖೆ ನಡೆಸುತ್ತಿದ್ದಾರೆ.

ಮೃತರು ತಂದೆ, ತಾಯಿ ಓರ್ವ ಸಹೋದರನನ್ನು ಅಗಲಿದ್ದಾರೆ.

ಕಿರುಕುಳ - ವಿದ್ಯಾರ್ಥಿನಿ ನೇಣಿಗೆ ಶರಣು :  

ಇದು ನಿಜಕ್ಕೂ ಒಂದು ಆಘಾತಕಾರಿ (Coimbatore)  ಪ್ರಕರಣ.  ತನ್ನ ಶಾಲೆಯ ಶಿಕ್ಷಕರೊಬ್ಬರಿಂದ ನಿರಂತರ ದೌರ್ಜನ್ಯವಾಗುತ್ತಿದ್ದ ಕಾರಣ 17  ವರ್ಷದ ಬಾಲಕಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 

ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತನ್ನ ಶಿಕ್ಷಕ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ (Sexual Harassment) ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ತನ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾಳೆ.  ಆಕೆಯ ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಪೋಷಕರು ನೇರವಾಗಿ ಆರೋಪಿಸಿದ್ದಾರೆ. ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಸಹ ನಡೆದಿದೆ.

ಆರ್ ಎಸ್ ಪುರಮ್ ನ ಶಾಲೆಯಲ್ಲಿ ವಿದ್ಯಾರ್ಥಿನಿ ಸೆಕೆಂಡ್ ಪಿಯು  ವ್ಯಾಸಂಗ ಮಾಡುತ್ತಿದ್ದರು. ಈಕೆಗೆ ಭೌತಶಾಸ್ತ್ರ ಕಲಿಸುತ್ತಿದ್ದ ಕೆ.ಮಿಥುನ್ ಚಕ್ರವರ್ತಿ (31) ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಿಕ್ಷಕನ ಕಿರುಕುಳ ತಾಳಲಾರದೇ ಉಕ್ಕಡಮ್ ನಲ್ಲಿನ ತನ್ನ ನಿವಾಸದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ .

 ಆರೋಪಿ ಚಕ್ರವರ್ತಿ ತನ್ನ ವಿದ್ಯಾರ್ಥಿನಿ ಮೇಲೆ ಮಾರ್ಚ್ ನಲ್ಲಿ ನಡೆದ ವಿಶೇಷ ತರಗತಿಗಳ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ವಿದ್ಯಾರ್ಥಿನಿ ಶಾಲಾ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದಳು. ಶಾಲಾ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಕ್ರಮವನ್ನೂ ಜರುಗಿಸಿತ್ತು ಎಂದು ಪೊಲೀಸರು  ಹೇಳಿದ್ದರೆ ವಿದ್ಯಾರ್ಥಿನಿಯ ಪೋಷಕರು ತಳ್ಳಿ ಹಾಕಿದ್ದಾರೆ.

Latest Videos
Follow Us:
Download App:
  • android
  • ios