Rajasthan| ಏಳು ದಿನದಲ್ಲಿ ಮದುವೆ, ರೇಪ್ ಮಾಡಲಾಗಲಿಲ್ಲ ಎಂದು ಯುವತಿ ಕಣ್ಣನ್ನೇ ಕಿತ್ತ!
* ರಾಜಸ್ಥಾನದ ಅಲ್ವಾರ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಲು ಯತ್ನ
* ಅತ್ಯಾಚಾರಗೈಯ್ಯಲು ವಿಫಲನಾದಾಗ ಕಣ್ಣನ್ನೇ ಕಿತ್ತ
* ಏಳು ದಿನದಲ್ಲಿ ಹಸೆಮಣೆ ಏರಬೇಕಾದವಳು ಈಗ ಆಸ್ಪತ್ರೆಯಲ್ಲಿ
ಜೈಪುರ(ನ.21): ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಲು ವಿಫಲನಾದ ಯುವಕ ಆಕೆಯ ಕಣ್ಣು ಕಿತ್ತು ಹಾಕಿದ್ದಾನೆ. ಈ ವಿಷಯ ತಿಳಿದ ಮನೆಯವರು ಯುವತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ದಿದ್ದಾರೆ. ಆದರೆ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆ ಆಸ್ಪತ್ರೆ ವೈದ್ಯರರು ಆಕೆಯನ್ನು ಜೈಪುರಕ್ಕೆ ಕಳುಹಿಸಿದ್ದಾರೆ. ಯುವತಿಯನ್ನು ತಪಾಸಣೆಗೈದ ವೈದ್ಯರು ಆಕೆ ದೃಷ್ಟಿ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಬಾಲಕಿಯ ತಂದೆ ಏಳು ದಿನಗಳ ಹಿಂದೆ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಒಂದು ವಾರದ ನಂತರ ಯುವತಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಪೊಲೀಸರ ವಿರುದ್ಧವೂ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ದೂರು ನೀಡಿದರೂ ತಮ್ಮ ದೂರು ಆಲಿಸಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಹಲವು ಬಾರಿ ಅತ್ಯಾಚಾರ ಎಸಗಿದ್ದ
ಆರೋಪಿ ಹರಿ ಓಂಗೆ 21 ವರ್ಷ ವಯಸ್ಸಾಗಿದ್ದು, ಹರಿಯಾಣ (Haryana)ನಿವಾಸಿ ಎಂದು ಯುವತಿಯ ಕುಟುಂಬಸ್ಥರು ತಿಳಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಪಲ್ವಾಲ್‌ನಿಂದ ಬರುತ್ತಿದ್ದಾಗ ಬಸ್‌ನಲ್ಲಿ ಬಾಲಕಿಯನ್ನು ಭೇಟಿಯಾಗಿದ್ದ. ಸಂಭಾಷಣೆಯ ಸಮಯದಲ್ಲಿ ಮೊಬೈಲ್ (Mobile) ಸಂಖ್ಯೆಯನ್ನು ತೆಗೆದುಕೊಳ್ಳಲಾಗಿದೆ. ಅದರ ನಂತರ ಅವನು ಹುಡುಗಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದನು. ಒಮ್ಮೆ ಅವನು ಯಾವುದೋ ನೆಪದಲ್ಲಿ ಯುವತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಹೊರಗಡೆ ಹೊಟೇಲ್‌ನಲ್ಲಿ ಅಮಲು ಪದಾರ್ಥ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ವಿಡಿಯೋ ಕೂಡ ಮಾಡಿದ್ದ. ಇದಾದ ಬಳಿಕ ಮತ್ತೆ ಮತ್ತೆ ತನ್ನ ಜೊತೆ ಬರುವಂತೆ ಪೀಡಿಸುತ್ತಿದ್ದ. ಬಾಲಕಿಯ ಮೇಲೆ ಒತ್ತಡ ಹೇರುತ್ತಿದ್ದ. ಹುಡುಗಿ ನಿರಾಕರಿಸಿದರೆ, ಆಕೆಯ ಕಿರಿಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಅಲ್ಲದೇ ಅಶ್ಲೀಲ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದೂ ಆರೋಪಿಸಲಾಗಿದೆ.
ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
ಕುಟುಂಬದವರ ಪ್ರಕಾರ, ಆರೋಪಿ ಯುವಕ, ಯುವತಿ ಮೇಲೆ ನಡೆಸಿದ್ದ ಅತ್ಯಾಚಾರದ ಅಶ್ಲೀಲ ವೀಡಿಯೊವನ್ನು ಮೊಬೈಲ್‌ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹುಡುಗಿ ತನ್ನ ಜೊತೆ ಬರದಿದ್ದರೆ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆಯ ಕುಟುಂಬಕ್ಕೆ ಈ ವಿಷಯ ತಿಳಿದಾಗ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊದಲ ಬಾರಿಗೆ ದೂರು ನೀಡಲು ನೌಗಾವಾ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಪ್ರಕರಣ ದಾಖಲಿಸಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದಾದ ನಂತರ ಇಸ್ತಗಾಸಾ ಮೂಲಕ ವರದಿ ಸಲ್ಲಿಸಿದ್ದರೆನ್ನಲಾಗಿದೆ. ಕುಟುಂಬಸ್ಥರು ಪೊಲೀಸ್ ವರಿಷ್ಠಾಧಿಕಾರಿಗಳನ್ನೂ ಭೇಟಿ ಮಾಡಿದ್ದಾರೆ.