ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಬ್ಲಿಕ್‌ ಸ್ಟೋರ್‌, ಫ್ರಿಡ್ಜ್‌ ಮಾಯ..!

*  ಪಬ್ಲಿಕ್‌ ಸ್ಟೋರೂ ಇಲ್ಲ; ಪಬ್ಲಿಕ್‌ ಫ್ರಿಡ್ಜ್‌ ಇಲ್ಲ
*  ಕೋವಿಡ್‌ನಿಂದಾಗಿ ಉಪಯೋಗವಿರದ ಹಿನ್ನೆಲೆಯಲ್ಲಿ ತೆರವು
*  ಪಬ್ಲಿಕ್‌ ಫ್ರಿಡ್ಜ್‌ ಇಟ್ಟ ಮೇಲೆ ಸಂತಸಪಟ್ಟಿದ್ದ ಬಡವರು, ಭಿಕ್ಷುಕರು 
 

Public Store, Fridge Cleared in Hubballi Railway Station grg

ಹುಬ್ಬಳ್ಳಿ(ನ.04):  ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನೈರುತ್ಯ ರೈಲ್ವೆ(North Western Railway) ವಲಯದ ಹಿಂದೆ ಮಹಾಪ್ರಬಂಧಕರಾಗಿದ್ದ ಎ.ಕೆ. ಸಿಂಗ್‌ ತಮ್ಮ ಅಧಿಕಾರವಧಿಯಲ್ಲಿ ಅಳವಡಿಸಿದ್ದ ಪಬ್ಲಿಕ್‌ ಸ್ಟೋರ್‌ ಹಾಗೂ ಪಬ್ಲಿಕ್‌ ಫ್ರಿಡ್ಜ್‌ ಎರಡೂ ಮಾಯವಾಗಿವೆ. ಇದು ಸಾರ್ವಜನಿಕ ವಲಯದಲ್ಲಿ ಬೇಸರವನ್ನುಂಟು ಮಾಡಿದೆ.

ಯಾರೂ ಹಸಿವಿನಿಂದ ಇರಬಾರದೆಂದು ರೈಲ್ವೆ ನಿಲ್ದಾಣದಲ್ಲಿ ಪಬ್ಲಿಕ್‌ ಫ್ರಿಡ್ಜ್‌(Public Fridge) ಮಾಡಲಾಗಿತ್ತು. ಇದರಲ್ಲಿ ಸಾರ್ವಜನಿಕರು ತಿನ್ನುವ ಪದಾರ್ಥಗಳನ್ನು ಇಡಬಹುದಿತ್ತು. ಹಣ್ಣು-ಹಂಪಲು, ತಿಂಡಿ ಹೀಗೆ ತಮಗೆ ಏನು ಬೇಕಾದರೂ ಇದರಲ್ಲಿ ಇಡಬಹುದಿತ್ತು. ಅದನ್ನು ಬೇಕಾದವರು ತೆಗೆದುಕೊಂಡು ತಿನ್ನಬಹುದಾಗಿತ್ತು. ಪರಸ್ಥಳದಿಂದ ಬರುವ ಪ್ರಯಾಣಿಕರು ಕೆಲವೊಮ್ಮೆ ತಡರಾತ್ರಿ ಹುಬ್ಬಳ್ಳಿಗೆ(Hubballi) ಬಂದಿಳಿದರೆ ಯಾವ ಹೋಟೆಲ್‌(Hotel) ಕೂಡ ತೆರೆದಿರುವುದಿಲ್ಲ. ಅಂಥ ಸಮಯದಲ್ಲಿ ಈ ಫ್ರಿಡ್ಜ್‌ನಲ್ಲಿನ(Fridge) ತಿಂಡಿ ಪದಾರ್ಥಗಳನ್ನು ಸೇವಿಸಬಹುದಿತ್ತು. ಇನ್ನೂ ಕೆಲ ಭಿಕ್ಷುಕರು(Beggers) ಇದನ್ನು ಸ್ವೀಕರಿಸುತ್ತಿದ್ದರು. ಇದರಿಂದಾಗಿ ಒಂದು ರೀತಿಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿನ(Hubballi Railway Station0 ಪಬ್ಲಿಕ್‌ ಫ್ರಿಡ್ಜ್‌ ಧರ್ಮ ಛತ್ರದಂತಾಗಿತ್ತು. ಪಬ್ಲಿಕ್‌ ಫ್ರಿಡ್ಜ್‌ ಇಟ್ಟ ಮೇಲೆ ಬಡವರು, ಭಿಕ್ಷುಕರಿಗೆ ಸಂತಸವುಂಟಾಗಿತ್ತು.

ಹುಬ್ಬಳ್ಳಿ: ನೈರುತ್ಯ ರೈಲ್ವೆ: ಜೆಎಸ್‌ಡಬ್ಲು ಜತೆ ಒಪ್ಪಂದ

ಇನ್ನೂ ಪಬ್ಲಿಕ್‌ ಸ್ಟೋರ್‌(Public Store) ಕೂಡ ಇದೇ ರೀತಿ ಕೆಲಸ ಮಾಡುತ್ತಿತ್ತು. ಸಾರ್ವಜನಿಕರು, ದಾನಿಗಳು ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿಡಬಹುದಾಗಿತ್ತು. ಚಪ್ಪಲಿ, ಬಟ್ಟೆ, ಹಾಸಿಗೆ ಸೇರಿದಂತೆ ವಿವಿಧ ವಸ್ತುಗಳನ್ನು ಇಲ್ಲಿಡುತ್ತಿದ್ದರು. ಸೋಪು, ಬ್ರಶ್, ಪೇಸ್ಟ್‌ ಕೂಡ ಇಲ್ಲಿ ಕೆಲವರು ಇಟ್ಟಿದ್ದುಂಟು. ಅವುಗಳ ಅಗತ್ಯವುಳ್ಳವರು ತೆಗೆದುಕೊಂಡು ಉಪಯೋಗಿಸುತ್ತಿದ್ದರು. ಇದು ಒಂದು ರೀತಿಯಲ್ಲಿ ಪ್ರಯಾಣಿಕರಿಗೆ(Passengers) ಅನುಕೂಲವನ್ನುಂಟು ಮಾಡಿತ್ತು.

ನಾಪತ್ತೆ: ಕಾರಣವೇನು?

ಕಳೆದ ಕೆಲ ದಿನಗಳ ಹಿಂದೆ ಇವುಗಳನ್ನು ತೆರವುಗೊಳಿಸಲಾಗಿದ್ದು, ಎರಡೂ ಇದೀಗ ಮಾಯವಾಗಿವೆ. ಈ ಬಗ್ಗೆ ಸಾರ್ವಜನಿಕರು ರೈಲ್ವೆ ಇಲಾಖೆ ಅಧಿಕಾರಿಗಳಿಗೂ ಪ್ರಶ್ನೆ ಕೇಳಿದ್ದುಂಟು. ಆದರೆ, ಇದನ್ನು ತೆರವುಗೊಳಿಸಿದ್ದಕ್ಕೆ ರೈಲ್ವೆ ಇಲಾಖೆ, ಕೋವಿಡ್‌ನಿಂದಾಗಿ(Covid19) ಹೆಚ್ಚಿನ ಬಳಕೆಯಾಗಿರಲಿಲ್ಲ. ಜತೆಗೆ ಇದರ ದುರುಪಯೋಗ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ಇವುಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಇವುಗಳಿಂದ ಬಡವರಿಗೆ ಬಹಳಷ್ಟು ಅನುಕೂಲವಾಗಿತ್ತು. ಆದಕಾರಣ ಇವು ಇದ್ದಿದ್ದರೆ ಅನುಕೂಲವಾಗುತ್ತಿತ್ತು. ಮತ್ತೆ ಇದನ್ನು ಅಳವಡಿಸಬೇಕೆಂಬ ಬೇಡಿಕೆ ಸಾರ್ವಜನಿಕರದ್ದು.

ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್‌ ಕೊಡುಗೆ..!

ಹೌದು ಪಬ್ಲಿಕ್‌ ಸ್ಟೋರ್‌ ಹಾಗೂ ಪಬ್ಲಿಕ್‌ ಫ್ರಿಡ್ಜ್‌ನ್ನು ತೆರವುಗೊಳಿಸಲಾಗಿದೆ. ಇದು ದುರುಪಯೋಗವಾಗುತ್ತಿತ್ತು ಎಂಬ ದೂರುಗಳು ಬಂದಿದ್ದವು. ಜತೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಹೆಚ್ಚು ಬಳಕೆಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸಲಾಗಿದೆ. ಮತ್ತೆ ಅಳವಡಿಸುವ ಬೇಡಿಕೆ ಬಂದರೆ ಪರಿಶೀಲಿಸಲಾಗುವುದು ಎಂದು ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.  

ಪಬ್ಲಿಕ್‌ ಸ್ಟೋರ್‌ ಹಾಗೂ ಪಬ್ಲಿಕ್‌ ಫ್ರಿಡ್ಜ್‌ ಬಹಳಷ್ಟು ಉಪಯೋಗವಾಗಿತ್ತು. ಬಡವರು, ಭಿಕ್ಷುಕರಿಗೆ ಸಲೀಸಾಗಿ ಫ್ರಿಡ್ಜ್‌ನೊಳಗಿನ ತಿಂಡಿ ಪದಾರ್ಥಗಳು ಲಭ್ಯವಾಗುತ್ತಿದ್ದವು. ಆದಕಾರಣ ಅದನ್ನು ಮತ್ತೆ ಅಳವಡಿಸುವುದು ಸೂಕ್ತ ಅಂತ ಸಾರ್ವಜನಿಕ ನಾರಾಯಣ ದೀಕ್ಷಿತ ಎಂಬುವರು ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios