ಹುಬ್ಬಳ್ಳಿ: ನೈರುತ್ಯ ರೈಲ್ವೆ: ಜೆಎಸ್‌ಡಬ್ಲು ಜತೆ ಒಪ್ಪಂದ

*  ಎಚ್‌ಆರ್‌/ಸಿಆರ್‌ಸ್ಟೀಲ್‌ ಲೋಡ್‌ಗೆ ಪ್ರತ್ಯೇಕ ರೇಕ್‌ ವ್ಯವಸ್ಥೆ
*  BFNV ವ್ಯಾಗನ್‌ಗಳ ಪ್ರತಿ ಲೋಡ್‌ಗೆ 20 ವರ್ಷಗಳ ಅವಧಿಗೆ ಶೇ.12 ಸರಕು ರಿಯಾಯಿತಿ
*  ಪ್ರತಿಯೊಂದು ರೇಕ್‌ 3973 ಟನ್‌ ಸಾಗಿಸಬಲ್ಲ ಸಾಮರ್ಥ್ಯ ಹೊಂದಿವೆ 

South Western Railway Agreement with JSW Steel Limited grg

ಹುಬ್ಬಳ್ಳಿ(ಅ.14):  ನೈರುತ್ಯ ರೈಲ್ವೆ ಇಲಾಖೆ(South Western Railway) ಮತ್ತು ವಿಜಯನಗರದ(Vijayanagara) ಜೆಎಸ್‌ಡಬ್ಲು ಸ್ಟೀಲ್‌ ಲಿಮಿಟೆಡ್‌(JSW Steel Limited) ಉದಾರೀಕೃತ ವಿಶೇಷ ಸರಕು ಸಾಗಾಣಿಕೆ ವಿಷಯವಾಗಿ ಒಪ್ಪಂದ ಮಾಡಿಕೊಂಡಿದೆ.

ಎಚ್‌ಆರ್‌/ಸಿಆರ್‌ಸ್ಟೀಲ್‌ (ಹಾಟ್‌ ರೋಲ್ಡ್‌/ ಕೋಲ್ಡ್‌ ರೋಲ್ಡ್‌ ) ಲೋಡ್‌ ಮಾಡಲು ವಿವಿಧ ಸರ್ಕ್ಯೂಟ್‌ಗಳಲ್ಲಿ ಬಿಎಫ್‌ಎನ್‌ವಿ (ಬೋಗಿ ವರ್ಸ್‌ಟೈಲ್‌ ಕಾಯಿಲ್‌ ವ್ಯಾಗನ್‌) ರೇಕ್‌ಗಳನ್ನು ಪರಿಚಿಯಿಸಲು ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಬಿಎಫ್‌ಎನ್‌ವಿ ವ್ಯಾಗನ್‌ಗಳ ಪ್ರತಿ ಲೋಡ್‌ಗೆ(Load) 20 ವರ್ಷಗಳ ಅವಧಿಗೆ ಶೇ.12 ಸರಕು ರಿಯಾಯಿತಿ ನೀಡಲಾಗುತ್ತದೆ. ಬಿಎಫ್‌ಎನ್‌ವಿ ವ್ಯಾಗನ್‌ಗಳನ್ನು ರಿಸಚ್‌ರ್‍ ಡಿಸೈನ್‌ ಆ್ಯಂಡ್‌ ಸ್ಟಾಂಡರ್ಡ್‌ ಆರ್ಗನೈಸೇಶನ್‌, ಭಾರತೀಯ ರೈಲ್ವೇಸ್‌(Indian Railways) ಮತ್ತು ಜಿಂದಾಲ್‌ ರೈಲ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌(Jindal Rail Infrastructure Limited) ಜಂಟಿಯಾಗಿ ಈ ವ್ಯಾಗನ್‌ಗಳನ್ನು ವಿನ್ಯಾಸಗೊಳಿಸಿದೆ. ಪ್ರತಿಯೊಂದು ರೇಕ್‌ 3973 ಟನ್‌ ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ವ್ಯಾಗನಗಳನ್ನು ಹೆಚ್ಚಿನ ಸಾಮರ್ಥ್ಯ ಮತ್ತು ಹೆಚ್ಚಿನ ವೇಗಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವಿಶಿಷ್ಟ ವಿನ್ಯಾಸವು ಉಕ್ಕಿನ ಸುರುಳಿಗಳು ಸಾಗಣೆಯ ಸಮಯದಲ್ಲಿ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.

ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್‌ ಕೊಡುಗೆ..!

ರೈಲ್ವೆ ಸಚಿವಾಲಯವು(Ministry of Railways) ಜೆಎಸ್‌ಡಬ್ಲು ಸ್ಟೀಲ್‌ ಲಿಮಿಟೆಡ್‌ನ್ನು ಎಲ್‌ಎಸ್‌ಎಫ್‌ಟಿಒ (ಲಿಬರಲೈಸ್ಡ್‌ ಸ್ಪೆಷಲ್‌ ಫ್ರೈಟ್‌ ಟ್ರೈನ್‌ ಆಪರೇಟರ್‌) ಆಗಿ ನೋಂದಾಯಿಸಲು ಮತ್ತು ಕಾರ್ಯನಿರ್ವಹಿಸಲು 16 ರೇಕ್‌ ಬಿಎಫ್‌ಎನ್‌ವಿ ವ್ಯಾಗನ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ.

South Western Railway Agreement with JSW Steel Limited grg

ಎಲ್‌ಎಸ್‌ಎಫ್‌ಟಿಒ ನೀತಿಯ ಉದ್ದೇಶವೆಂದರೆ ರೈಲು(Railway) ಸಂಚಾರದ ಸರಕುಗಳ ಮೂಲವನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಸಾಮರ್ಥ್ಯದ ಮತ್ತು ವಿಶೇಷ ಉದ್ದೇಶದ ವ್ಯಾಗನ್‌ಗಳ ಸಾಂಪ್ರದಾಯಿಕವಲ್ಲದ ದಟ್ಟಣೆಯ ಸಾಗಣೆಯಲ್ಲಿ ರೈಲ್ವೆಯ ಪಾಲನ್ನು ಹೆಚ್ಚಿಸುವುದು.

ಈ ನೀತಿಯು ಲಾಜಿಸ್ಟಿಕ್‌(Logistic) ಸೇವಾ ಪೂರೈಕೆದಾರರು ಅಥವಾ ತಯಾರಕರಿಗೆ ವ್ಯಾಗನ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ಆಯ್ದ ಸರಕುಗಳ ರೈಲು ಸಾರಿಗೆಯ ಅನುಕೂಲಗಳನ್ನು ಬಳಸಿಕೊಂಡು ಅತ್ಯುತ್ತಮ ಸನ್ನಿವೇಶವನ್ನು ಸೃಷ್ಟಿಸಲು ಅವಕಾಶವನ್ನು ಒದಗಿಸುತ್ತದೆ. ಬಿಎಫ್‌ಎನ್‌ವಿ ವ್ಯಾಗನ್‌ ಪ್ರಥಮ ರೇಕ್‌ ನೈಋುತ್ಯ ರೈಲ್ವೆಗೆ ಬುಧವಾರ ಬಂದಿದ್ದು, ತನ್ನ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧವಾಗಿದೆ. ಜೆಎಸ್‌ಡಬ್ಲು(JSW) ಕಂಪನಿಯೂ ತನ್ನ ಉತ್ಪಾದನೆಯಾದ ಬಳಿಕ ಇದನ್ನು ಬಳಸಿಕೊಳ್ಳಬಹುದಾಗಿದೆ.
 

Latest Videos
Follow Us:
Download App:
  • android
  • ios