ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರ ಆಕ್ರೋಶ.
ಕಲಬುರಗಿ(ಸೆ.17): ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣವಾಗಿದೆ. ಹೌದು, ಕಲಬುರಗಿ ನಗರದ ಹೈಕೋರ್ಟ್ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಲಬುರಗಿ ನಗರದಿಂದ ಅಫಜಲಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ. ಇಂದು(ಭಾನುವಾರ) ನಗರದ ಹೈಕೋರ್ಟ್ ಬಳಿ ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಹೀಗಾಗಿ ದಿಢೀರ್ ಅಂತ ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣ ಮಾಡಲಾಗಿದೆ.
ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಸಿಎಂ ಧ್ವಜಾರೋಹಣ
ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
