ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಸಿಎಂ ಧ್ವಜಾರೋಹಣ
ಇದೇ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹೆಲ್ತ್ ಎಟಿಎಂ ಯೋಜನೆಗೆ ಚಾಲನೆ ನೀಲಿದ್ದಾರೆ. ಬಳಿಕ ಹೈಕೋರ್ಟ್ ಸಮೀಪದ ಶಾಸಕ ಎಂ.ವೈ. ಪಾಟೀಲ್ ಪುತ್ರ ಡಾ. ಸಂಜು ಪಾಟೀಲ್, ಅಂಬಿಕಾ ನಿರ್ಮಿಸಿರುವ ಶಾಂತಾ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ.
ಕಲಬುರಗಿ(ಸೆ.17): ಹೈದರಾಬಾದ್ ಸಂಸ್ಥಾನದಿಂದ ವಿಮೋಚನೆ ಹೊಂದಿರುವ ಕಲ್ಯಾಣ ನಾಡಲ್ಲಿ ಸೆ.17 ಅನ್ನು ವಿಮೋಚನಾ ದಿನಾಚರಣೆಯ ಸಂಭ್ರಮ ಸಡಗರದ ದಿನವಾಗಿ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸಂವಿಧಾನದ ಅನುಚ್ಛೇದ 371 (ಜೆ) ತಿದ್ದುಪಡಿಗೊಂಡು ಅನುಷ್ಠಾನಗೊಂಡಿರುವ ದಶಮಾನೋತ್ಸವ ಕೂಡಾ ಆಚರಿಸುತ್ತಿರುವುದು ವಿಶೇಷ.
ಈ ವಿಶೇಷ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಗೆ ಆಗಮಿಸಲಿದ್ದಾರೆ. ಹೈದ್ರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 8.30ಕ್ಕೆ ಕಲಬುರಗಿಗೆ ಆಗಮಿಸುವ ಅವರು, ನಂತರ ನಗರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲೆ ಹಾಕಿ ಗೌರವ ನಮನ ಸಲ್ಲಿಸುವರು. ಬಳಿಕ ಅಲ್ಲಿಂದ ನೇರವಾಗಿ ಪೊಲೀಸ್ ಪೆರೇಡ್ ಮೈದಾನಕ್ಕೆ ತೆರಳಿ ಜಿಲ್ಲಾಡಳಿತ ಆಯೋಜಿಸಿರುವ ವಿಮೋಚನಾ ದಿನಾಚರಣೆಯ ಮುಖ್ಯ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
3 ಡಿಸಿಎಂ ವರಿಷ್ಠರ ಮಟ್ಟದಲ್ಲಿ ಚರ್ಚೆಗೆ ಬಂದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ತರುವಾಯ ಇದೇ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹೆಲ್ತ್ ಎಟಿಎಂ ಯೋಜನೆಗೆ ಚಾಲನೆ ನೀಲಿದ್ದಾರೆ. ಬಳಿಕ ಹೈಕೋರ್ಟ್ ಸಮೀಪದ ಶಾಸಕ ಎಂ.ವೈ. ಪಾಟೀಲ್ ಪುತ್ರ ಡಾ. ಸಂಜು ಪಾಟೀಲ್, ಅಂಬಿಕಾ ನಿರ್ಮಿಸಿರುವ ಶಾಂತಾ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.